ಆರ್‌ಸಿಬಿ ಚಾಂಪಿಯನ್ ತಂಡದ ಭಾಗವಾಗಿದ್ದ ಟೀಮ್ ಇಂಡಿಯಾ ಆಟಗಾರ್ತಿ ಎಸ್.ಮೇಘನಾ ಕ್ರಿಕೆಟ್‌ಗೆ ವಿದಾಯ
S.Meghana: ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಹಾಗೂ ಡಬ್ಲ್ಯೂಪಿಎಲ್‌ನ ಆರ್‌ಸಿಬಿ ಚಾಂಪಿಯನ್ ತಂಡದ ಭಾಗವಾಗಿದ್ದ ಎಸ್.ಮೇಘನಾ ಅವರು ತಮ್ಮ 30ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಈ ಕ್ರಿಕೆಟರ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತಮ್ಮ ಕ್ರಿಕೆಟ್ ಪಯಣಕ್ಕೆ ಗುಡ್ ಬೈ ಹೇಳುತ್ತಾ ಪೋಸ್ಟ್ ಮಾಡಿರುವ ಮೇಘನಾ ಅವರು, 'ಆಟಗಾರ್ತಿಯಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದಂತೆ ನನ್ನ ಹೃದಯ ಕೃತಜ್ಞತೆಯಿಂದ ತುಂಬಿ ತುಳುಕುತ್ತಿದೆ. ಮೈದಾನವೇ ನನಗೆ ಎರಡನೇ ಮನೆಯಾಗಿತ್ತು. ಅದು ನನಗೆ ಕಷ್ಟಗಳನ್ನು ಎದುರಿಸುವುದು, ವಿನಯತೆ ಹಾಗೂ ಜೀವನಪೂರ್ತಿ ಕೊಂಡೊಯ್ಯುವ ಸವಿನೆನಪು ಮತ್ತು ಆಪ್ತ ಗೆಳೆತನಗಳನ್ನು ನೀಡಿದೆ. ಕ್ರಿಕೆಟ್ ದಿನಗಳು ಮುಗಿದಿರಬಹುದು, ಆದರೆ ಈ ಆಟದೊಂದಿಗಿನ ನನ್ನ ನಂಟು ಎಂದಿಗೂ ಮುರಿಯುವುದಿಲ್ಲ. ಮುಂಬರುವ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಮೂಲಕ ಮರಳಿ ಕೊಡುಗೆ ನೀಡುತ್ತೇನೆ,' ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್ ಪಯಣ ಮತ್ತು ಸಾಧನೆಗಳು
ಮೇಘನಾ ಅವರು 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20ಐ ಪಂದ್ಯ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. 2022ರಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟು, ಆ ಸರಣಿಯಲ್ಲಿ 49 ಮತ್ತು 61 ರನ್‌ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಭಾರತದ ಪರ 17 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಿರುವ ಅವರು ಎರಡೂ ಮಾದರಿಯಲ್ಲೂ ತಲಾ ಒಂದೊಂದು ಅರ್ಧಶತಕ ಸಿಡಿಸಿದ್ದಾರೆ.
ಆರ್‌ಸಿಬಿಯಲ್ಲಿದ್ದ ಮೇಘನಾ..
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್)ನಲ್ಲಿ ಗುಜರಾತ್ ಜೈಂಟ್ಸ್ ಪರ ಆಡಲು ಶುರುಮಾಡಿದ ಮೇಘನಾ, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. 2024ರಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿದಾಗ ತಂಡದಲ್ಲಿದ್ದ ಇವರು, 2025ರ ಆವೃತ್ತಿಯಲ್ಲೂ ಆರ್‌ಸಿಬಿ ಪರ ಕಣಕ್ಕಿಳಿದಿದ್ದರು.
ತಮ್ಮ ಸುದೀರ್ಘ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿರುವ ಮೇಘನಾ, ಮುಂದಿನ ದಿನಗಳಲ್ಲಿ ಹೊಸ ತಲೆಮಾರಿನ ಮಹಿಳಾ ಕ್ರಿಕೆಟಿಗರಿಗೆ ಕೋಚಿಂಗ್ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಕ್ರಿಕೆಟ್ ಜೊತೆಗಿನ ನಂಟನ್ನು ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾರೆ. ವಿಶೇಷತೆ ಏನಂದ್ರೆ ಅವರು ಡಬ್ಲ್ಯೂಪಿಎಲ್‌ನ ಆರ್‌ಸಿಬಿ ತಂಡದ ಭಾಗವಾಗಿದ್ದರು ಎನ್ನುವುದು.
ಆರ್‌ಸಿಬಿಗೆ ರೀಮಾ ಮಲ್ಹೋತ್ರಾ ಮಹತ್ವದ ಸಲಹೆ
ಮಹಿಳಾ ಪ್ರೀಮಿಯರ್ ಲೀಗ್ 2027ರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ಅಕ್ಟೋಬರ್ 28ರಂದು ನಡೆಯಲಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟೀಮ್ ಇಂಡಿಯಾ ಕ್ರಿಕೆಟರ್ ಮಹತ್ವದ ಸಲಹೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮಧ್ಯಮ ಕ್ರಮಾಂಕದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟ್‌ಗಾರ್ತಿ ರೀಮಾ ಮಲ್ಹೋತ್ರಾ ಸಲಹೆ ನೀಡಿದ್ದಾರೆ. ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ಆರ್‌ಸಿಬಿ, ಈ ಹರಾಜಿನಲ್ಲಿ ಮುಖ್ಯವಾಗಿ ಭಾರತೀಯ ಬ್ಯಾಟರ್‌ಗಳು ಮತ್ತು ಆಲ್ ರೌಂಡರ್‌ಗಳ ಮೇಲೆ ಕಣ್ಣಿಡಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಆರ್‌ಸಿಬಿ ತಂಡದಲ್ಲಿ ಸದ್ಯ ನಾಯಕಿ ಸ್ಮೃತಿ ಮಂಧನಾ ಆರಂಭಿಕರಾಗಿ ಮತ್ತು ರಿಚಾ ಘೋಷ್ ಮಧ್ಯಮ ಕ್ರಮಾಂಕದ ಪ್ರಮುಖ ಭಾರತೀಯ ಬ್ಯಾಟರ್‌ಗಳಾಗಿ ಉಳಿದುಕೊಂಡಿದ್ದಾರೆ. ಹೀಗಾಗಿ ನಾಲ್ಕನೇ ಹಾಗೂ 7ನೇ ಕ್ರಮಾಂಕದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಅತ್ಯಗತ್ಯವಾಗಿದೆ,' ಎಂದು ರೀಮಾ ಮಲ್ಹೋತ್ರಾ ಅವರು ಹೇಳಿದ್ದಾರೆ.


Click it and Unblock the Notifications
