Abhishek Sharma: ವಿಶ್ವದ ನಂ.1 ಟಿ20 ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಎರಡು ಬಾರಿ ಡಕೌಟ್, ರವಿಶಾಸ್ತ್ರಿ ಬೆಂಬಲ
Abhishek Sharma: ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡದ ಟಿ20 ವಿಶ್ವಕಪ್ 2026 ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಆದರೆ, ಇದೀಗ ಕಾಡುವ ಪ್ರಶ್ನೆ ಏನೆಂದರೆ. ಈ ಮ್ಯಾಚ್‌ನಲ್ಲಿ ಭಾರತ ತಂಡದ ಸ್ಟಾರ್ ಓಪನರ್ ನಾಲ್ಕು ಬಾಲ್ ಆಡಿ ಕ್ಯಾಚ್ ನೀಡಿ ಶೂನ್ಯಕ್ಕೆ ಡಕ್‌ಔಟ್ ಆದ ವಿಚಾರ ಇದೀಗ ಚರ್ಚೆಯಲ್ಲಿದೆ. ಈ ಬಗ್ಗೆ ರಚವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸಮನ್ ಎಂಬ ಸ್ಥಾನ ಹೊಂದಿರುವ ಅಭಿಷೇಕ್, ಆಡಿರುವ ಎರಡು ಪಂದ್ಯಗಳಲ್ಲೂ ಖಾತೆ ತೆರೆಯಲು ವಿಫಲರಾಗಿದ್ದಾರೆ. ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿಯೇ ಡಕೌಟ್ ಆಗಿ ನಿರಾಶೆ ಮೂಡಿಸಿದರು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲೂ ಅವರು ಶೂನ್ಯಕ್ಕೆ ಔಟಾಗಿದ್ದು, ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ
ಅನಾರೋಗ್ಯದ ಕಾರಣ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಅಭಿಷೇಕ್, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ಪ್ಲೇಯಿಂಗ್ 11ಗೆ ಮರಳಿದರು. ಆದರೆ, ಕೇವಲ ನಾಲ್ಕು ಬಾಲ್‌ಗಳನ್ನು ಎದುರಿಸಿದ ಅವರು, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಅಭಿಷೇಕ್ ಶರ್ಮಾ ಡಕ್‌ಔಟ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?
ಅಂಕಿಅಂಶಗಳ ಪ್ರಕಾರ, ಅಭಿಷೇಕ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 30ಕ್ಕಿಂತ ಹೆಚ್ಚು ರನ್ ಗಳಿಸಿದಾಗ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾದರೂ, ಭಾರತ 61 ರನ್‌ಗಳ ಭರ್ಜರಿ ಜಯ ಸಾಧಿಸಿತು. ಅಭಿಷೇಕ್ ಶರ್ಮಾ ಡಕ್‌ಔಟ್ ಬಗ್ಗೆ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಷೇಕ್ ಮಾತನಾಡಿದ್ದಾರೆ.
"ಅಭಿಷೇಕ್ ಶರ್ಮಾ ಅವರಿ ತಮ್ಮ ಆಟದ ಶೈಲಿಯನ್ನು ಬದಲಾಯಿಸಬೇಕಾಗಿಲ್ಲ. ಸ್ವಲ್ಪ ವಿಶ್ರಾಂತಿ ಪಡೆಯಬೇಕು. ಅತಿಯಾಗಿ ಯೋಚಿಸಬಾರದು. ಅವರಿಂದ ಶೀಘ್ರದಲ್ಲೇ ದೊಡ್ಡ ಪ್ರದರ್ಶನ ಬರಲಿದೆ," ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಭವಿಷ್ಯ ನುಡಿದಿದ್ದಾರೆ.
ಅಭಿಷೇಕ್ ಶರ್ಮಾ ಪವರ್‌ಪ್ಲೇ ವೇಳೆ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರು ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆರಂಭಿಕ ಓವರ್‌ಗಳಲ್ಲಿ ಅವರು ಕ್ರೀಸ್‌ನಲ್ಲಿ ಇದ್ದರೆ, ತಂಡಕ್ಕೆ ಹೆಚ್ಚಿನ ಲಾಭವಾಗುತ್ತದೆ. ಆದರೆ, ಇತ್ತೀಚಿನ ಪಂದ್ಯದಲ್ಲಿ ಡಕೌಟ್ ಆಗುವ ಮೂಲಕ ಅಭಿಷೇಕ್, ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಡಕೌಟ್ ದಾಖಲಿಸಿರುವ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಅವರ ಪಟ್ಟಿಗೆ ಸೇರಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಅವರಿಂದ ಬಹುದೊಡ್ಡ ಇನ್ನಿಂಗ್ಸ್‌ಗಾಗಿ ಕಾತರದಿಂದ ಕಾಯುತ್ತಿರುವುದಂತೂ ಸತ್ಯ.
ಅಭಿಷೇಕ್ ಶರ್ಮಾ ಅವರು ಈ ಹಿಂದಿನ ಪಾಕಿಸ್ತಾನದ ವಿರುದ್ಧದ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಆದರೆ, ಕೊಲೊಂಬೊದಲ್ಲಿ ನಡೆದ ಪಂದ್ಯದಲ್ಲಿ ಮಾತ್ರ ಒಂದು ರನ್ ಗಳಿಸದೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಬೇಸರ ಮೂಡಿಸಿದ್ದರು. ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡಲಿದ್ದಾರೆ ಎನ್ನುವ ಭರವಸೆಯನ್ನು ಸುಳ್ಳು ಮಾಡಿದರು. ಆದರೂ ಅಭಿಮಾನಿಗಳು ಮಾತ್ರ ಮುಂದಿನ ಪಂದ್ಯಗಳಲ್ಲಿ ಅವರು ಉತ್ತಮವಾಗಿ ಆಡಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅನಾರೋಗ್ಯ ಕಾರಣ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರಿಂದ ಉತ್ತಮ ಪ್ರದರ್ಶನ ಕಂಡುಬರಲಿಲ್ಲ ಅಂತಲೂ ಹೇಳಬಹುದು. ಒಟ್ಟಿನಲ್ಲಿ ಹೇಳುವುದಾದರೆ, ರವಿಶಾಸ್ತ್ರಿ ಅವರು ಹೇಳಿದಂತೆ ಮುಂದಿನ ಪಂದ್ಯಗಳಲ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ ಬರಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications