ರೋಹಿತ್ ಶರ್ಮಾ ಚಿಂತೆ ಹೆಚ್ಚಿಸಿದ ಎಡ: ಈ ಬೌಲರ್‌ಗಳೇ ಹಿಟ್ ಮ್ಯಾನ್ ವೀಕ್ನೆಸ್
ಭಾರತ ಮತ್ತು ಬಾಂಗ್ಲಾದೇಶ ನಡುವಿನ T20 ವಿಶ್ವಕಪ್ 2024 ರ ಸೂಪರ್-8 ಪಂದ್ಯವು ಶನಿವಾರ ನಡೆಯಲಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶಿವಂ ದುಬೆ ಮತ್ತು ರವೀಂದ್ರ ಜಡೇಜಾರಂತಹ ಸ್ಟಾರ್ ಆಟಗಾರರು ರನ್‌ಗಾಗಿ ಪರದಾಡುತ್ತಿದ್ದಾರೆ. 2024 ರ ಟಿ 20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಎಡಗೈ ವೇಗದ ಬೌಲರ್‌ಗಳ ವಿರುದ್ಧ ರನ್ ಬಾರಿಸುವಲ್ಲಿ ವಿಫಲರಾಗಿದ್ದಾರೆ.
ಭಾರತದ ಈ ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಮುಸ್ತಾಫಿಜುರ್ ರೆಹಮಾನ್ ಅವರ ರಣ ತಂತ್ರವನ್ನು ಮೆಟ್ಟಿ ನಿಲ್ಲಬೇಕಿದೆ. ಅಂದಾಗ ಮಾತ್ರ ಟೀಮ್ ಇಂಡಿಯಾ ಈ ಬಾರಿ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವುದು ಸುಲಭವಾಗುತ್ತದೆ.

ಉಭಯ ತಂಡಗಳ ದಾಖಲೆಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಆದರೆ ಬಾಂಗ್ಲಾದೇಶವು ಅಚ್ಚರಿಯ ಫಲಿತಾಂಶ ನೀಡುವಲ್ಲಿ ಪರಿಣಿತ. ಮತ್ತು ಟೀಮ್ ಇಂಡಿಯಾಗೆ ಇದು ಚೆನ್ನಾಗಿ ತಿಳಿದಿದೆ. ಪ್ರಶಸ್ತಿ ಗೆಲ್ಲುವ ಹಾಟ್ ಫೆವರೀಟ್ ತಂಡ ಎಂದು ಗುರುತಿಸಿಕೊಂಡಿರುವ ಟೀಮ್ ಇಂಡಿಯಾ, ಇಂದಿನ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ, ನಾಲ್ಕರ ಘಟಕ್ಕೆ ಪ್ರವೇಶ ಪಡೆಯಬೇಕಿದೆ. ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಇದೇ ಪ್ರದರ್ಶನವನ್ನು ಮುಂದುವರೆಸುವ ಅವಶ್ಯಕತೆ ಇದೆ.
ರೋಹಿತ್‌ಗೆ ಕಾಟ
ರೋಹಿತ್ ಶರ್ಮಾ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ 8 ಬಾರಿ ಎಡಗೈ ಬೌಲರ್ ವಿರುದ್ಧ ಔಟಾಗಿದ್ದಾರೆ. ಈ ವರ್ಷ, ರೋಹಿತ್ ಎಡಗೈ ಬೌಲರ್ ವಿರುದ್ಧ 19 ಇನ್ನಿಂಗ್ಸ್‌ಗಳಲ್ಲಿ 98 ಎಸೆತಗಳನ್ನು ಎದುರಿಸಿ, ಕೇವಲ 128 ರನ್ ಗಳಿಸಿದರು. ಈ ವರ್ಷ ರೋಹಿತ್ ಶರ್ಮಾಗೆ T20 ಕ್ರಿಕೆಟ್‌ನಲ್ಲಿ ಎಡಗೈ ಬೌಲರ್‌ಗಳು ಕಾಟ ನೀಡಿದ್ದಾರೆ.
ಬಾಂಗ್ಲಾದೇಶದಲ್ಲೂ ಸ್ಟಾರ್ ಎಡಗೈ ವೇಗಿ ಒಬ್ಬರು ಇದ್ದಾರೆ. ಅವರು ಬ್ಯಾಟ್ಸ್‌ಮನ್‌ಗಳನ್ನು ಖೆಡ್ಡಾ ತೋಡುವಲ್ಲಿ ನಿಸ್ಸೀಮರು. ಮುಸ್ತಾಫಿಜುರ್ ಅವರ ಕಟರ್ ಹಾಗೂ ವೇರಿಯೆಷನ್‌ಗಳಿಂದ ಕೂಡಿದ್ದ ಎಸೆತವನ್ನು ರೋಹಿತ್ ಹೇಗೆ ಎದುರಿಸುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ. ಅದಾಗ್ಯೂ ರೋಹಿತ್, ಬಾಂಗ್ಲಾದೇಶದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ಪ್ರದರ್ಶನವನ್ನು ಮತ್ತೊಮ್ಮೆ ಮುಂದುವರೆಸಿದಲ್ಲಿ ಜಯದ ಆಸೆ ಚಿಗುರುತ್ತದೆ.

ಇಬ್ಬರು ಎಡಗೈ ಬೌಲರ್ಸ್
ಇನ್ನು ಬಾಂಗ್ಲಾದೇಶದಲ್ಲಿ ಇಬ್ಬರು ಲೆಫ್ಟ್ ಆರ್ಮ್ ಸ್ಪಿನ್ ಬೌಲರ್‌ಗಳು ಇದ್ದಾರೆ. ಇವರ ರಣ ತಂತ್ರವನ್ನು ರೋಹಿತ್ ಶರ್ಮಾ ಮೆಟ್ಟಿ ನಿಂತು ಆಡಬೇಕಿದೆ ಅಂದಾಗ ಮಾತ್ರ ಬಿಗ್ ಇನ್ನಿಂಗ್ಸ್ ಕಟ್ಟಲು ಸಾಧ್ಯ.
ಲೀಗ್ ಹಂತದಲ್ಲೂ ರೋಹಿತ್ ಎಡಗೈ ವೇಗದ ಬೌಲರ್‌ಗಳ ವಿರುದ್ಧ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದನ್ನು ನೋಡಿದ್ದೇವೆ. ಈ ಸಮಸ್ಯೆಯನ್ನು ಬಗೆ ಹರಿಸಿಕೊಂಡು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡುವ ಅವಶ್ಯಕತೆ ಟೀಮ್ ಇಂಡಿಯಾ ನಾಯಕನಿಗಿದೆ.
ವೆಸ್ಟ್ ಇಂಡೀಸ್‌ನಲ್ಲಿ ಭಾರತದ ಏಕೈಕ ಗುರಿ ಪ್ರಶಸ್ತಿ. ಬಾಂಗ್ಲಾದೇಶದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಮುಂದಿನ ಹಂತ ಪ್ರವೇಶಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ. ಭಾರತ ಜೂನ್ 24 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ.












Click it and Unblock the Notifications