T20 World Cup: ಎದುರಾಳಿಗಳಿಗೆ ನಡುಕು ಹುಟ್ಟಿಸಿದ ವಿಶ್ವದ ನಂ 1 ಟಿ20 ಬ್ಯಾಟರ್‌

ಗುರುವಾರ ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ ಸುಲಭ ಗೆಲವು ದಾಖಲಿಸಿದೆ. ಸ್ಪರ್ಧಾತ್ಮಕ ಮೊತ್ತವನ್ನು ಸಲೀಸಾಗಿ ಚೇಸ್ ಮಾಡಿದ ಮುಂಬೈ ತವರಿನ ಅಭಿಮಾನಿಗಳ ಎದುರು ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಎಲ್ಲರನ್ನು ರಂಜಿಸಿದ್ದು ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರಿತ್‌ ಬುಮ್ರಾ. ತಮ್ಮ ಬಿಗುವಿನ ದಾಳಿಯ ಮೂಲಕ ಬೂಮ್‌ ಬೂಮ್‌ ಬೂಮ್ರಾ ಐದು ವಿಕೆಟ್‌ ಪಡೆದು ಆರ್ಭಟಿಸಿದರು. ನಂತರ ನಡೆದಿದ್ದ ಸ್ಪೋಟಕ ಆಟ.

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕ ಅತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಈ ಟೂರ್ನಿಗೆ ವಿಶ್ವದ ನಾನಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ಮಹತ್ವದ ಟೂರ್ನಿಗೆ ಟೀಮ್ ಇಂಡಿಯಾ ಆಟಗಾರರ ಸಹ ಕಸರತ್ತು ನಡೆಸಿದ್ದಾರೆ. ಮುಂಬೈನ ವಾಂಖೇಡೆಯಲ್ಲಿ ಟಿ20ಯ ವಿಶ್ವದ ನಂಬರ್ 1 ಬ್ಯಾಟರ್‌ ಬ್ಯಾಟಿಂಗ್‌ ನೋಡಿದ ಎದುರಾಳಿಗಳು ಸ್ಟನ್‌.

T20 World Cup The World s No 1 T20 Batsman Strikes Fear into Opponents

ಮುಂಬೈ ಭರ್ಜರಿ ಆರಂಭ

ಇಶಾನ್‌ ಕಿಶನ್‌ ಹಾಗೂ ರೋಹಿತ್ ಶರ್ಮಾ ಮುಂಬೈ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 8.5 ಓವರ್‌ಗಳಲ್ಲಿ 101 ರನ್ ಸೇರಿಸಿತ್ತು. ಆಗ ಇಶಾನ್‌ ಕಿಶನ್‌ (69) ಆಕಾಶ್ ದೀಪ್‌ ಅವರ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿದರು. ಆಗ ಮೈದನಾಕ್ಕೆ ಟಿ20 ಕ್ರಿಕೆಟ್‌ನ ನಂಬರ್‌ 1 ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಮೈದನಾಕ್ಕೆ ಎಂಟ್ರಿ ನೀಡಿದರು. ಆದರೆ, ಇವರ ಆಟದ ಮೇಲೆ ಭರವಸೆ ಅಭಿಮಾನಿಗಳಿಗೆ ಕೊಂಚ ಕಡಿಮೆ ಆಗಿತ್ತು. ಆದರೆ ಸೂರ್ಯ ಪಿಚ್‌ನಲ್ಲಿ ಕೊಂಚ ಟೈಮ್ ಸ್ಪೆಂಡ್ ಮಾಡಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು.

273.68ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌

ಸೂರ್ಯಕುಮಾರ್ ಹಳೆಯ ಖದರ್‌ನಲ್ಲಿ ಬ್ಯಾಟಿಂಗ್‌ ಮಾಡಿ ನೆರೆದಿದ್ದ ಮುಂಬೈ ಅಭಿಮಾನಿಗಳನ್ನು ರಂಜಿಸಿದರು. ಇವರ ಆಟಕ್ಕೆ ಆರ್‌ಸಿಬಿ ಬೌಲರ್‌ಗಳು ಕಂಗಾಲಾಗಿದ್ದರು. ಸ್ಕೈ 19 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 273.68ರ ಸ್ಟ್ರೈಕ್‌ ರೇಟ್‌ನಲ್ಲಿ 52 ರನ್ ಬಾರಿಸಿ ರಂಜಿಸಿದರು. ಇವರ ಬ್ಯಾಟಿಂಗ್ ಕಂಡು ಅಭೀಮಾನಿಗಳು ಫುಲ್‌ ಖುಷ್‌. ಸ್ಕೈ ಹಳೆಯ ಶೈಲಿಯ ಬ್ಯಾಟಿಂಗ್ ನೋಡಿದ ಎದುರಾಳಿಗಳಿಗೆ ನಡುಕ ಶುರುವಾಗಿದೆ.

ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ

ದಕ್ಷಿಣ ಆಫ್ರಿಕಾದ ಟಿ20 ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಸೂರ್ಯಕುಮಾರ್ ಯಾದವ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಶಸ್ತ್ರಚಿಕಿತ್ಸೆಗೂ ಒಳಗಾದರು. ಇದೇ ವೇಳೆ ಇವರಿಗೆ ಸ್ಫೋರ್ಟ್ಸ್‌ ಹರಿನಿಯಾ ಸಹ ಆಗಿತ್ತು. ಇದರಿಂದ ಚೇತರಿಸಿಕೊಂಡ ಬಳಿಕ ಸೂರ್ಯ, ಎನ್‌ಸಿಎನಿಂದ ಫಿಟ್ನೆಸ್‌ ಸರ್ಟಿ ಫಿಕೇಟ್‌ ಪಡೆದು ಮೈದಾನಕ್ಕೆ ಇಳಿದಿದ್ದಾರೆ. ಇವರ ಆಟ ಕಂಡು ವಿಶ್ವದ ಬೇರೆ ಬೇರೆ ತಂಡಗಳಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.

T20 World Cup The World s No 1 T20 Batsman Strikes Fear into Opponents

ಸೂರ್ಯಕುಮಾರ್ ಯಾದವ್ ವೇಗದ ಬೌಲರ್‌ಗಳ ವೇಗವನ್ನೇ ಟಾರ್ಗೆಟ್‌ ಮಾಡಿ ಸಿಕ್ಸರ್‌ ಹಾಗೂ ಬೌಂಡರಿಗಳನ್ನು ಬಾರಿಸುತ್ತಾರೆ. ಈ ಬಾರಿಯ ವಿಶ್ವಕಪ್‌ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದೆ. ಇಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ನೀಡುತ್ತದೆ. ಈ ಪಿಚ್‌ಗಳಲ್ಲಿ ಸೂರ್ಯಕುಮಾರ್‌ ರುದ್ರಾವತಾರ ತೋರುವದರಲ್ಲಿ ಸಂಶಯವೇ ಇಲ್ಲ. ಗುರುವಾರ ಸೂರ್ಯ ಆಡಿದ ಆಟವನ್ನು ನೋಡಿದ ಅಭಿಮಾನಿಗಳು ಮತ್ತೊಮ್ಮೆ ಭಾರತ ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ಇವರು ನೆರವಾಗಬಲ್ಲರು ಎಂದು ಲೆಕ್ಕಾಚಾರ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+