T20 World Cup: ಭಾರತ ತಂಡದಲ್ಲಿ ಇರಬೇಕಾದ ಇಬ್ಬರು ಆಟಗಾರರನ್ನು ಹೆಸರಿಸಿದ ಸೌರವ್ ಗಂಗೂಲಿ
ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಜೂನ್‌ನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಎಲ್ಲ ತಂಡಗಳು ಈ ವಿಶ್ವಕಪ್ ಮೇಲೆ ಕಣ್ಣು ನೆಟ್ಟಿವೆ. ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಮತ್ತೊಮ್ಮೆ ಕಪ್ ಎತ್ತುವ ಕನಸು ಕಾಣುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಈ ಮೆಗಾ ಈವೆಂಟ್‌ಗೆ ತನ್ನ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಟೀಮ್ ಇಂಡಿಯಾ ತನ್ನ ತಂಡದಲ್ಲಿ ಯಾವೆಲ್ಲಾ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಹಿನ್ನೆಲ್ಲೆಯಲ್ಲಿ ಎಲ್ಲ ಆಟಗಾರರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಸಹ ಸೇರಿಕೊಂಡಿದ್ದಾರೆ. ಟಿ20 ವಿಶ್ವಕಪ್‌ಗೆ ತಮ್ಮ ತಂಡವನ್ನು ಸೌರವ್ ಗಂಗೂಲಿ ಪ್ರಕಟಿಸಿದ್ದಾರೆ.

ಆಲ್‌ರೌಂಡರ್ ಸ್ಥಾನಕ್ಕೆ ಇವರೇ ಬೆಸ್ಟ್?
ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮುಂಬರುವ T20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಅಕ್ಷರ್ ಪಟೇಲ್ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಾರೆ ಎಂದು ಭಾವಿಸಿದ್ದಾರೆ. ಏಕೆಂದರೆ ಅವರು ಪಂದ್ಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಕ್ಸರ್ 7.06 ರ ಎಕನಾಮಿಯೊಂದಿಗೆ ಋತುವಿನ ಉದ್ದಕ್ಕೂ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಮತ್ತು ಅಗತ್ಯವಿದ್ದಾಗ ಬ್ಯಾಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ರಿಷಬ್ ಮತ್ತು ಅಕ್ಷರ್ ಇಬ್ಬರ ಆಯ್ಕೆ ಖಚಿತ. T20 ಯಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡಕ್ಕೆ 15 ರಿಂದ 20 ರನ್‌ಗಳನ್ನು ಸೇರಿಸಬೇಕು ಎಂದು ಯೋಚಿಸುತ್ತಾರೆ. ಈ ಕಾರ್ಯವನ್ನು ಅಕ್ಷರ್ ಪಟೇಲ್ ಸುಲಭವಾಗಿ ಮಾಡಬಲ್ಲರು ಎಂದು ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಇಬ್ಬರೂ ಪ್ರತಿಭಾವಂತ ಬ್ಯಾಟರ್‌ಗಳು. ಅಕ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಹೆಚ್ಚಾಗಿ ಕೊಡುಗೆ ನೀಡಬಹುದು ಎಂದು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಟೆಸ್ಟ್ ಹಾಗೂ ಕ್ರಿಕೆಟ್ ಎರಡೂ ಬೇರೆ ಬೇರೆ ಫಾರ್ಮೆಟ್‌ಗಳು. ಈ ಎರಡೂ ಫಾರ್ಮೆಟ್‌ಗಳಲ್ಲಿ ಉತ್ತಮವಾಗಿ ಆಡಬಲ್ಲರು. ಅಕ್ಷರ್ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅತ್ಯುತ್ತಮರಾಗಿದ್ದಾರೆ. ಅವರೊಬ್ಬ ಪ್ರತಿಭಾವಂತ ಕ್ರಿಕೆಟಿಗ ಎಂದು ತಿಳಿಸಿದ್ದಾರೆ.
ಪಂತ್‌ಗೆ ಟಿ20 ವಿಶ್ವಕಪ್‌ನಲ್ಲಿ ಸಿಗಬೇಕು ಅವಕಾಶ
2022ರಲ್ಲಿ ಕಾರು ಅಪಾಘತಕ್ಕೆ ತುತ್ತಾಗಿದ್ದ ರಿಷಭ್ ಪಂಥ್, ಗಾಯದಿಂದ ಚೇತರಿಸಿಕೊಂಡು ಅಂಗಳಕ್ಕೆ ಮರಳಿದ್ದಾರೆ. ಇವರು ಭರ್ಜರಿ ಫಾರ್ಮ್‌ನಲ್ಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೆರವಾಗಿದ್ದಾರೆ. ಪಂತ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಪಂತ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಆಡಿದ ಧಾಟಿಯನ್ನು ನೋಡಿದರೆ ಇವರು ಫಾರ್ಮ್ ಕಂಡುಕೊಂಡಿದ್ದಾರೆ ಎಂದೇ ಅನಿಸುತ್ತದೆ. ವಿಕೆಟ್ ಕೀಪರ್ ಸ್ಥಾನದ ಮೇಲೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ದಿನೇಶ್ ಕಾರ್ತಿಕ್ ಕಣ್ಣು ನೆಟ್ಟಿದ್ದಾರೆ.

ಸಂಜು ಸಹ ಪ್ರತಿಭಾವಂತ ಆಟಗಾರ
ನನಗೆ ರಿಷಬ್ ಮತ್ತು ಸಂಜು ಇಷ್ಟ. ರಿಷಭ್ ಟಿ20 ವಿಶ್ವಕಪ್ ತಂಡಕ್ಕೆ ಹೋಗಲಿದ್ದಾರೆ. ಸಂಜು ಕೂಡ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಬಹುದು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ ತಿಳಿಸಿದ್ದಾರೆ.












Click it and Unblock the Notifications