Get Updates
Get notified of breaking news, exclusive insights, and must-see stories!

T20 World Cup: ಭಾರತ ವಿರುದ್ಧ ಪಂದ್ಯವಾಡಲು ಪಿಸಿಬಿಗೆ ಪಾಕ್ ಸರ್ಕಾರ ನಿರ್ದೇಶನ, ಬಿಕ್ಕಟ್ಟು ಅಂತ್ಯವಾಗಿದ್ದೇಗೆ?

ನವದೆಹಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್ 2026ನಲ್ಲಿ ಭಾರತ ವಿರುದ್ಧ ಆಟವಾಡಲ್ಲ ಎಂದು ಬಹಿಷ್ಕಾರ ನಿರ್ಧಾರ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಪಾಕ್ ಸರ್ಕಾರ ಪಂದ್ಯದಲ್ಲಿ ಭಾಗವಹಿಸಲು ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೆ ಇದೇ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಮ್ಯಾಚ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಗೆ ಆಗಲಿವೆ.

ಈ ಮೂಲಕ ಒಂದು ವಾರದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಧ್ಯದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಕೊನೆಗೊಂಡಂತಾಗಿದೆ. ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದರಿಂದ ಪಾಕಿಸ್ತಾನ ಮುನಿಸಿಕೊಂಡಿತ್ತು. ಇದರಿಂದ ಭಾರತದೊಂದಿಗಿನ ಮ್ಯಾಚ್ ಬಹಿಷ್ಕಾರ ಘೋಷಿಸಿತ್ತು. ಈ ಪಂದ್ಯ ರದ್ದಾದಲ್ಲಿ ಪಿಸಿಬಿಎ ಮೇಲೆ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇತ್ತು. ಸೋಮವಾರ ಪಾಕಿಸ್ತಾನ ಸರ್ಕಾರ ಇದಕ್ಕೆಲ್ಲ ಪೂರ್ಣ ವಿರಾಮ ಇಟ್ಟಿದೆ. ನಿಗಿದ ಆದಂತೆ ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಫೆಬ್ರವರಿ 15ರಂದು ಕೋಲಂಬೋದಲ್ಲಿ ಸೆಣಸಲಿವೆ. ಈ ಮೂಲಕ ಇಂಡೋ ಪಾಕ್ ಪಂದ್ಯಾವಳಿಗೆ ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳ ಗುಡ್ ನ್ಯೂಸ್ ಸಿಕ್ಕಂತಾಗಿದೆ.

T20 World Cup 2026

ಪ್ರಯೋಜನಕಾರಿ ಪರಿಹಾರ ಬಗ್ಗೆ ಚರ್ಚೆ

ಈ ಮಧ್ಯೆ ಪಿಸಿಬಿಯ ಪ್ರಸ್ತಾವನೆಗಳನ್ನು ಐಸಿಸಿ ತಿರಸ್ಕರಿಸಿದೆ ಎಂದು ವರದಿ ಆಗಿದೆ. ಸರ್ಕಾರಿ ಅಧಿಕೃತ ಹೇಳಿಕೆಯ ಪ್ರಕಾರ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಅಧಿಕಾರಿಗಳೊಂದಿಗೆ ಐಸಿಸಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದನ್ನು ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ವಿವರಿಸಿದರು. ಕೊನೆಗೆ ಪಾಕ್ ಸರ್ಕಾರ ಸೋಮವಾರ ತಡರಾತ್ರಿ ಅಂತಿಮ ನಿರ್ಧಾರ ಕೈಗೊಂಡಿತು.

ಮಿತ್ರ ರಾಷ್ಟ್ರಗಳ ಸಲಹೆ ಪಾಲಿಸಿದ ಪಾಕ್

ಬಹಿಷ್ಕಾರ ನಿರ್ಧಾರ ಪ್ರಕಟಿಸಿದ ಬಳಿಕ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಕ್ರಿಕೆಟ್ ಮಂಡಳಿಗಳು ಒಂದಷ್ಟು ಸಲಹೆಗಳನ್ನು ಪಿಸಿಬಿಗೆ ನೀಡಿದ್ದವು. ಅದನ್ನು ಪಾಕಿಸ್ತಾನ ಸರ್ಕಾರ ಪರಿಗಣಿಸಿದೆ. ಇದರಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ಬಗ್ಗೆ ಹೆಚ್ಚು ಸಲಹೆಗಳು ಬಂದಿದ್ದವು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನ್ ಉಲ್ ಇಸ್ಲಾಂ ಕೂಡ ಪಿಸಿಬಿಗೆ ತನ್ನ ಬಹಿಷ್ಕಾರದ ನಿಲುವನ್ನು ಮರುಪರಿಶೀಲಿಸುವಂತೆ ಕೋರಿತ್ತು. ಈ ಮೂಲಕ ಭಾರತದೊಂದಿಗೆ ಆಟವಾಡುವುದನ್ನು ಮುಂದುವರಿಸಬೇಕೆಂದು ಪಿಸಿಬಿಗೆ ಹೇಳಿವೆ. ಅದರ ಬೆನ್ನಲ್ಲೆ ಪಾಕಿಸ್ತಾನ ಸರ್ಕಾರ ಭಾರತ ವಿರುದ್ಧ ಕಣಕ್ಕಿಳಿಯುವಂತೆ ಸೂಚನೆ ನೀಡಿದ್ದನ್ನು ಕ್ರಿಕೆಟ್ ಮಂಡಳಿಗಳು ಬೆಂಬಲಿಸಿವೆ.

ಮುಖ್ಯವಾಗಿ ಪಾಕಿಸ್ತಾನದ ನಿರ್ದೇಶನ ನಿರ್ಧಾರದಲ್ಲಿ ರಾಜತಾಂತ್ರಿಕ ಅಂಶಗಳು ಕಂಡು ಬರುತ್ತಿವೆ. ಪ್ರಧಾನಿ ಷರೀಫ್ ಅವರು ಶ್ರೀಲಂಕಾ ಅಧ್ಯಕ್ಷ ಅನುರಕುಮಾರ ದಿಸಾನಾಯಕೆ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ಉಭಯ ನಾಯಕರು ತಮ್ಮ ದೇಶಗಳ ನಡುವಿನ ದೀರ್ಘ ಕಾಲದ ಸಂಬಂಧ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವಂತೆ ಪಾಕ್‌ ಗೆ ಸಲಹೆ ನೀಡಿದ್ದರು ಎಂದು ವರದಿ ಆಗಿದೆ.

ಸ್ನೇಹಪರ ರಾಷ್ಟ್ರಗಳ ಸಲಹೆ ಸೂಚನೆ ಮೇರೆಗೆ ಪಿಸಿಬಿಗೆ ಪಾಕಿಸ್ತಾನ ಸರ್ಕಾರ ಈ ಉನ್ನತ ಮಟ್ಟದ ಪಂದ್ಯದಲ್ಲಿ ಭಾಗವಹಿಸಲು ಅನುಮತಿ ನೀಡಿ ನಿರ್ದೇಶಿಸಿತು. ಇದೆಲ್ಲ ಬೆಳವಣಿಗೆಯು ಜಾಗತಿಕವಾಗಿ ಗಮನ ಸಳೆಯಿತು. ಇದರಲ್ಲಿ ಭಾರತ ತಟಸ್ಥ ನಿಲುವು ತಾಳಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

---------

ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್‌' ವೆಬ್‌ಸೈಟ್‌ನಲ್ಲಿದೆ

ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್‌ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್‌ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್‌, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್‌, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್‌, 'ಮೈಖೇಲ್' ವೆಬ್‌ಸೈಟ್ ಬೆಸ್ಟ್‌.

ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್‌ ಫಾಲೊ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+