Suryakumar Yadav: ಸೂರ್ಯಕುಮಾರ್ ಯಾದವ್ ಕ್ಯಾಚ್ ವಿವಾದ; ಮತ್ತೊಂದು ವಿಡಿಯೋ ವೈರಲ್

17 ವರ್ಷಗಳ ಬಳಿಕ ಭಾರತ ಎರಡನೇ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದೆ. ವಿಶ್ವಕಪ್ ಗೆದ್ದ ರೋಹಿತ್ ಪಡೆ ಎರಡು ದಿನಗಳು ತಡವಾಗಿ ಭಾರತಕ್ಕೆ ಆಗಮಿಸಿದ್ದು, ಅಭಿಮಾನಿಗಳ ಅಭಿಮಾನದ ಸಾಗರದಲ್ಲಿ ಮಿಂದೆದ್ದಿದ್ದಾರೆ. ಫೈನಲ್ ಪಂದ್ಯ ನಡೆದ ಒಂದು ವಾರವಾದರೂ, ಕೊನೆಯ ಓವರ್ ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ.

20ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಲಾಂಗ್‌ಆಫ್‌ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಅದು ಬೌಂಡರಿ ದಾಟಿ ಹೋಯಿತು ಎಂದು ಭಾರತ ತಂಡದ ಅಭಿಮಾನಿಗಳು ಆತಂಕದಲ್ಲಿರುವಾಗಲೇ, ಮಿಂಚಿನಂತೆ ಬಂದ ಸೂರ್ಯಕುಮಾರ್ ಯಾದವ್ ಅದ್ಭುತವಾದ ಕ್ಯಾಚ್ ಪಡೆಯುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು.

Suryakumar Yadav s Catch in T20 World Cup Final Clears Controversy

ಸೂರ್ಯಕುಮಾರ್ ಯಾದವ್ ಬೌಂಡರಿ ಗೆರೆ ಬಳಿ ಕ್ಯಾಚ್ ಹಿಡಿದು ಮತ್ತೆ ಚಂಡನ್ನು ಮೇಲಕ್ಕೆಸೆದು, ಬೌಂಡಿರಿ ಗೆರೆ ಆಚೆ ಹೋಗಿ ಮತ್ತೆ ಬೌಂಡರಿ ಒಳಬಂದು ಕ್ಯಾಚ್‌ ಅನ್ನು ಪೂರ್ಣಗೊಳಿಸಿದರು. ಇದನ್ನು ಪರಿಶೀಲನೆ ಮಾಡಿದ ಮೂರನೇ ಅಂಪೈರ್ ಕ್ಲೀನ್ ಕ್ಯಾಚ್ ಎಂದು ನಿರ್ಣಯಿಸಿ ಔಟ್ ಕೊಟ್ಟರು.

ಶುರುವಾಯ್ತು ವಿವಾದ

ಭಾರತದ ಕ್ರಿಕೆಟ್ ಅಭಿಮಾನಿಗಳು ಪಂದ್ಯ ಗೆದ್ದು ಸಂಭ್ರಮಿಸಿದರೆ, ದಕ್ಷಿಣ ಆಫ್ರಿಕಾದ ಕೆಲವು ಅಭಿಮಾನಿಗಳು ಚೆಂಡು ಸೂರ್ಯ ಕೈಯಲ್ಲಿದ್ದಾಗ ಬೌಂಡರಿ ಗೆರೆ ಮುಟ್ಟಿದ್ದರು, ಅದು ಸಿಕ್ಸರ್ ಎಂದು ವಾದಿಸಿದರು. ದಕ್ಷಿಣ ಆಫ್ರಿಕಾ ಅಭಿಮಾನಿಗಳಿಗಿಂತ ಹೆಚ್ಚಾಗಿ ಭಾರತ ಗೆದ್ದಿದ್ದು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳಿಗೆ ತಡೆದುಕೊಳ್ಳಲು ಆಗುತ್ತಿಲ್ಲ.

ಈಗ ಸೂರ್ಯಕುಮಾರ್ ಕ್ಯಾಚ್ ಹಿಡಿದಿರುವ ಮತ್ತೊಂದು ಆಂಗಲ್‌ನ ವಿಡಿಯೋ ವೈರಲ್ ಆಗಿದ್ದು ಎಲ್ಲಾ ವಿವಾದಗಳಿಗೂ ಅಂತ್ಯವಾಡಿದೆ. ಈ ವಿಡಿಯೋ ನೊಡಿದರೆ ವಿರೋಧಿಗಳು ಬಾಯಿ ಮುಚ್ಚಿಕೊಂಡು ಸುಮ್ಮನಾಗಬೇಕಾಗುತ್ತದೆ.

ಎಕ್ಸ್‌ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಪ್ರೇಕ್ಷಕರು ಮೊಬೈಲ್‌ನಲ್ಲಿ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಸೂರ್ಯಕುಮಾರ್ ಯಾದವ್ ಕ್ಯಾಚ್ ಹಿಡಿದಾಗ ಬೌಂಡರಿ ಗೆರೆ ದಾಟಿಲ್ಲ ಎನ್ನುವುದನ್ನು ಇದರಲ್ಲಿ ಸ್ಪಷ್ಟವಾಗಿ ನೋಡಬಹುದು.

ಸೂರ್ಯಕುಮಾರ್ ಯಾದವ್ ಕೂಡ ಈ ಬಗ್ಗೆ ಮೊದಲೇ ಸ್ಪಷ್ಟನೆ ಕೊಟ್ಟಿದ್ದರು. ಬೌಂಡರಿ ಗೆರೆ ಎಲ್ಲಿದೆ ಎನ್ನುವ ಅರಿವು ನನಗೆ ಇತ್ತು. ಅದಕ್ಕೆ ಬೌಂಡರಿ ಗೆರೆ ತುಳಿಯದಂತೆ ಎಚ್ಚರಿಕೆ ವಹಿಸಿದ್ದೆ. ಈ ರೀತಿಯ ಕ್ಯಾಚ್ ಹಿಡಿಯುವುದನ್ನು ನಾನು ಅಭ್ಯಾಸ ಮಾಡಿದ್ದೆ. ಅದಕ್ಕೆ ಒತ್ತಡದಲ್ಲೂ ಸರಿಯಾಗಿ ಕ್ಯಾಚ್ ಹಿಡಿಯಲು ಸಾಧ್ಯವಾಯಿತು ಎಂದಿದ್ದಾರೆ.

ಸೂರ್ಯಕುಮಾರ್ ಅವರ ಅದ್ಭುತ ಕ್ಯಾಚ್ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+