Suryakumar Yadav: ಸೂರ್ಯಕುಮಾರ್ ಯಾದವ್ ಪತ್ನಿ ಯಾರು ಗೊತ್ತೆ?

ಸೂರ್ಯಕುಮಾರ್ ಯಾದವ್ ಈಗ ನ್ಯಾಷನಲ್ ಹೀರೋ ಆಗಿದ್ದಾರೆ. ಭಾರತ ಕ್ರಿಕೆಟ್‌ನ 'ಮಿಸ್ಟರ್ 360 ಡಿಗ್ರಿ' ಎಂಬ ಹೆಸರು ಪಡೆದಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಅವರೇ ಸಾಠಿ. ಯಾಕಂದ್ರೆ ಸೂರ್ಯಕುಮಾರ್ ಯಾದವ್ ಬ್ಯಾಟ್‌ಗೆ ಬಾಲ್ ಸಿಕ್ಕಿದೆ ಅಂದ್ರೆ ಆ ಬಾಲ್ ಬೌಂಡರಿ ಗೆರೆ ದಾಟಿಸದೆ ಸೂರ್ಯ ಸುಮ್ಮನೆ ಇರಲ್ಲ. ಫೀಲ್ಡಿಂಗ್ ಅಖಾಡಕ್ಕೆ ಇಳಿದರೆ ಸಿಕ್ಸ್ ಹೋಗುವ ಬಾಲ್‌ನ ಕೂಡ ಎಗರಿ ಹಿಡಿಯುತ್ತಾರೆ ಸೂರ್ಯ. ಹಾಗಾದರೆ ಈ ಆಟಗಾರ ಮದುವೆ ಆಗಿರುವುದು ಕನ್ನಡ ನಾಡಿನ ಮೂಲದ ಹುಡುಗಿಯನ್ನ ಗೊತ್ತಾ?

1990ರ ಸೆಪ್ಟೆಂಬರ್ 14 ರಂದು ಹುಟ್ಟಿದ ಸೂರ್ಯಕುಮಾರ್ ಯಾದವ್ ಅವರು 2008 ರಿಂದ ಕೂಡ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಅವರಿಗೆ ಈ ರೀತಿಯ ಖ್ಯಾತಿ ಬಂದಿದ್ದು 3-4 ವರ್ಷಗಳಿಂದ. ಭಾರತದ ಪರ ಒಟ್ಟು 68 ಟಿ20 ಪಂದ್ಯ ಸೇರಿ 37 ಏಕದಿನ ಪಂದ್ಯ & ಒಂದೇ ಒಂದು ಟೆಸ್ಟ್ ಮ್ಯಾಚ್ ಆಡಿರುವ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿಯನ್ನ ಮೊದಲಿಗೆ ನೋಡಿದ್ದು 2010 ರಲ್ಲಿ. ಸೂರ್ಯ ಕಾಲೇಜು ದಿನಗಳಲ್ಲಿ ಪತ್ನಿ ದೇವಿಷಾ ಶೆಟ್ಟಿ ಅವರನ್ನು ನೋಡಿ ಮೆಚ್ಚಿಕೊಂಡಿದ್ದರಂತೆ. ಆ ಬಳಿಕ ಹಲವು ವರ್ಷ ಪ್ರೀತಿಯಲ್ಲಿ ಬಿದ್ದು ಮದುವೆ ಆಗಿದ್ದು ಯಾವಾಗ ಗೊತ್ತೆ? ಮುಂದೆ ಓದಿ.

Suryakumar Yadav Family And His Net Worth Complete Details

ಸೂರ್ಯ & ದೇವಿಷಾ ಶೆಟ್ಟಿ ಮದುವೆ!

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕಂ ಫೀಲ್ಡರ್ ಸೂರ್ಯಕುಮಾರ್ ಯಾದವ್ ಮದುವೆ ಆಗಿದ್ದು 2016ರ ಜುಲೈ 7 ರಂದು. ಕರ್ನಾಟಕ ಮೂಲದ ಹಾಗೂ ಮುಂಬೈನಲ್ಲಿ ಹುಟ್ಟಿ ಬೆಳೆದ ಕನ್ನಡತಿ ದೇವಿಷಾ ಶೆಟ್ಟಿ ಅವರನ್ನು ಸೂರ್ಯಕುಮಾರ್ ಯಾದವ್ ಅವರು ಚಿಕ್ಕ ವಯಸ್ಸಿನಿಂದಲೇ ಇಷ್ಟಪಡುತ್ತಿದ್ದರು. 2010ರಲ್ಲಿ ಇಬ್ಬರ ನಡುವೆ ಲವ್ ಶುರುವಾಗಿ 6 ವರ್ಷಗಳ ಬಳಿಕ ಅಂದ್ರೆ 2016ರಲ್ಲಿ ಮದುವೆ ಆಗಿತ್ತು. ಹಾಗಾದರೆ ಸೂರ್ಯ ಅವರ ಹೆಂಡತಿ ಏನು ಮಾಡುತ್ತಾರೆ? ಅವರ ವೃತ್ತಿ ಏನು? ಮಾಹಿತಿ ಇಲ್ಲಿದೆ ಮುಂದೆ ತಿಳಿಯಿರಿ.

ದೇವಿಷಾ ಶೆಟ್ಟಿ ಡಾನ್ಸಿಂಗ್ ಕೋಚ್!

ಅಂದಹಾಗೆ ದೇವಿಷಾ ಶೆಟ್ಟಿ ಅವರು ಮುಂಬೈ ಮಹಾನಗರದಲ್ಲಿ ಹುಟ್ಟಿದ್ದು 1993ರಲ್ಲಿ. ದೇವಿಷಾ ಶೆಟ್ಟಿ ಅವರ ತಂದೆ & ತಾಯಿ ಕರ್ನಾಟಕದ ಮಂಗಳೂರು ಮೂಲದವರು. ಈ ಕುಟುಂಬ ಬಹು ವರ್ಷಗಳ ಹಿಂದೆಯೇ ಮುಂಬೈಗೆ ಹೋಗಿ ನೆಲೆಸಿತ್ತು. ಹೀಗೆ ಇಬ್ಬರೂ ಪ್ರೀತಿ ಮಾಡಿ ಮದುವೆಗೆ ಸಿದ್ಧರಾದ ನಂತರ ಕುಟುಂಬದ ಒಪ್ಪಿಗೆ ಪಡೆದರು.

ಹಿರಿಯರು ಈ ಜೋಡಿಯ ಪ್ರೀತಿಯನ್ನು ಒಪ್ಪಿ 2016 ರಲ್ಲಿ ಅದ್ಧೂರಿಯಾಗಿ ಮದುವೆ ಕೂಡ ಮಾಡಕೊಟ್ಟರು. ಸೂರ್ಯಕುಮಾರ್ ಹೆಂಡತಿ ದೇವಿಷಾ ಶೆಟ್ಟಿ ಅವರು ವೃತ್ತಿಯಲ್ಲಿ ಡಾನ್ಸ್ ಕೋಚ್ ಆಗಿದ್ದು, ಗಂಡ ಸೂರ್ಯ ಅವರ ಪ್ರತಿ ಏಳು & ಬೀಳುಗಳಲ್ಲಿ ಹೆಗಲು ಕೊಟ್ಟು ನಿಂತರು. ಹೀಗಾಗಿಯೇ ಇಂದು ಅತ್ಯುತ್ತಮ ಕ್ರಿಕೆಟ್ ಆಟಗಾರ ಎನಿಸಿಕೊಂಡಿದ್ದಾರೆ ಈ ನಮ್ಮ ಸೂರ್ಯಕುಮಾರ್ ಯಾದವ್ ಅವರು.

ಸೂರ್ಯಕುಮಾರ್ ಸೂಪರ್ ಡಾನ್ಸ್!

ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಗೆದ್ದು ಹೊಸ ಇತಿಹಾಸವನ್ನ ನಿರ್ಮಿಸಿ ಭಾರತಕ್ಕೆ ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಬಂದು ಇಳಿದ ಭಾರತೀಯ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಹೀಗಿದ್ದಾಗ ಸೂರ್ಯಕುಮಾರ್ ಯಾದವ್ ಈ ಸಮಯದಲ್ಲೇ ರೋಡ್ ಶೋ ಶುರುವಾಗುವ ಮೊದಲು, ಭಾರತ ತಂಡದ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ಹೊರಗೆ ಡಾನ್ಸ್ ಮಾಡಿದ್ದಾರೆ. ಮಸ್ತ್ ಮಸ್ತ್ ಸ್ಟೆಪ್ ಹಾಕಿ ತಾವು ಎಷ್ಟು ಕೂಲ್ ಕೂಲ್ ಅನ್ನೋದನ್ನ ಸೂರ್ಯಕುಮಾರ್ ಯಾದವ್ ಈಗ ಸಾಬೀತು ಮಾಡಿದ್ದಾರೆ.

ಭಾರತ ತಂಡ ದಕ್ಷಿಣ ಆಫ್ರಿಕಾ ಟೀಂ ವಿರುದ್ಧ, ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಇನ್ನೇನು ಕೊನೆಯ ಓವರ್ ಹಾಕುವಾಗ 16 ರನ್ ಮಾತ್ರ ಬೇಕಿತ್ತು. ಆಗ ಸಿಕ್ಸ್ ಹೋಗುತ್ತಿದ್ದ ಬಾಲ್‌ನ ಬೌಂಡರಿ ಲೈನ್ ಬಳಿ ತಡೆದಿದ್ದ ಸೂರ್ಯಕುಮಾರ್ ಯಾದವ್, ಅದನ್ನ ಕ್ಯಾಚ್ ಕೂಡ ಹಿಡಿದು ಹೀರೋ ಆಗಿಬಿಟ್ಟರು. ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ ಸಮೀಪ ಎಗರಿ ಕ್ಯಾಚ್ ಹಿಡಿದು ಭಾರತ ತಂಡದ ಗೆಲುವಿಗೆ ನೆರವಾಗಿ ನಿಂತರು.

ಸೂರ್ಯಕುಮಾರ್ ಯಾದವ್ ಎಡವಟ್ಟು?

ಹಾರ್ದಿಕ್ ಪಾಂಡ್ಯ ಬೌಲಿಂಗ್‌ನ ಮೊದಲನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಲಾಂಗ್‌ಆನ್‌ ಕಡೆಗೆ ಸಿಕ್ಸರ್ ಬಾರಿಸುವ ಪ್ರಯತ್ನ ಮಾಡಿದಾಗ ಅದ್ಭುತವಾದ ಕ್ಯಾಚ್ ಹಿಡಿದಿದ್ರು ಸೂರ್ಯಕುಮಾರ್ ಯಾದವ್. ಆದರೆ ಇದೇ ಕ್ಯಾಚ್ ಇದೀಗ ಭಾರತ ತಂಡಕ್ಕೆ ಮುಳುವಾಗಿದ್ದು, ಭಾರತ ವಿಶ್ವಕಪ್ ವಾಪಸ್ ಮಾಡಲಿ ಅಂತಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳು. ಆದರೆ ಇದೀಗ ಈ ಆರೋಪಕ್ಕೆ ಭಾರತದ ಕ್ರಿಕೆಟ್ ಅಭಿಮಾನಿಗಳು ಕೂಡ ಸೂಕ್ತವಾಗಿ ಉತ್ತರ ನೀಡುತ್ತಿದ್ದು, ಈ ಕ್ಯಾಚ್ ಸರಿಯಾಗೇ ಇದೆ ಕನ್ನಡಕ ಹಾಕಿಕೊಂಡು ನೋಡಿ ಅಂತಾ ತಿರುಗೇಟು ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+