ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಶ್ ರೈನಾ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ; ಇಲ್ಲಿದೆ ಅವರ ವೃತ್ತಿಜೀವನದ ಹೈಲೈಟ್ಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ನಿವೃತ್ತಿಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಜಾಹೀರುಗೊಳಿಸಿದ್ದಾರೆ.

"ನನ್ನ ದೇಶವನ್ನು ಮತ್ತು ಉತ್ತರಪ್ರದೇಶ ರಾಜ್ಯವನ್ನು ಪ್ರತಿನಿಧಿಸಿದ ಅವಕಾಶ ಸಿಕ್ಕಿದ್ದು ಒಂದು ದೊಡ್ಡ ಗೌರವ. ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತನಾಗುತ್ತಿದ್ದೇನೆಂದು ತಿಳಿಸಲು ಇಚ್ಛಿಸುತ್ತೇನೆ. ಬಿಸಿಸಿಐ, ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ, ಚೆನ್ನೈ ಸೂಪರ್ ಕಿಂಗ್ಸ್, ರಾಜೀವ್ ಶುಕ್ಲ ಸರ್ ಮತ್ತು ನನ್ನ ಎಲ್ಲಾ ಅಭಿಮಾನಿಗಳ ಬೆಂಬಲ ಹಾಗೂ ನನ್ನ ಸಾಮರ್ಥ್ಯದ ಬಗ್ಗೆ ಅವರೆಲ್ಲರೂ ಇರಿಸಿದ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ," ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡುವ ನಿರ್ಧಾರದಿಂದ ಹಿಂದೆ ಸರಿದ ಸೌರವ್ ಗಂಗೂಲಿಲೆಜೆಂಡ್ಸ್ ಲೀಗ್ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡುವ ನಿರ್ಧಾರದಿಂದ ಹಿಂದೆ ಸರಿದ ಸೌರವ್ ಗಂಗೂಲಿ

ಸುರೇಶ್ ರೈನಾ 18 ಟೆಸ್ಟ್, 226 ಓಡಿಐ, 78 ಟಿ20ಐ, 109 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅದರ ಜೊತೆಗೆ ಐಪಿಎಲ್‌ನಲ್ಲಿ 2008ರಿಂದ 2021ರವರೆಗೂ ಅನೇಕ ಪಂದ್ಯಗಳನ್ನು ಆಡಿದ್ದಾರೆ.

ಅವರ ಕೊನೆಯ ಟೆಸ್ಟ್ ಪಂದ್ಯ 2015ರಲ್ಲಿ ಆಗಿದ್ದು. 2018ರಲ್ಲಿ ಅವರು ಕೊನೆಯ ಐಪಿಎಲ್ ಪಂದ್ಯ ಆಡಿದ್ದು. ಹಾಗೆಯೇ ಅವರು ಬಲಿಷ್ಠರೆನಿಸಿದ್ದ ಟಿ20 ಕ್ರಿಕೆಟ್‌ನಲ್ಲೂ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು 2018ರಲ್ಲಿ. ಧೋನಿ ನಿವೃತ್ತಿ ಘೋಷಿಸಿದ್ದಾಗಲೇ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರಿಟೈರ್ಮೆಂಟ್ ಪ್ರಕಟಿಸಿದ್ದರು. ಇದೀಗ ಅವರು ದೇಶೀಯ ಕ್ರಿಕೆಟ್‌ನಲ್ಲೂ ಆಡುವುದಿಲ್ಲ. ಮುಂಬರುವ ರಣಜಿ ಸೀಸನ್‌ನಲ್ಲಿ ಉತ್ತರಪ್ರದೇಶ ತಂಡಕ್ಕೆ ಸುರೇಶ್ ರೈನಾ ಅನುಪಸ್ಥಿತಿ ಕಾಡಬಹುದು.

ಇದೇ ಮನೆಯಲ್ಲೇ ಅಥಿಯಾ- ಕೆಎಲ್ ರಾಹುಲ್ ಮದುವೆ ಸಂಭ್ರಮಇದೇ ಮನೆಯಲ್ಲೇ ಅಥಿಯಾ- ಕೆಎಲ್ ರಾಹುಲ್ ಮದುವೆ ಸಂಭ್ರಮ

ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ 35 ವರ್ಷದ ಸುರೇಶ್ ರೈನಾ ಬೇರೆ ದೇಶಗಳ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಆಡುವ ಇಚ್ಛೆ ಹೊಂದಿದ್ದಾರೆ. ಇನ್ನೂ 2-3 ವರ್ಷ ಅವರು ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡು, ನಂತರ ಕೇವಲ ಕಾಮೆಂಟೇಟರ್ ಆಗಿ ಮುಂದುವರಿಯುವ ನಿರೀಕ್ಷೆ ಇದೆ.

 ಐಪಿಎಲ್ ಕಥೆ?

ಐಪಿಎಲ್ ಕಥೆ?

ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿದ್ದ ಅವರನ್ನು 2022ರ ಐಪಿಎಲ್ ಸೀಸನ್‌ನಲ್ಲಿ ಯಾವ ತಂಡವೂ ಖರೀದಿಸಲಿಲ್ಲ. ಅಲ್ಲಿಗೆ ಸುರೇಶ್ ರೈನಾ ಐಪಿಎಲ್ ವೃತ್ತಿ ಮುಗಿದಂತೇ ಆಗಿತ್ತು. ಧೋನಿ ಇರುವವರೆಗೂ ಐಪಿಎಲ್ ಆಡುತ್ತೇನೆಂದು ಹೇಳಿರುವ ಅವರು ಮುಂಬರುವ ಸೀಸನ್‌ನಲ್ಲಿ ಆಡುವುದು ಅನುಮಾನ. ವರದಿಗಳ ಪ್ರಕಾರ ಅವರು ಐಪಿಎಲ್‌ಗೂ ಗುಡ್‌ಬೈ ಹೇಳುವ ಸಾಧ್ಯತೆ ಇದೆ.

2022ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನನ್ನು ಖರೀದಿಸಲಿಲ್ಲ ಎಂಬುದು ಸುರೇಶ್ ರೈನಾಗೆ ನೋವು ತಂದಿದೆ ಎಂದು ಹೇಳಲಾಗುತ್ತದೆ. ಐಪಿಎಲ್ ಬದಲು ಅವರು ಸೌತ್ ಆಫ್ರಿಕಾ, ಶ್ರೀಲಂಕಾ, ಯುಎಇ ಮೊದಲಾದ ದೇಶಗಳ ಟಿ20 ಲೀಗ್‌ಗಳಲ್ಲಿ ಆಡಲು ಮುಂದಾಗಬಹುದು ಎಂದು ಹಿಂದಿ ಪತ್ರಿಕೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ.

 ರೋಡ್ ಸೇಫ್ಟಿ ಸೀರೀಸ್

ರೋಡ್ ಸೇಫ್ಟಿ ಸೀರೀಸ್

ಸೆಪ್ಟೆಂಬರ್ 10ರಂದು ಆರಂಭವಾಗಲಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಿಯಲ್ಲಿ ಸುರೇಶ್ ರೈನಾ ಆಡಲಿದ್ದಾರೆ. ಸಚಿನ್ ತೆಂಡೂಲ್ಕರ್ ನಾಯಕತ್ವದ ತಂಡದಲ್ಲಿ ಸುರೇಶ್ ರೈನಾ ಇದ್ದಾರೆ.

"ನಾನು ರೋಡ್ ಸೇಫ್ಟಿ ಸೀರೀಸ್‌ನಲ್ಲಿ ಆಡುತ್ತೇನೆ. ಸೌತ್ ಆಫ್ರಿಕಾ, ಶ್ರೀಲಂಕಾ ಮತ್ತು ಯುಎಇಯ ಟಿ20 ಫ್ರಾಂಚೈಸಿಗಳು ನನ್ನನ್ನು ಸಂಪರ್ಕಿಸಿ ಮಾತನಾಡಿವೆ. ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ದೈನಿಕ್ ಜಾಗರಣ್ ಪತ್ರಿಕೆಗೆ ಸುರೇಶ್ ರೈನಾ ತಿಳಿಸಿದ್ದಾರೆ.

"ನಾನು ಇನ್ನೂ ಎರಡು ಅಥವಾ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಬಯಸಿದ್ದೇನೆ. ಉತ್ತರಪ್ರದೇಶ ಕ್ರಿಕೆಟ್‌ನಲ್ಲಿ ಒಳ್ಳೊಳ್ಳೆಯ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ನಾನು ಎನ್‌ಒಸಿ ಪಡೆದಿದ್ದೇನೆ. ಬಿಸಿಸಿಐ ಅಧ್ಯಕ್ಷ ಜಯ್ ಶಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾಗೆ ನನ್ನ ನಿವೃತ್ತಿ ನಿರ್ಧಾರ ತಿಳಿಸಿದ್ದೇನೆ" ಎಂದೂ ರೈನಾ ಸ್ಪಷ್ಟಪಡಿಸಿದ್ದಾರೆ.

 ಸುರೇಶ್ ರೈನಾ ಕ್ರಿಕೆಟ್ ವೃತ್ತಿ

ಸುರೇಶ್ ರೈನಾ ಕ್ರಿಕೆಟ್ ವೃತ್ತಿ

ಟೆಸ್ಟ್ ಕ್ರಿಕೆಟ್
ಪಂದ್ಯ: 18
ರನ್: 768
ಸರಾಸರಿ: 26.48
ಶತಕ: 1
ಅರ್ಧಶತಕ: 7
ವಿಕೆಟ್: 13

ಓಡಿಐ ಕ್ರಿಕೆಟ್:
ಪಂದ್ಯ: 226
ರನ್: 5615
ಸರಾಸರಿ: 35.31
ಶತಕ: 5
ಅರ್ಧಶತಕ: 36
ವಿಕೆಟ್: 36

ಪ್ರಥಮ ದರ್ಜೆ ಕ್ರಿಕೆಟ್
ಪಂದ್ಯ: 109
ರನ್: 6871
ಸರಾಸರಿ: 42.15
ಶತಕ: 14
ಅರ್ಧಶತಕ: 45
ವಿಕೆಟ್: 41

 ರೈನಾ ಮತ್ತು ಟಿ20 ಕ್ರಿಕೆಟ್

ರೈನಾ ಮತ್ತು ಟಿ20 ಕ್ರಿಕೆಟ್

ಟಿ20ಐ ಕ್ರಿಕೆಟ್
ಪಂದ್ಯ: 78
ರನ್: 1605
ಸರಾಸರಿ: 29.18
ಶತಕ: 1
ಅರ್ಧಶತಕ: 5
ವಿಕೆಟ್: 13

ಐಪಿಎಲ್ ಕ್ರಿಕೆಟ್
ಪಂದ್ಯ: 336
ರನ್: 8654
ಸರಾಸರಿ: 32.17
ಶತಕ: 4
ಅರ್ಧಶತಕ: 53
ವಿಕೆಟ್: 54

English summary
Suresh Raina Who Announced Retirement from International cricket 2 years back, has decided to bid farewell to all forms of cricket. He may continue playing cricket with some foreign franchise leagues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X