Dhruv Jurel: ಈತನೇ ಮುಂದಿನ ಎಂಎಸ್ ಧೋನಿ; ಧ್ರುವ್ ಜುರೆಲ್‌ರನ್ನು ಹೊಗಳಿದ ಗವಾಸ್ಕರ್

ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಭಾರತ ತಂಡದ ಪಾಲಿಗೆ ಹೀರೋ ಆಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಆಸರೆಯಾಗಿದ್ದು ಧ್ರುವ್ ಜುರೆಲ್.

ಕುಲದೀಪ್ ಯಾದವ್‌ ಅವರ ಜೊತೆಗೂಡಿ ಧ್ರುವ್ ಜುರೆಲ್ 202 ಎಸೆತಗಳಲ್ಲಿ 77 ರನ್‌ ಕಲೆಹಾಕುವ ಮೂಲಕ ಭಾರತ ತಂಡ ಬೃಹತ್ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದರು. ಆಕಾಶ್ ದೀಪ್ ಜೊತೆ 40 ರನ್ ಕಲೆಹಾಕಿದ ಜುರೆಲ್, ಅಂತಿಮವಾಗಿ 90 ರನ್ ಗಳಿಸಿದ್ದಾಗ ಟಾಮ್ ಹಾರ್ಟ್ಲಿ ಅವರ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಭಾರತದ ಇನ್ನಿಂಗ್ಸ್ ಅಂತ್ಯವಾಯಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹಿನ್ನಡೆಯನ್ನು 46 ರನ್‌ಗಳಿಗೆ ಕಡಿಮೆ ಮಾಡಿದರು.

 Sunil Gavaskars High Praise: Dhruv Jurel Poised as the Next MS Dhoni

149 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 90 ರನ್ ಗಳಿಸಿದ ಜುರೆಲ್ ಭಾರತ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಬೌಲರ್ ಗಳ ಜೊತೆಯಾಗಿಟ್ಟುಕೊಂಡು ಅವರು ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಜುರೆಲ್ ಅವರ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಮುಂದಿನ ಧೋನಿ ಎಂದ ಗವಾಸ್ಕರ್

ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ವಿಕೆಟ್‌ಕೀಪರ್ ಧ್ರುವ್ ಜುರೆಲ್ ಅವರ ಬ್ಯಾಟಿಂಗ್‌ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಧ್ರುವ್ ಜುರೆಲ್ ಅವರ ಆಟದ ರೀತಿಯನ್ನು ಮನಸಾರೆ ಶ್ಲಾಘಿಸಿದರು. ಪರಿಸ್ಥಿತಿಗೆ ತಕ್ಕಂತೆ ಆಡುವ ಅವರ ಯೋಜನೆಯನ್ನು ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲದೆ ಭಾರತದ ದಂತಕಥೆ, ಮಾಜಿ ನಾಯಕ ವಿಕೆಟ್ ಕೀಪರ್ ಎಂಎಸ್ ಧೋನಿಗೆ ಹೋಲಿಸಿದರು.

"ಧ್ರುವ್ ಜುರೆಲ್ ಅವರ ಪ್ರೆಸೆನ್ಸ್ ಆಫ್ ಮೈಂಡ್‌ ಅನ್ನು ನೋಡಿದಾಗ ಅವರು ಮುಂದಿನ ಎಂಎಸ್ ಧೋನಿ ಎಂದು ನಾನು ಭಾವಿಸುತ್ತೇನೆ" ಎಂದು ಗವಾಸ್ಕರ್ ಸ್ಪೋರ್ಟ್ಸ್ 18 ನಲ್ಲಿ ಕಾಮೆಂಟರಿ ಸಮಯದಲ್ಲಿ ಹೇಳಿದರು. ಜುರೆಲ್ ಅವರು ರಾಂಚಿಯಲ್ಲಿ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಿದರೆ, ಅವರು ಮುಂದೆ ಸಾಕಷ್ಟು ಶತಕಗಳನ್ನು ಗಳಿಸುತ್ತಾರೆ ಎಂದು ಗವಾಸ್ಕರ್ ಸಲಹೆ ನೀಡಿದರು.

"ಇಂದು ಅವರು ಶತಕವನ್ನು ಕಳೆದುಕೊಂಡಿದ್ದಾರೆ ಆದರೆ ಯಾವುದೇ ತಪ್ಪು ಮಾಡಬೇಡಿ ಈ ಯುವಕ ತನ್ನ ಮನಸ್ಥಿತಿಯಿಂದಾಗಿ ಅನೇಕ ಶತಕಗಳನ್ನು ಗಳಿಸುತ್ತಾನೆ" ಎಂದು ಗವಾಸ್ಕರ್ ಊಟದ ವಿರಾಮದ ಸಮಯದಲ್ಲಿ ಹೇಳಿದರು.

ಜುರೆಲ್ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಪದಾರ್ಪಣಾ ಪಂದ್ಯದಲ್ಲೇ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸಿ ಭರವಸೆ ಮೂಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+