ವಿರಾಟ್ ಕೊಹ್ಲಿಯನ್ನು ಹೀಯಾಳಿಸುತ್ತಿರುವ ಸುನಿಲ್ ಗವಾಸ್ಕರ್ ಆವತ್ತು ಆಡಿದ್ದು ಎಂತಹ ಕಚಡಾ ಆಟ ಗೊತ್ತೆ?

ವಿರಾಟ್ ಕೊಹ್ಲಿ ಬಗ್ಗೆ ಸುನಿಲ್ ಗವಾಸ್ಕರ್ ಪದೇ ಪದೇ ನಾಲಿಗೆ ಹರಿಬಿಟ್ಟು ಮಾತನಾಡುತ್ತಾ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ 118ರ ಸ್ಟ್ರೈಕ್ ರೇಟ್‌ನಲ್ಲಿ ವಿರಾಟ್ ಕೊಹ್ಲಿ ಇದೀಗ ಆಟ ಆಡಿದ್ದರೂ, ಕೊಹ್ಲಿ ಸರಿಯಾಗಿ ಆಡುತ್ತಿಲ್ಲ ಅಂತಾ ಸುನಿಲ್ ಗವಾಸ್ಕರ್ ಮಾತನಾಡಿ ಟ್ರೋಲ್ ಆಗಿದ್ದರು. ಇದೇ ಸುನಿಲ್ ಗವಾಸ್ಕರ್ 1975ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಎಂತಹ ಕಚಡಾ ಆಟ ಆಡಿ ಭಾರತದ ಸೋಲಿಗೆ ಕಾರಣವಾಗಿದ್ದರು ಗೊತ್ತಾ? ಈ ಕುರಿತು ವಿರಾಟ್ ಕೊಹ್ಲಿ ಅಭಿಮಾನಿಗಳು ಇದೀಗ ವಿಡಿಯೋ ಒಂದನ್ನ ಮಾಡಿ ವೈರಲ್ ಮಾಡ್ತಿದ್ದಾರೆ!

ಹೌದು ಕೆಲವು ದಿನಗಳ ಹಿಂದೆ ಐಪಿಎಲ್ ಕಾಮೆಂಟರಿ ಹೇಳುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಸುನಿಲ್ ಗವಾಸ್ಕರ್ ಒಂದು ಮಾತು ಹೇಳಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ಸ್ಲೋ ಬ್ಯಾಟಿಂಗ್ ಆಡುತ್ತಾರೆ, ಅವರ ಸ್ಟ್ರೈಕ್ ರೇಟ್ ಸರಿ ಇಲ್ಲ ಅಂತಾ ಹೇಳಿದ್ದರು. ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಸ್ವತಃ ವಿರಾಟ್ ಕೊಹ್ಲಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿ, ಕಮೆಂಟ್ರಿ ಮಾಡುತ್ತಾ ನನ್ನ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡೋದು ಬೇಡ ಅಂತಾ ವಾರ್ನಿಂಗ್ ಕೊಟ್ಟಿದ್ದರು.

Sunil Gavaskar Who Speaking About Virat Kohli Strike Rate Now Once Scored Only 36 Runs From 174 Ball

ಗವಾಸ್ಕರ್ ಕಚಡಾ ಆಟ ಆಡಿದ್ರಾ?

ಹೀಗಿದ್ದರೂ ಸುನಿಲ್ ಗವಾಸ್ಕರ್ ಮತ್ತೆ ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿದ್ದಾರೆ. ಹೀಗಿದ್ದಾಗ ಸುನಿಲ್ ಗವಾಸ್ಕರ್ ಎಂತಹ ಕಚಡಾ ಆಟ ಆಡಿ ಭಾರತವನ್ನು ಸೋಲಿಸಿದ್ದರು ಗೊತ್ತಾ? ಅಂತಾ ಕೊಹ್ಲಿ ಫ್ಯಾನ್ಸ್ ವಿಡಿಯೋ ಸಮೇತ ಪಶ್ನೆಯ ಮಾಡುತ್ತಿದ್ದಾರೆ. ಅದರಲ್ಲೂ ಭಾರತ ತಂಡ 1975ರ ಕ್ರಿಕೆಟ್ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಾಣಲು ಇದೇ ಸುನಿಲ್ ಗವಾಸ್ಕರ್ ಕಾರಣ ಎಂಬ ಆರೋಪವು ಕೂಡ ಇತ್ತು. ಅದೇ ವಿಡಿಯೋ ಇಟ್ಕೊಂಡು ಈಗ ಸುನಿಲ್ ಗವಾಸ್ಕರ್‌ಗೆ ಕೊಹ್ಲಿ ಅಭಿಮಾನಿಗಳು ಪ್ರಶ್ನೆ ಹಾಕುತ್ತಿದ್ದಾರೆ.

ಭಾರತದ ಸೋಲಿಗೆ ಗವಾಸ್ಕರ್ ಕಾರಣ?

1975ರ ಜೂನ್ 07 ರಂದು ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಆಗ ನಿಗದಿ ಮಾಡಲಾಗುತ್ತಿದ್ದ 60 ಓವರ್ ಆಟದಲ್ಲಿ ಬರೋಬ್ಬರಿ 334 ರನ್ ಕಲೆಹಾಕಿತ್ತು. ಆಗಿನ ಕಾಲಕ್ಕೆ ಇದು ದೊಡ್ಡ ಮೊತ್ತವೇ ಆಗಿತ್ತು. 4 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದ್ದ ಇಂಗ್ಲೆಂಡ್ ಭಾರತಕ್ಕೆ 335 ರನ್ ಗುರಿಯನ್ನ ಕೊಟ್ಟಿತ್ತು. ಆದರೆ ಭಾರತ ತಂಡ ನಿಗದಿತ 60 ಓವರ್ ಆಟದಲ್ಲಿ, 132 ರನ್ ಗಳಿಸಿ ಕೇವಲ 3 ವಿಕೆಟ್ ಕಳೆದುಕೊಂಡಿತ್ತು. ಎಲ್ಲರೂ ಸೇರಿ ಬಾಲ್ ವೇಸ್ಟ್ ಮಾಡಿ ಮ್ಯಾಚ್ ಸೋತಿದ್ದಾರೆ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.

ಅದ್ರಲ್ಲೂ ಇದೇ ಸುನಿಲ್ ಗವಾಸ್ಕರ್ ಭರ್ಜರಿ 174 ಬಾಲ್ ಆಡಿ ಕೇವಲ 36 ರನ್ ಗಳಿಸಿದ್ದರು. ಈ ಮೂಲಕ ಸುನಿಲ್ ಗವಾಸ್ಕರ್ ಅಂದು ಕೇವಲ 20.68 ಸ್ಟ್ರೈಕ್ ರೇಟ್‌ನಲ್ಲಿ ಆಟ ಮುಗಿಸಿದ್ರು. ಹೀಗಾಗಿ ಇದೀಗ ಕೊಹ್ಲಿ ಫ್ಯಾನ್ಸ್ ಈ ವಿಡಿಯೋ ಮುಂದಿಟ್ಟು ಪ್ರಶ್ನೆ ಮಾಡುತ್ತಿದ್ದಾರೆ. ಹಾಗೇ ಸುನೀಲ್ ಗವಾಸ್ಕರ್ ಅವರಿಗೆ, ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಅಂತಿದ್ದಾರೆ ಕೊಹ್ಲಿ ಪ್ಯಾನ್ಸ್. 20 ಸ್ಟ್ರೈಕ್ ರೇಟ್ ಪಡೆದಿದ್ದ ಸುನಿಲ್ ಗವಾಸ್ಕರ್ ಈಗ ವಿರಾಟ್ ಕೊಹ್ಲಿ ಅವರ 118 ಸ್ಟ್ರೈಕ್ ರೇಟ್ ಬಗ್ಗೆ ಯಾಕೆ ಮಾತನಾಡಬೇಕು? ಅಂತಿದ್ದಾರೆ.

ಕೊಹ್ಲಿ ಕೆಣಕಿದರೆ ಮುಗೀತು ಕಥೆ!

ವಿರಾಟ್ ಕೊಹ್ಲಿ ವಿರುದ್ಧ ಕ್ರಿಕೆಟ್ ಮೈದಾನದಲ್ಲಿ ಎಗರಾಡಿ ಗೆದ್ದವರು ಯಾರೂ ಇಲ್ಲ ಬಿಡಿ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಇರುವ ಕೆಪಾಸಿಟಿ ಏನು ಅಂತಾ ಎಲ್ಲರಿಗೂ ಗೊತ್ತು. ಒಮ್ಮೆ ಎದುರಾಳಿ ತಂಡದ ಆಟಗಾರರು ಕೆಣಕಿಕೊಂಡು ಬಂದರೆ, ವಿರಾಟ್ ಕೊಹ್ಲಿ ಅಲ್ಲೇ ಡ್ರಾ & ಅಲ್ಲೇ ಬಹುಮಾನ ಅಂತಾ ಘೋಷಣೆ ಮಾಡಿ ಬಿಡುತ್ತಾರೆ. ಇಷ್ಟು ಇಲ್ಲದಿದ್ದರೆ ವಿರಾಟ್‌ಗೆ ಆಸ್ಟ್ರೇಲಿಯಾ ತಂಡವನ್ನು ಸೈಲೆಂಟ್ ಮಾಡುವುದು ಸಾಧ್ಯವಾಗುತ್ತಿತ್ತಾ? ಅಥವಾ ಜಗತ್ತಿಗೇ ಸ್ಲೆಡ್ಜಿಂಗ್ ಮಾಡುವುದನ್ನ ಕಲಿಸಿಕೊಟ್ಟ ಆಸ್ಟ್ರೇಲಿಯಾ ಆಟಗಾರರು ವಿರಾಟ್ ಕೊಹ್ಲಿಯನ್ನ ಕಂಡು ಸೈಲೆಂಟ್ ಆಗಿದ್ದು ನಿಮಗೆಲ್ಲಾ ಗೊತ್ತು. ಅದೇ ರೀತಿ ಈಗ ಸುನೀಲ್ ಗವಾಸ್ಕರ್ ಕೂಡ ಸೈಲೆಂಟ್ ಆಗುತ್ತಾರೆ ನೋಡಿ ಅಂತಿದ್ದಾರೆ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+