Get Updates
Get notified of breaking news, exclusive insights, and must-see stories!

Kavya Maran: ಸನ್‌ರೈಸರ್ಸ್‌ ಫೈನಲ್‌ಗೆ ಕಾವ್ಯಾ ಮಾರನ್‌ ಫುಲ್‌ ಖುಷ್: ವಿಡಿಯೋ ಸಖತ್ ವೈರಲ್‌

ಐಪಿಎಲ್‌ 2024ರ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಜಯ ಸಾಧಿಸಿರುವ ಸನ್‌ರೈಸರ್ಸ್‌ ಹೈದರಬಾದ್ ತಂಡ ಫೈನಲ್‌ಗೆ ಕ್ವಾಲಿಫೈ ಆಗಿದೆ. ಕಳೆದ ಕೆಲವು ಋತುವಿನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ತಂಡ, ಈ ಬಾರಿ ಸ್ಥಿರ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದೆ.

ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್‌ ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ 36 ರನ್‌ಗಳ ಭರ್ಜರಿ ಜಯ ಸಾಧಿಸಿ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದೆ. ಸಾಧಾರಣ ಮೊತ್ತವನ್ನು ಡಿಫೆಂಡ್‌ ಮಾಡಿಕೊಂಡ ಪ್ಯಾಟ್‌ ಕಮಿನ್ಸ್ ತಂಡ ಅಬ್ಬರಿಸಿತು. ಈ ಮೂಲಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಸನ್‌ ತಂಡ ಫೈನಲ್‌ಗೆ ಅರ್ಹತೆ ಪಡೆಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು. ಅದರಂತೆ ಸನ್‌ರೈಸರ್ಸ್‌ ಸಿಇಒ ಕಾವ್ಯಾ ಮಾರನ್‌ ಫುಲ್‌ ಎಂಜಾಯ್ ಮಾಡಿದರು.

SRH Triumphs Over RR to Enter IPL 2024 Final Fans React

ಕಾವ್ಯಾ ಮಾರನ್ ತಮ್ಮ ತಂಡ ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಅವರು ತಮ್ಮೊಂದಿಗೆ ಕುಳಿತಿದ್ದ ಎಲ್ಲ ಸದಸ್ಯರೊಂದಿಗೆ ಹೈ-ಫೈವ್ ಮಾಡಿದರು. ಆಗ ಕಾವ್ಯ ಮತ್ತೆ ಓಡಿ ಬಂದು ತಂದೆ ಕಲಾನಿಧಿ ಮಾರನ್ ಅವರನ್ನು ತಬ್ಬಿಕೊಂಡರು. 2018ರ ಋತುವಿನಲ್ಲಿ ಹೈದರಾಬಾದ್ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆಗ ತಂಡ ಸೋಲನುಭವಿಸಿತು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಒಂದೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದಿತ್ತು.

ಮೈದಾನದಲ್ಲಿ ಸಂಭ್ರಮ

ರಾಜಸ್ಥಾನ ರಾಯಲ್ಸ್ ತಂಡವನ್ನು ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮಣಿಸಿ ಅಬ್ಬರಿಸಿತು. ಅಭಿಮಾನಿಗಳು ಫುಲ್‌ ಜೋಶ್‌ನಲ್ಲಿ ಕುಣಿದಾಡಿದರು. ಇತ್ತ ಕಾವ್ಯಾ ಮಾರನ್‌ ಸಹ ಭರ್ಜರಿ ಸಂಭ್ರಮ ಪಟ್ಟರು. ಸನ್‌ ತಂಡ ಗೆಲ್ಲುತ್ತಿದ್ದಂತೆ ಕ್ಲ್ಯಾಪ್‌ ಮಾಡಿದ ಅವರು, ನಂತರ ಎದ್ದು ತಮ್ಮ ತಂದೆಯನ್ನು ಅಪ್ಪಿ ಖುಷಿ ಪಟ್ಟರು.

ಎಸ್‌ಎ ಟಿ20 ಚಾಂಪಿಯನ್

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಒಡೆತದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಎಸ್‌ಎ ಟಿ20 ಲೀಗ್‌ನ ಚಾಂಪಿಯನ್‌ಪಟ್ಟವನ್ನು ಅಲಂಕರಿಸಿತ್ತು. ಈಗ ಇದೇ ಸಾಧನೆಯನ್ನು ಐಪಿಎಲ್‌ನಲ್ಲಿ ಮಾಡಲು ಎದುರು ನೋಡುತ್ತಿದೆ. ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ, ಕೆಕೆಆರ್ ತಂಡವನ್ನು ಎದುರಿಸಲಿದೆ.

ಪಂದ್ಯದ ಸಾರಾಂಶ

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 175 ರನ್‌ ಸೇರಿಸಿತು. ಸನ್‌ ತಂಡದ ಪರ ರಾಹುಲ್ ತ್ರಿಪಾಠಿ 37, ಹೆನ್ರಿಚ್ ಕ್ಲಾಸೆನ್ 50 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಸಾಧಾರಣ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ತಂಡ ಯಶಸ್ವಿ ಜೈಸ್ವಾಲ್‌ ಹಾಗೂ ಧ್ರುವ್ ಜುರೇಲ್‌ ಅವರ ಸಮಯೋಚಿತ ಆಟದ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆರ್‌ಆರ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 139 ರನ್‌ ಸೇರಿಸಿತ್ತು.

ಸನ್‌ ತಂಡದ ಪರ ಶಹಬಾಜ್‌ ಅಹ್ಮದ್‌ 3, ಅಭಿಷೇಕ್ ಶರ್ಮಾ 2 ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಮಿಂಚಿದರು.

SRH Triumphs Over RR to Enter IPL 2024 Final Fans React

ಕೆಕೆಆರ್‌ V/S ಎಸ್‌ಆರ್‌ಎಚ್‌

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್‌, ಎಸ್‌ಆರ್‌ಎಚ್‌ ತಂಡವನ್ನು ಮಣಿಸಿ, ನೇರವಾಗಿ ಫೈನಲ್‌ಗೆ ಕ್ವಾಲಿಫೈ ಆಗಿತ್ತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಜಯ ಸಾಧಿಸಿರುವ ಎಸ್‌ಆರ್‌ಎಚ್‌ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಫೈನಲ್ ಪಂದ್ಯದಲ್ಲಿ ಪ್ರಸಕ್ತ ಋತುವಿನಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವ ತಂಡಗಳ ನಡುವೆ ಫೈಟ್ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+