RCB: ಕೊಹ್ಲಿ, ಎಬಿಡಿ ನನಗಿಷ್ಟ; ಆರ್‌ಸಿಬಿ ತಂಡಕ್ಕೆ ಆಡುವುದು ನನ್ನ ಕನಸು ಎಂದ ಎಸ್ಆರ್ಎಚ್ ಸ್ಫೋಟಕ ಬ್ಯಾಟರ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಐಪಿಎಲ್‌ನಲ್ಲಿ ಅಬ್ಬರಿಸಿದ್ದರು. ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು, ಆದರೆ ಗಾಯದ ಸಮಸ್ಯೆಯಿಂದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಂಡದಿಂದ ಹೊರಗುಳಿಯಬೇಕಾಯಿತು. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಮತ್ತೆ ಮೈದಾನಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ.
ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ನಿತೀಶ್ ಕುಮಾರ್ ರೆಡ್ಡಿ, ಕಳೆದ 10 ವರ್ಷಗಳಿಂದ ಆರ್‌ಸಿಬಿ ತಂಡದ ಅಭಿಮಾನಿ ಎನ್ನುವುದು ಸಾಕಷ್ಟು ಜನಕ್ಕೆ ಗೊತ್ತಿಲ್ಲ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

2024ರ ಐಪಿಎಲ್‌ನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 303 ರನ್‌ಗಳನ್ನು ಗಳಿಸುವ ಮೂಲಕ ಭವಿಷ್ಯದ ಸರಣಿಗೆ 'ಉದಯೋನ್ಮುಖ ಆಟಗಾರ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 143 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ 3 ವಿಕೆಟ್ ಪಡೆದುಕೊಂಡಿದ್ದರು. ಸೆಪ್ಟೆಂಬರ್ 5 ರಂದು ದುಲೀಪ್ ಟ್ರೋಫಿ ಆರಂಭವಾಗಲಿದ್ದು ಆ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗಲು ಕೆಲಸ ಮಾಡುತ್ತಿದ್ದಾರೆ.
ಕಳೆದ ವರ್ಷಗಳಿಂದ ನಾನು ಆರ್ ಸಿಬಿ ತಂಡದ ಅಭಿಮಾನಿ, ವಿರಾಟ್ ಕೊಹ್ಲಿಯನ್ನು ಮೊದಲು ಭೇಟಿಯಾದಾಗ ಮತ್ತು ಅವರ ಕೈ ಕುಲುಕಿದಾಗ ಮತ್ತು ಅವರ ಹಸ್ತಾಕ್ಷರವನ್ನು ಪಡೆದದ್ದನ್ನು ನಿತೀಶ್ ನೆನಪಿಸಿಕೊಂಡರು. 21ರ ಹರೆಯದ ಅವರು ಆರ್‌ಸಿಬಿ ವಿರುದ್ಧ ಉತ್ತಮವಾಗಿ ಆಡಿದರೆ ವಿರಾಟ್ ಕೊಹ್ಲಿ ನನ್ನನ್ನು ಗುರುತಿಸುತ್ತಾರೆ ಎಂದು ನಂಬಿದ್ದರಂತೆ.
ನಾನು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಅಭಿಮಾನಿ. ಕಳೆದ 10 ವರ್ಷಗಳಿಂದ ಆರ್‌ಸಿಬಿಯ ದೊಡ್ಡ ಅಭಿಮಾನಿಯಾಗಿದ್ದೇನೆ. 2023 ರಲ್ಲಿ, ವಿರಾಟ್ ಕೊಹ್ಲಿಯನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ನಾನು ಅವರ ಬಳಿ ಹೆಚ್ಚು ಕೇಳುವುದೇನು ಇರಲಿಲ್ಲ. 2024 ರಲ್ಲಿ ಅವರ ಕೈ ಕುಲುಕಲು ಮತ್ತು ಅವರ ಹಸ್ತಾಕ್ಷರವನ್ನು ಪಡೆಯಲು ನಾನು ಬಯಸಿದ್ದೆ, ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನನ್ನ ಆಟವನ್ನು ಗಮನಿಸುತ್ತಾರೆ, ಆದರೆ ನಂತರದ ಸಮಯದಲ್ಲಿ ಅವರು ನನ್ನ ಹೆಸರನ್ನು ನೆನಪಿಸಿಕೊಂಡರು ಎಂದು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ನಿತೀಶ್ ಅಂಡರ್-16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ತ್ರಿಶತಕ ಮತ್ತು ಕರ್ನಾಟಕದ ಪ್ರಬಲ ಬೌಲಿಂಗ್ ದಾಳಿಯ ವಿರುದ್ಧ 190 ರನ್ ಗಳಿಸಿ ಗಮನ ಸೆಳೆದಿದ್ದರು. ಪಂದ್ಯಾವಳಿಯ 2017-18 ಆವೃತ್ತಿಯಲ್ಲಿ 1,237 ರನ್ ಗಳಿಸಿದ್ದರು.
ಕಳಪೆ ಪ್ರದರ್ಶನದಿಂದ ನಿರಾಶೆಗೊಂಡ ನಿತೀಶ್ 2019 ರಲ್ಲಿ ಕೇವಲ ಬ್ಯಾಟರ್ ಆಗಿ ಆಡಲು ನಿರ್ಧರಿಸಿದರು, ಆದರೆ ಅವರ ತರಬೇತುದಾರರಲ್ಲಿ ಒಬ್ಬರಾದ ಶ್ರೀನಿವಾಸ್ ರೆಡ್ಡಿ ಅವರನ್ನು ಬೌಲರ್ ಆಗಿ ಮುಂದುವರಿಸಲು ಪ್ರೋತ್ಸಾಹಿಸಿದರು, ಭಾರತದಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಅವಕಾಶ ಇರುವುದನ್ನು ತಿಳಿಸಿದರು.
2023 ರ ಐಪಿಎಲ್‌ಗೆ ಮುಂಚಿತವಾಗಿ ಎಸ್‌ಆರ್‌ಹೆಚ್ ಆಯ್ಕೆ ಮಾಡಲಾಯಿತು ಆದರೆ ಅವರು ಕೇವಲ ಎರಡು ಪಂದ್ಯಗಳನ್ನು ಆಡಬೇಕಾಯಿತು, ಹೆಚ್ಚಿನ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಆದರೆ 2024ರ ಐಪಿಎಲ್‌ನಲ್ಲಿ ಅವರು ಅಬ್ಬರಿಸಿದರು.
2025ರ ಐಪಿಎಲ್‌ಗೆ ಮುನ್ನ ಮೆಗಾ ಹರಾಜು ನಡೆಯಲಿದ್ದು, ನಿತೀಶ್ ರೆಡ್ಡಿಯವರನ್ನು ಎಸ್‌ಆರ್ ಎಚ್ ಬಿಡುಗಡೆ ಮಾಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಬಹುದು.












Click it and Unblock the Notifications