Gambhir vs Sreesanth: ಮೈದಾನದಲ್ಲೇ ಕಿತ್ತಾಡಿಕೊಂಡ ಗಂಭೀರ್ ಮತ್ತು ಶ್ರೀಶಾಂತ್
ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಲೆಜೆಂಡ್ಸ್ ಲೀಗ್ ಪಂದ್ಯದಲ್ಲಿ ಭಾರತದ ಮಾಜಿ ಕ್ರಿಕೆಟಿಗರಾದ ಎಸ್ ಶ್ರೀಶಾಂತ್ ಮತ್ತು ಗೌತಮ್ ಗಂಭೀರ್ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದಾರೆ.
ಪಂದ್ಯ ನಡೆಯುವ ಸಂದರ್ಭದಲ್ಲಿ ಇಬ್ಬರೂ ಕೂಡ ವಾಗ್ವಾದದಲ್ಲಿ ತೊಡಗಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದೆ. ಮಾತಿನ ವಿನಿಮಯವು ವೈಯಕ್ತಿಕ ತಿರುವು ಪಡೆದುಕೊಂಡಿತು, ಘಟನೆಯ ಬಗ್ಗೆ ಶ್ರೀಶಾಂತ್ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಎಲ್‌ಎಲ್‌ಸಿ ಪಂದ್ಯದ ಸಮಯದಲ್ಲಿ ಭಿನ್ನಾಭಿಪ್ರಾಯವು ಉಂಟಾಗಿದೆ, ಇಬ್ಬರ ನಡುವೆ ವಾಗ್ವಾದ ನಡೆದಾಗ ಆಟಗಾರರು ಮತ್ತು ಅಂಪೈರ್‌ಗಳು ಮಧ್ಯಪ್ರವೇಶಿಸಿದ್ದಾರೆ. ಎಸ್ ಶ್ರೀಶಾಂತ್ ಇನ್‌ಸ್ಟಾಗ್ರಾಮ್ ವೀಡಿಯೊ ಘಟನೆ ಬಗ್ಗೆ ಮಾಹಿತಿಯನ್ನು ನೀಡಿದೆ. ವೀಡಿಯೊದಲ್ಲಿ, ಗೌತಮ್ ಗಂಭೀರ್ ಯಾವುದೇ ಪ್ರಚೋದನೆಯಿಲ್ಲದೆ ತನ್ನ ವಿರುದ್ಧ ಅತ್ಯಂತ ಅಸಭ್ಯವಾದ ಪದ ಬಳಸಿದ್ದಾರೆ ಎಂದು ಭಾರತದ ಮಾಜಿ ಬೌಲರ್ ಶ್ರೀಶಾಂತ್ ಆರೋಪಿಸಿದ್ದಾರೆ.
ವಿಡಿಯೋದಲ್ಲಿ ಶ್ರೀಶಾಂತ್ ಹೇಳಿದ್ದೇನು?
ವೀಡಿಯೋದಲ್ಲಿ ಎಸ್ ಶ್ರೀಶಾಂತ್ ಅವರು ಗೌತಮ್ ಗಂಭೀರ್ ಅವರ ವರ್ತನೆಯ ಬಗ್ಗೆ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ, "ಅವರು ನನ್ನನ್ನು ತುಂಬಾ ಅಸಭ್ಯವಾಗಿ ಕರೆಯುತ್ತಿದ್ದರು, ಆರೀತಿ ಗೌತಮ್ ಗಂಭೀರ್ ಮಾತನಾಡಬಾರದಿತ್ತು" ಎಂದು ಹೇಳಿದ್ದಾರೆ.
ಘಟನೆಯಲ್ಲಿ ತಮ್ಮದು ಯಾವುದೇ ತಪ್ಪಿಲ್ಲ ಎಂದು ಶ್ರೀಶಾಂತ್ ಸ್ಪಷ್ಟಪಡಿಸಿದರು ಮತ್ತು ಮೈದಾನದಲ್ಲಿ ವಾಗ್ವಾದದ ಸಂದರ್ಭದಲ್ಲಿ ಗಂಭೀರ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರ ಜೊತೆ ಗಂಭೀರ್ ಅವರ ಹಿಂದಿನ ಜಗಳಗಳ ಬಗ್ಗೆ ಶ್ರೀಶಾಂತ್ ಮಾತನಾಡಿದ್ದು, ಸಹ ಆಟಗಾರರಿಗೆ ಅವರ ಗೌರವ ಕೊಡುವುದಿಲ್ಲ ಎಂದು ಟೀಕಿಸಿದರು.
ಕೊಹ್ಲಿ ಕುರಿತ ಚರ್ಚೆಗಳನ್ನು ಬೇರೆಡೆಗೆ ತಿರುಗಿಸುವ ಗಂಭೀರ್ ಅವರ ಪ್ರವೃತ್ತಿಯನ್ನು ಪ್ರಸ್ತಾಪಿಸಿದ ಅವರು, "ನಿಮ್ಮ ಸ್ವಂತ ಸಹೋದ್ಯೋಗಿಗಳನ್ನು ನೀವು ಗೌರವಿಸದಿದ್ದರೆ ಜನರನ್ನು ಪ್ರತಿನಿಧಿಸುವುದರಲ್ಲಿ ಏನು ಅರ್ಥವಿದೆ" ಎಂದು ಪ್ರಶ್ನೆ ಮಾಡಿದ್ದಾರೆ.
Heated conversation between Gautam Gambhir and S Sreesanth in the LLC. pic.twitter.com/Cjl99SWAWK
— Mufaddal Vohra (@mufaddal_vohra) December 7, 2023
ಮೈದಾನದಲ್ಲಿ ನಡೆದಿದ್ದೇನು?
ಲೆಜೆಂಡ್ಸ್ ಲೀಗ್ ಪಂದ್ಯದ ವೇಳೆ ಇಬ್ಬರು ಕ್ರಿಕೆಟ್ ಆಟಗಾರರ ನಡುವೆ ಮೈದಾನದಲ್ಲಿ ಘರ್ಷಣೆ ಸಂಭವಿಸಿತು, ಶ್ರೀಶಾಂತ್ ಅವರ ಬೌಲಿಂಗ್‌ನಲ್ಲಿ ಗಂಭೀರ್ ಸತತವಾಗಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದ್ದಾರೆ, ನಂತರ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಬೌಂಡರಿ ಬಾರಿಸಿದ್ದಕ್ಕೆ ಶ್ರೀಶಾಂತ್ ಅವರು ಗಂಭೀರ್ ಅವರನ್ನು ಗುರಾಯಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ.
2013 ರ ಐಪಿಎಲ್ ಸಮಯದಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಗಳು ಸೇರಿದಂತೆ ತನ್ನ ಪಾಲಿನ ಸವಾಲುಗಳನ್ನು ಎದುರಿಸಿದ ಎಸ್ ಶ್ರೀಶಾಂತ್, ಘಟನೆಯ ಬಗ್ಗೆ ತಮ್ಮ ನೋವು ಮತ್ತು ನಿರಾಸೆ ವ್ಯಕ್ತಪಡಿಸಿದರು.
ಇನ್ನು ಜಗಳದ ಹೊರತಾಗಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎಲಿಮಿನೇಟರ್ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ್ದು, ಎಸ್ ಶ್ರೀಶಾಂತ್ ಅವರ ಜೈಂಟ್ಸ್ ಪಂದ್ಯಾವಳಿಯಿಂದ ಹೊರಬಿದ್ದಿದೆ.












Click it and Unblock the Notifications