South Africa vs Afghanistan: 106 ರನ್‌ಗಳಿಗೆ ಆಲೌಟ್‌ ಆಗಿ ಕೆಟ್ಟ ದಾಖಲೆ ಬರೆದ ದಕ್ಷಿಣ ಆಫ್ರಿಕಾ

ಟಿ20 ವಿಶ್ವಕಪ್‌ ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನದ ವಿರುದ್ದದ ಏಕದಿನ ಪಂದ್ಯದಲ್ಲಿ ಕೆಟ್ಟ ದಾಖಲೆ ಬರೆದಿದೆ. ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಪಡೆ ಅಫ್ಘಾನಿಸ್ತಾನ ಬೌಲಿಂಗ್ ದಾಳಿ ಎದುರು ತತ್ತರಿಸಿದೆ. 33.3 ಓವರ್ ಗಳಲ್ಲಿ ಕೇವಲ 106 ರನ್‌ಗಳಿಗೆ ಆಲೌಟ್ ಆಗಿದ್ದು, ಇದೇ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನದ ವಿರುದ್ಧ ಆಲೌಟ್ ಆದ ದಾಖಲೆ ಮಾಡಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಮೊತ್ತ 17 ಆಗಿದ್ದಾಗ ರೀಝಾ ಹೆಂಡ್ರಿಕ್ ವಿಕೆಟ್ ಪಡೆಯುವ ಮೂಲಕ ಫಜಲ್ಹಕ್ ಫಾರೂಕಿ ಹರಿಣಗಳಿಗೆ ಮೊದಲ ಆಘಾತ ನೀಡಿದರು. ಬಳಿಕ ದಕ್ಷಿಣ ಆಫ್ರಿಕಾ ಚೇತರಿಸಿಕೊಳ್ಳಲು ಅಫ್ಘನ್‌ ಬೌಲರ್ ಗಳು ಅವಕಾಶ ನೀಡಲಿಲ್ಲ.

South Africa All out for 106 runs against Afghanistan in ODI match

10 ಓವರ್ ಗಳಲ್ಲಿ 36 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 50 ರನ್ ಗಡಿ ದಾಟುವುದು ಕಷ್ಟ ಎನ್ನುವಂತಾಗಿತ್ತು. ವಿಯಾನ್ ಮುಲ್ಡರ್ ಈ ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾದರು 84 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ 100 ರನ್‌ ಗಡಿ ದಾಟಲು ಪ್ರಮುಖ ಕಾರಣವಾದರು. ಜೋರ್ನ್ ಫಾರ್ಚುನ್ 16 ರನ್ ಗಳಿಸಿದರೆ, ಕೈಲ್ ವೆರೆನ್ನಾಯೆ 10 ರನ್ ಗಳಿಸಿದರು, ಟೋನಿ ಡಿ ಝೋರ್ಜಿ 11 ರನ್ ಗಳಿಸಿದರು.

ಅಫ್ಘಾನಿಸ್ತಾನದ ಮಾರಕ ಬೌಲಿಂಗ್

ಫಜಲ್ಹಕ್ ಫರೂಕಿ 7 ಓವರ್ ಗಳಲ್ಲಿ 35 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದು ಮಿಂಚಿದರು. ಅಲ್ಲಾ ಘಜನ್‌ಫರ್ 10 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ರಶೀದ್ ಖಾನ್ 8.3 ಓವರ್ ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+