ಸ್ಮೃತಿ ಮಂಧಾನ ಕೊನೇ ಬಾರಿ ಅತ್ತಿದ್ದು ಯಾವಾಗ? ಅಚ್ಚರಿ ಮಾಹಿತಿ ರಿವೀಲ್
Smriti Mandhana: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭಾರತ ಮಹಿಳಾ ತಂಡವು ಟಿ20 ಏಷ್ಯಾಕಪ್ 2026 ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾ ಉಪನಾಯಕಿ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ತಾವು ಕಣ್ಣೀರಿಟ್ಟ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಇದು ಇದೀಗ ಸಖರ್ ವೈರಲ್ ಆಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೈದಾನದಲ್ಲಿ ಅತ್ಯಂತ ಶಾಂತ ಹಾಗೂ ಸ್ಫೋಟಕ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸ್ಮೃತಿ ಮಂಧಾನ ಅವರು, ತಮಗೂ ನೋವಾದಾಗ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. 'ಕೆಲವೊಮ್ಮೆ ಮನಸ್ಸಿಗೆ ತೀವ್ರ ಕಷ್ಟವಾಗಿ ಅಳಲೇಬೇಕು ಎನಿಸಿದಾಗ, ನಾನು ಬಾತ್‌ರೂಮ್‌ಗೆ ಹೋಗಿ ಶವರ್ ಆನ್ ಮಾಡಿ ಕಣ್ಣೀರು ಸುರಿಸುತ್ತೇನೆ. ನನ್ನ ಜೀವನದಲ್ಲಿ ಬೆರಳಣಿಕೆಯಷ್ಟು ಮಾತ್ರ ಅತ್ಯಂತ ಆಪ್ತರಿದ್ದಾರೆ. ಅವರ ಮುಂದೆ ಮಾತ್ರ ನನ್ನ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ,' ಎಂದು ತಮ್ಮ ಏಕಾಂತದ ಕ್ಷಣಗಳನ್ನು ನೆನಪಿಸಿಕೊಂಡರು.

ಸ್ಮೃತಿ ಮಂಧಾನ ಕೊನೇ ಬಾರಿ ಅತಿದ್ದು ಯಾವಾಗ?
ಪಾಡ್‌ಕಾಸ್ಟ್‌ನಲ್ಲಿ ರಾಜ್ ಶಮಾನಿ ಅವರು ನೀವು ಕೊನೆಯ ಬಾರಿಗೆ ಯಾವಾಗ ಅತ್ತಿದ್ದೀರಿ? ಎಂದು ಪ್ರಶ್ನೆ ಕೇಳಿದಾಗ ಸ್ಮೃತಿ ನಗುತ್ತಾ, 'ಅದೊಂದು ಆಸಕ್ತಿದಾಯಕ ಪ್ರಶ್ನೆ. ನನಗೆ ಕಷ್ಟದ ದಿನಗಳಲ್ಲಿ ಅಥವಾ ನಿಜ ಜೀವನದ ಘಟನೆಗಳಿಗೆ ಅತ್ತಿದ್ದು ನೆನಪೇ ಇಲ್ಲ, ಏಕೆಂದರೆ ನಾನು ಸಿನಿಮಾಗಳನ್ನು ನೋಡುವಾಗ ಮಾತ್ರ ಅಳುತ್ತೇನೆ. ಇತ್ತೀಚೆಗೆ 'ಮುಸಾಫಿರ್ ಕೆಫೆ' ಚಿತ್ರವನ್ನು ವೀಕ್ಷಿಸಿದಾಗ ನನಗೆ ಕಣ್ಣೀರು ಬಂದಿತ್ತು,' ಎಂದು ಹೇಳಿದರು.
'ಯಾವುದೇ ಘಟನೆಗೂ ಹೆಚ್ಚು ಕೊರಗುವುದಿಲ್ಲ'
ಮುಂದುವರೆದು ಮಾತನಾಡಿದ ಅವರು, 'ನಾನು ಭೂತಕಾಲದ ಘಟನೆಗಳ ಬಗ್ಗೆ ಕುಳಿತು ಕೊರಗುವವಳಲ್ಲ. ಯಾರು ಭೂತಕಾಲದಿಂದ ಕಲಿಯಲು ಬಯಸುತ್ತಾರೋ, ಅವರು ಹಳೆಯ ವಿಷಯಗಳಿಗೆ ಪಶ್ಚಾತ್ತಾಪ ಪಡುವುದಿಲ್ಲ. ಒಂದೇ ವಿಷಯವನ್ನು ಹಿಡಿದುಕೊಂಡು ಅಳುತ್ತಾ ಕುಳಿತರೆ, ಮುಂದಿನ ಸವಾಲುಗಳಿಗೆ ಸಿದ್ಧರಾಗುವುದಿಲ್ಲ ಮತ್ತು ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾನು ಯಾವುದೇ ಘಟನೆಗೂ ಹೆಚ್ಚು ಕೊರಗುವುದಿಲ್ಲ,' ಎಂದು ಹೇಳುದರು.
ಅಲ್ಲದೆ, 'ಜೀವನದಲ್ಲಿ ತೀವ್ರ ನಿರಾಶೆ ಅಥವಾ ಒತ್ತಡವಾದಾಗ ಮಹಾಭಾರತದ ಒಂದು ಸಂಚಿಕೆಯನ್ನು ನೋಡಿ ಪ್ರಶಾಂತವಾಗಿ ನಿದ್ರಿಸುತ್ತೇವೆ. ಭಗವದ್ಗೀತೆಯ ತತ್ವಗಳು ಮತ್ತು ಮಹಾಭಾರತದ ವಿಚಾರಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಇದು ಒಂದು ರೀತಿಯ ಮಾನಸಿಕ ಥೆರಪಿಯಂತೆ ಕೆಲಸ ಮಾಡುತ್ತದೆ,' ಎಂದು ಹೇಳಿದರು.


Click it and Unblock the Notifications
