India Vs Sri Lanka: ಸಿರಾಜ್ ದಾಳಿಗೆ ನಲುಗಿದ ಶ್ರೀಲಂಕಾ: 50 ರನ್‌ಗಳಿಗೆ ಆಲೌಟ್‌

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತದ ಮೊಹಮ್ಮದ್ ಸಿರಾಜ್, ಬುಮ್ರಾ, ಪಾಂಡ್ಯ ಅಬ್ಬರಕ್ಕೆ ನಲುಗಿದ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಬುಮ್ರಾ, ಸಿರಾಜ್, ಪಾಂಡ್ಯ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ಮೊದಲನೇ ಓವರ್ ನಲ್ಲೇ ಬುಮ್ರಾ ಕುಶಾಲ್ ಪೆರೇರಾ ಅವರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಶುಭಾರಂಭ ನೀಡಿದರು.

Sirajs Stellar Performance Leads to Sri Lankas Dramatic Collapse to 50/10 in Asia Cup Final

4ನೇ ಓವರ್ ನಲ್ಲಿ ದಾಳಿಗೆ ಇಳಿದ ಮೊಹಮ್ಮದ್ ಸಿರಾಜ್ ಲಂಕಾ ಬ್ಯಾಟಿಂಗ್ ಪಡೆಯ ದಿಕ್ಕೆಡಿಸಿದರು. ತಮ್ಮ ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಸಿರಾಜ್ ಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. 12 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ ನಂತರ ಸುಧಾರಿಸಿಕೊಳ್ಳಲು ಭಾರತದ ಬೌಲರ್ ಗಳು ಅವಕಾಶ ಕೊಡಲೇ ಇಲ್ಲ.

50 ರನ್‌ಗಳಿಗೆ ಆಲೌಟ್

ಬುಮ್ರಾ ಮತ್ತು ಸಿರಾಜ್ ಬಳಿಕ ದಾಳಿಗೆ ಬಂದ ಹಾರ್ದಿಕ್ ಪಾಂಡ್ಯ 2.2 ಓವರ್ ಗಳಲ್ಲಿ 3 ವಿಕೆಟ್ ಪಡೆದು ಶ್ರೀಲಂಕಾ ತಂಡವನ್ನು ಆಲೌಟ್ ಮಾಡಲು ಕಾರಣವಾದರು. ಮೊಹಮ್ಮದ್ ಸಿರಾಜ್ 7 ಓವರ್ ಬೌಲಿಂಗ್ ಮಾಡಿ 21 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಬುಮ್ರಾ 5 ಓವರ್ ಗಳಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ 2.2 ಓವರ್ ಗಳಲ್ಲಿ 3 ರನ್ ನೀಡಿ ಮೂರು ವಿಕೆಟ್ ಪಡೆದುಕೊಂಡರು.

ಹಲವು ದಾಖಲೆಗಳ ನಿರ್ಮಾಣ

ಏಕದಿನ ಫೈನಲ್ ಪಂದ್ಯದಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. ಈ ಮೊದಲು 2000 ರಲ್ಲಿ ಭಾರತ ಶ್ರೀಲಂಕಾ ವಿರುದ್ಧ 54 ರನ್‌ಗಳಿಗೆ ಆಲೌಟ್ ಆಗಿದ್ದು ಈವರೆಗಿನ ಕಡಿಮೆ ಮೊತ್ತವಾಗಿತ್ತು. ಇದು ಭಾರತದ ವಿರುದ್ಧ ದಾಖಲಾದ ಅತ್ಯಂತ ಏಕದಿನ ಕಡಿಮೆ ಮೊತ್ತವಾಗಿದೆ. 2014ರಲ್ಲಿ ಬಾಂಗ್ಲಾದೇಶ 58 ರನ್‌ಗಳಿಗೆ ಆಲೌಟ್ ಆಗಿತ್ತು, ಈಗ ಶ್ರೀಲಂಕಾ ಅದನ್ನು ಮೀರಿ 50 ರನ್‌ಗಳಿಗೆ ಆಲೌಟ್ ಆಗಿದೆ.

ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದ ನಾಲ್ಕನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಭಾರತದ ವೇಗಿಗಳು ಎದುರಾಳಿ ತಂಡದ ಎಲ್ಲಾ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತ ಪಾಕಿಸ್ತಾನ ವಿರುದ್ಧ ಇದೇ ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+