ವಿರಾಟ್ ಕೊಹ್ಲಿ ಡೇಂಜರಸ್‌.. ಅವರಿಗೆ ಮುಕ್ತವಾಗಿ ಆಡುವ ಸ್ವಾತಂತ್ರ್ಯ ಕೊಟ್ಟರೆ ಪಂದ್ಯ ನಮ್ದೇ: ನಾಯಕ ಶುಭ್‌ಮನ್ ಗಿಲ್

Shubman Gill: ತಿರುವನಂತಪುರಂನಲ್ಲಿ ಭಾನುವಾರ (ಸೆಪ್ಟೆಂಬರ್ 27) ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ಭರ್ಜರಿ ಗೆಲುವು ಸಾಧಿಸಿತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ತಮ್ಮ ಸಹ-ಆಟಗಾರ ಹಾಗೂ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪ್ರಸ್ತುತ ಫಾರ್ಮ್ ಮತ್ತು ಬ್ಯಾಟಿಂಗ್ ಶೈಲಿಯ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ತಮ್ಮ ವೃತ್ತಿಜೀವನದ ಈ ಹಂತದಲ್ಲಿ ಸಂಪೂರ್ಣ ಮುಕ್ತವಾಗಿ ಹಾಗೂ ಯಾವುದೇ ಒತ್ತಡವಿಲ್ಲದೆ ಆಡುತ್ತಿದ್ದು, ಇದು ಅವರನ್ನು ಎದುರಾಳಿ ತಂಡಗಳಿಗೆ ಮತ್ತಷ್ಟು ಅಪಾಯಕಾರಿಯನ್ನಾಗಿ ಮಾಡಿದೆ ಎಂದು ನಾಯಕ ಶುಭ್‌ಮನ್ ಗಿಲ್ ಹೇಳಿದ್ದಾರೆ. ಇದೇ ವೇಳೆ ಇನ್ನೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಡುತ್ತಿದೆ.

Shubman Gill on Virat Why King Kohli Is More Dangerous Now What Did Says India ODI Captain

15,000 ರನ್ ಪೂರೈಸಿದ ವಿರಾಟ್‌ ಕೊಹ್ಲಿ

ವೆಸ್ಟ್ ಇಂಡೀಸ್ ನೀಡಿದ 296 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಕೊಹ್ಲಿ ಬಾರಿಸಿದ ಅಜೇಯ 139 ರನ್‌ಗಳು ಜಯದ ಹಾದಿಯನ್ನು ಸುಲಭಗೊಳಿಸಿತು. ಇನ್ನೂ ಈ ಪಂದ್ಯದ ಮೂಲಕ 'ಕಿಂಗ್ ಕೊಹ್ಲಿ' ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 15,000 ರನ್ ಪೂರೈಸಿ ಐತಿಹಾಸಿಕ ದಾಖಲೆ ನಿರ್ಮಿಸಿ ಗಮನ ಸೆಳೆದರು.

ನಾಯಕ ಶುಭ್‌ಮನ್ ಗಿಲ್ ಹೇಳಿದ್ದೇನು?

ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭ್‌ಮನ್ ಗಿಲ್ ಅವರು, 'ವಿರಾಟ್ ಕೊಹ್ಲಿ ತಮ್ಮ ಆಟವನ್ನು ಈಗ ತುಂಬಾ ಆನಂದಿಸುತ್ತಿದ್ದಾರೆ. ಅವರು ಕ್ರೀಸ್‌ನಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ, ಸಂಪೂರ್ಣ ಸ್ವಾತಂತ್ರ್ಯವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಅವರಲ್ಲಿ ಎಂತಹುದೇ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡುವ ಸಾಮರ್ಥ್ಯ ಮೊದಲಿನಿಂದಲೂ ಇತ್ತು. ಆದರೆ ಈಗ ತಮಗೆ ಬೇಕೆನಿಸಿದಾಗಲೆಲ್ಲಾ ಬೌಂಡರಿ, ಸಿಕ್ಸರ್‌ಗಳನ್ನು ಅತ್ಯಂತ ಸುಲಭವಾಗಿ ಸಿಡಿಸುತ್ತಿದ್ದಾರೆ,' ಎಂದು ಪ್ರಶಂಸೆ ವ್ಯಕ್ತಪಡಿಸಿದರು.

'ವಿರಾಟ್‌ ಕೊಹ್ಲಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು'

'ದೇಶಕ್ಕಾಗಿ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಇಂತಹ ದಿಗ್ಗಜ ಆಟಗಾರನಿಗೆ ಕ್ರೀಸ್‌ನಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಅಗತ್ಯ. ಪಂದ್ಯದ ದಿನದಂದು ಕೊಹ್ಲಿ ಅವರಿಗೆ ಹೇಗೆ ಆಡಬೇಕು ಎನಿಸುತ್ತದೋ ಹಾಗೆಯೇ ಆಡಲು ಬಿಡಬೇಕು. ಏಕೆಂದರೆ ಅವರು ಚೆನ್ನಾಗಿ ಆಡಿದ ದಿನ ಎದುರಾಳಿ ತಂಡಕ್ಕೆ ಪಂದ್ಯವನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ,' ಎಂದು ಗಿಲ್ ಹೇಳಿದರು.

'ಕೊನೆಯವರೆಗೂ ಕ್ರೀಸ್‌ನಲ್ಲಿದ್ದಿದ್ದರೆ ಚೆನ್ನಾಗಿರುತ್ತಿತ್ತು'

ಶತಕ ಪೂರೈಸಿದ ಕೆಲವೇ ಕ್ಷಣಗಳಲ್ಲಿ ಔಟ್ ಆದ ಗಿಲ್, 108 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 110 ರನ್ ಗಳಿಸಿ ನಿರ್ಗಮಿಸಿದರು. ಈ ಕುರಿತು ಮಾತನಾಡಿದ ಅವರು, 'ನಿಜ ಹೇಳಬೇಕೆಂದರೆ, ನಾನು ಔಟ್ ಆದಾಗ ಪಂದ್ಯವನ್ನು ನಾನೇ ಮುಗಿಸಬೇಕಿತ್ತು ಎಂದು ಅನಿಸಿತು. ಕೊನೆಯವರೆಗೂ ಕ್ರೀಸ್‌ನಲ್ಲಿ ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು. ಆದರೂ ಈ ಇನಿಂಗ್ಸ್ ನನಗೆ ತುಂಬಾ ತೃಪ್ತಿ ತಂದಿದೆ,' ಎಂದು ಹೇಳಿದರು.

ತಂಡದ ಸಂಯೋಜನೆ ಕುರಿತು ಮಹತ್ವದ ಹೇಳಿಕೆ

ತಂಡದ ಭವಿಷ್ಯದ ಯೋಜನೆಯ ಬಗ್ಗೆಯೂ ಮಾತನಾಡಿದ ನಾಯಕ ಶುಭ್‌ಮನ್ ಗಿಲ್ ಅವರು, 'ಏಕದಿನ ಕ್ರಿಕೆಟ್‌ನಲ್ಲಿ ನಾವು ಹಲವು ಬಾರಿ 250 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದರೂ, ನಿರೀಕ್ಷಿತ ಮೊತ್ತವನ್ನು ಕಲೆಹಾಕಲು ವಿಫಲವಾಗಿದ್ದೇವೆ. ಆದ್ದರಿಂದ 8ನೇ ಕ್ರಮಾಂಕದಲ್ಲಿ ಕನಿಷ್ಠ 25-30 ರನ್‌ಗಳ ಕೊಡುಗೆ ನೀಡಬಲ್ಲ ಆಟಗಾರ ಇರುವುದು ಅಗತ್ಯ. ಇದಕ್ಕಾಗಿ ಮುಂದಿನ ಪಂದ್ಯಗಳಲ್ಲಿ ವಿಭಿನ್ನ ಕಾಂಬಿನೇಷನ್‌ಗಳನ್ನು ಪ್ರಯತ್ನಿಸಲು ಮತ್ತು ನಮಗೆ ಯಾವುದು ಸೂಕ್ತವಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು ಸಿದ್ಧರಿದ್ದೇವೆ,' ಎಂದು ಅವರು ಹೇಳಿದರು.

ಕುಲದೀಪ್ ಯಾದವ್ ಬೌಲಿಂಗ್‌ಗೆ ಗಿಲ್ ಮೆಚ್ಚುಗೆ

ವೆಸ್ಟ್ ಇಂಡೀಸ್ ಆರಂಭಿಕ ಜೋಡಿ 135 ರನ್‌ಗಳ ಉತ್ತಮ ಆರಂಭ ನೀಡಿದಾಗ ಪಂದ್ಯ ಕೈತಪ್ಪುವ ಭೀತಿಯಿತ್ತು. ಆದರೆ 40 ರನ್‌ಗೆ 4 ವಿಕೆಟ್ ಕಿತ್ತು ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಕುಲದೀಪ್ ಯಾದವ್ ಅವರ ಬೌಲಿಂಗ್ ದಾಳಿಯನ್ನು ಗಿಲ್ ಶ್ಲಾಘಿಸಿದರು. 'ಕುಲದೀಪ್ ಮಾರಕ ಬೌಲಿಂಗ್ ದಾಳಿಯಿಂದಾಗಿ ಎದುರಾಳಿ ಪಡೆಯನ್ನು 300 ರನ್‌ಗಳ ಒಳಗೆ ಕಟ್ಟಿಹಾಕಲು ಸಾಧ್ಯವಾಯಿತು,' ಎಂದು ಅವರು ತಿಳಿಸಿದರು. ಒಟ್ಟಿನಲ್ಲಿ ವಿರಾಟ್‌ ಕೊಹ್ಲಿ ಅವರ ಅಬ್ಬರ ಮತ್ತು ಯುವ ನಾಯಕ ಗಿಲ್ ಅವರ ಸ್ಪಷ್ಟ ದೃಷ್ಟಿಕೋನವು ಟೀಮ್ ಇಂಡಿಯಾದ ಏಕದಿನ ಕ್ರಿಕೆಟ್‌ನ ಹೊಸ ಪಯಣಕ್ಕೆ ಶುಭಾರಂಭ ತಂದಿದೆ ಅಂದ್ರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+