Get Updates
Get notified of breaking news, exclusive insights, and must-see stories!

Shreyas Iyer: ಬಿಸಿಸಿಐಗೆ ಪರೋಕ್ಷ ಸಂದೇಶ ರವಾನಿಸಿದ ಶ್ರೇಯಸ್ ಅಯ್ಯರ್‌

ಟೀಮ್ ಇಂಡಿಯಾದಿಂದ ಸದ್ಯ ದೂರ ಇರುವು ಶ್ರೇಯಸ್ ಅಯ್ಯರ್ ತಮ್ಮಲ್ಲಿರುವ ಕ್ರಿಕೆಟ್ ಕ್ಷಮತೆಯ ಬಗ್ಗೆ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಮೂಲಕ ತನ್ನಲ್ಲೂ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ ಎಂದು ಸಾರಿ ಹೇಳಿದ್ದಾರೆ. ಐಪಿಎಲ್ 2024ರ ಕೆಕೆಆರ್ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದರ ಹಿಂದೆ ಇವರ ಕೊಡುಗೆ ಅಪಾರ.

ಭಾನುವಾರ ಮುಕ್ತಾಯಗೊಂಡ ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಕೆಕೆಆರ್ ಹಾಗೂ ಎಸ್‌ಆರ್‌ಎಚ್‌ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್‌ ತಂಡ ಸಾಧಾರಣ ಗುರಿಯನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್‌ ಎಂಟು ವಿಕೆಟ್‌ ಇರುವಂತೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

Shreyas Iyer s Contributions Deserve Recognition Campaign Calls for Restoration of Central Contract

ಶ್ರೇಯಸ್ ಅಯ್ಯರ್‌ ಕೆಕೆಆರ್ ತಂಡದ ನಾಯಕ. ಮಿಡ್ಲ್‌ ಆರ್ಡರ್‌ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಧಾರವಾಗಿ, ಸಮಯೋಚಿತವಾಗಿ ತಂಡವನನು ಮುನ್ನಡೆಸಿದಿ ಕೀರ್ತಿ ಶ್ರೇಯಸ್‌ಗೆ ಸಲ್ಲುತ್ತದೆ. ಪಟಪಟನೇ ಟಾಪ್‌ ಆರ್ಡರ್‌ನಲ್ಲಿ ವಿಕೆಟ್‌ಗಳು ಬಿದ್ದಾಗ, ಧೃತಿ ಗೆಡದೆ ನೆಲ್ಲಕೂರಿ ನಿಂತು ಇನ್ನಿಂಗ್ಸ್‌ ಬೆಳೆಸುವ ಇವರ ಆಟದ ಧಾಟಿಗೆ ಎದುರಾಳಿಗಳೂ ಸಹ ಸ್ಟನ್ ಆಗಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಶ್ರೇಯಸ್ ಪ್ರದರ್ಶನ

ಶ್ರೇಯಸ್‌ ಆಡಿದ 15 ಪಂದರ್ಯಗಳಲ್ಲಿ 146ರ ಸರಾಸರಿಲ್ಲಿ351 ರನ್‌ ಸಿಡಿಸಿದ್ದಾರೆ. ಅಲ್ಲದೆ 34 ಬೌಂಡರಿ, 14 ಸಿಕ್ಸರ್‌ ಬಾರಿಸಿ ಮೆರೆದಿದ್ದಾರೆ. ಈ ವರ್ಷ ಕೆಕೆಆರ್‌ ಅಮೋಘ ಪ್ರದರ್ಶನವನ್ನು ನೀಡಿ ಮೊದಲು ಕ್ವಾಲಿಫೈರ್‌ಗೆ ಪ್ರವೇಶ ಪಡೆಯಿತು. ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡವನ್ನು ಮಸಿಸಿದ ಕೆಕೆಕಾರ್‌ ಫೈನಲ್‌ಗೆ ಅರ್ಹತೆ ಪಡೆದಿತ್ತು. ಅಲ್ಲದೆ ಫೈನಲ್‌ ನಲ್ಲೂ ಎಸ್‌ಆರ್‌ಎಚ್‌ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತ್ತು.

ನಾಯಕತ್ವದ ಮೇಲೆ ಕಣ್ಣು

ಈಗಾಗಲೇ ಶ್ರೇಯಸ್ ಅಯ್ಯರ್‌ ತಮ್ಮಲ್ಲಿರುವ ನಾಯಕತ್ವದ ಬಗ್ಗೆ ಸಾರಿ ಹೇಳಿದ್ದಾರೆ. ತಾವು ಪ್ರತಿನಿಧಿಸಿದ ಎರಡೂ ತಂಡಗಳನ್ನು ಫೈನಲ್‌ಗೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೆ ಚಾಂಪಿಯನ್‌ ಪಟ್ಟ ಕೆಕೆಆರ್‌ ಅಲಂಕಿರಿಸುವ ಇವರ ಪಾತ್ರ ಬಹು ಮುಖ್ಯ. ಐಪಿಎಲ್‌ನಲ್ಲಿ ಉತ್ತಮವಾಗಿ ನಾಯಕತ್ವ ಗುಣಗಳನ್ನು ತೋರಿಸಿರುವ ಶ್ರೇಯಸ್‌, ಭವಿಷ್ಯದಲ್ಲಿ ಟೀಮ್ ಇಂಡಿಯಾದ ನಾಯಕನ ಸ್ಥಾನದ ಮೇಲೂ ಕರ್ಚಿಫ್ ಹಾಕಿದ್ದಾರೆ.

Shreyas Iyer s Contributions Deserve Recognition Campaign Calls for Restoration of Central Contract

ಶ್ರೇಯಸ್‌ ಅಯ್ಯರ್‌ ತಂಡದಿಂದ ಔಟ್‌

ಐಪಿಎಲ್ ಆರಂಭಕ್ಕೂ ಮುನ್ನ ಶ್ರೇಯಸ್‌ ಅಯ್ಯರ್‌ ಅವರು ಭಾರತದಲ್ಲಿ ನಡೆದಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ ಪಂದ್ಯಗಳ ಸರಣಿಯಿಂದ ತಂಡದಲ್ಲಿ ಸ್ಥಾನವನ್ನು ಖಾತ್ರಿ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇವರು ಕಳೆದ ಟೆಸ್ಟ್ ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವುದು ನಿಜಕ್ಕೂ ಇವರನ್ನು ತಂಡದಿಂದ ಕೈ ಬಿಡುವಂತೆ ಮಾಡಿತು. ಇದಾದ ಬಳಿಕ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್‌, ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದರು. ಆದರೆ ಆರಂಭದಲ್ಲಿ ಈ ಮಾತಿಗೆ ಕಿವಿಗೊಡದ ಯಶಸ್ವಿ ಮುಂಬೈ ತಂಡಕ್ಕೆ ಮಹತ್ವದ ಪಂದ್ಯಗಳಲ್ಲಿ ಆಸರೆ ಆದರು.

ಈ ಮೂಲಕ ತಮ್ಮನ್ನು ಕೇಂದ್ರ ಒಪ್ಪಂದಿಂದ ಕೈ ಬಿಟ್ಟ ಬಿಸಿಸಿಐಗೆ ಶ್ರೇಯಸ್‌ ಅಯ್ಯರ್‌ ಸಂದೇಶವನ್ನು ರವಾನಿಸಿದ್ದರು. ಆಗ ಇವರ ಬಗ್ಗೆ ಹೆಚ್ಚೇನು ತಲೆಯನ್ನು ಕೆಡಿಸಿಕೊಳ್ಳದ ಬಿಸಿಸಿಐ ಈಗ ತಲೆ ಕೆಡಿಸಿಕೊಳ್ಳಬೇಕಾದ ಸ್ಥಿತಿಗೆ ಬಂದಿದೆ. ನಾಯಕತ್ವದ ಗುಣಗಳನ್ನು ಹೊಂದಿರುವ ಪ್ಲೇಯರ್‌ನನ್ನು ನಾವು ಒಪ್ಪಂದದಿಂದ ಹೊರ ಗಿಟ್ಟು ತಪ್ಪು ಮಾಡಿದೆವಾ ಎಂಬ ಪ್ರಶ್ನೆ ಬಿಸಿಸಿಐ ಪದೆ ಪದೇ ಕೇಳಿಕೊಳ್ಳುವಂತೆ ಮಾಡಿದ್ದಾರೆ.

ಕೆಕೆಆರ್ ಸವಾಲು

ಅಸಲಿಗೆ ಕೆಕೆಆರ್‌ ತಂಡವನ್ನು ಮುನ್ನಡೆಸುವುದು ನಿಜಕ್ಕೂ ಸವಾಲೆ ಆಗಿತ್ತು. ಏಕೆಂದರೆ ಶ್ರೇಯಸ್‌ಗಿಂತಲೂ ಅನುಭವದಲ್ಲಿ ಸಾಕಷ್ಟು ಪಳಗಿರುವ ಆಟಗಾರರನ್ನು ಹಾಗೂ ಯುವ ಆಟಗಾರರನ್ನು ಮುನ್ನಡೆಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸುವುದು ಸುಲಭದ ಮಾತಾಗಿರಲಿಲ್ಲ. ಹೀಗಾಗಿ ಇವರ ನಾಯಕತ್ವದ ಗುಣಗಳ ಬಗ್ಗೆಯೂ ಈಗ ಎಲ್ಲಡೆ ಚರ್ಚೆ ಆರಂಭವಾಗಿದೆ. ಅಲ್ಲದೆ ರೋಹಿತ್ ಶರ್ಮಾ ಬಳಿಕ ತಮ್ಮನ್ನು ಸಹ ಪರಿಗಣಿಸುವಂತೆ ಬಿಸಿಸಿಐ ಆಯ್ಕೆ ಸಮಿತಿಗೆ ಶ್ರೇಯಸ್‌ ಮೆಸೆಜ್ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+