RCB: ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವಿನ ಬೆನ್ನಲ್ಲೇ ಆರ್‌ಸಿಬಿಗೆ ಬಿಗ್ ಶಾಕ್!

ಮಹಿಳಾ ಪ್ರೀಮಿಯರ್ ಲೀಗ್ 2025ರ ಉದ್ಘಾಟನಾ ಪಂದ್ಯದಲ್ಲೇ ಆರ್ ಸಿಬಿ ಅಬ್ಬರಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಬರೋಬ್ಬರಿ 202 ರನ್‌ಗಳ ಬೃಹತ್ ಗುರಿಯನ್ನು ಚೇಸ್ ಮಾಡಿ ಗೆದ್ದಿದೆ. ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಚೇಸ್‌ ಆಗಿದೆ. ಎಲ್ಲಿಸ್ ಪೆರ್‍ರಿ, ರಿಚಾ ಗೋಷ್ ಮತ್ತು ಕನಿಕಾ ಅಹುಜಾ ಸ್ಫೋಟಕ ಬ್ಯಾಟಿಂಗ್‌ ನೆರವನಿಂದ ಆರ್ ಸಿಬಿ ದೊಡ್ಡ ಗೆಲುವು ಸಾಧಿಸಿತ್ತು.

2024ರಲ್ಲಿ ಚಾಂಪಿಯನ್ ಆಗಿದ್ದ ಆರ್ ಸಿಬಿ ತಂಡದಲ್ಲಿ ಈ ಬಾರಿ ಹಲವು ಬದಲಾವಣೆಗಳಾಗಿದೆ. ಮುಖ್ಯವಾಗಿ ಸೋಫಿ ಡಿವೈನ್ ಕ್ರಿಕೆಟ್‌ನಿಂದ ಬ್ರೇಕ್ ಪಡೆದಿದ್ದು ಈ ಬಾರಿ ಆಡುತ್ತಿಲ್ಲ. ಕೇಟ್ ಕ್ರಾಸ್, ಸೋಫಿ ಮೆಲೋನಿಕ್ಸ್, ಆಶಾ ಶೋಭನಾ ಗಾಯದ ಸಮಸ್ಯೆಯಿಂದಾಗಿ ಈ ಬಾರಿ ತಂಡದಿಂದ ಹೊರಗುಳಿದಿದ್ದಾರೆ.

shreyanka patil ruled out of wpl 2025 sneh rana replacement rcb

ಶ್ರೇಯಾಂಕಾ ಪಾಟೀಲ್ ಕೂಡ ಹೊರಕ್ಕೆ?

ಕಳೆದ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕನ್ನಡತಿ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದು ಅನುಮಾನವಾಗಿದೆ. ಮೂಲಗಳ ಪ್ರಕಾರ ಶ್ರೇಯಾಂಕಾ ಈ ಬಾರಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಾಂಕಾ ಪಾಟೀಲ್ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕಾಗಿರುವ ಕಾರಣ ಅವರು ಪಂದ್ಯಾವಳಿಯಿಂದ ದೂರವುಳಿಯಲಿದ್ದಾರೆ. ಅವರ ಬದಲಾಗಿ ಹಿರಿಯ ಆಲ್‌ರೌಂಡರ್ ಸ್ನೇಹ್‌ ರಾಣಾ ಆರ್ ಸಿಬಿ ತಂಡವನ್ನು ಸೇರಲಿದ್ದಾರೆ ಎಂದು ವರದಿಗಳು ತಿಳಿಸಿವೆ.

2024ರ ಟಿ20 ವಿಶ್ವಕಪ್ ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಮೊಣಕಾಲಿನ ಗಾಯದಿಂದಾಗಿ ಪುನರ್ವಸತಿಗೆ ಒಳಗಾಗಿದ್ದರು. ಆದರೂ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ವರದಿ ತಿಳಿಸಿದೆ. ಇಂಡಿಯಾ ಟುಡೇ ಪ್ರಕಾರ, ಶ್ರೇಯಾಂಕಾ ಪಾಟೀಲ್ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದಿದ್ದ ಅವರು ಈ ಬಾರಿ ಆಡದೇ ಇರುವುದು ಆರ್ ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ. ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಸ್ನೇಹ್ ರಾಣಾರನ್ನು ಬದಲಿ ಆಟಗಾರ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಪಂದ್ಯ ಆರಂಭವಾದ ಸ್ವಲ್ಪ ಸಮಯದಲ್ಲೇ ಶ್ರೇಯಾಂಕಾ ತಮ್ಮ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಯಲ್ಲಿ "ಹೃದಯ ಮುರಿದಿದೆ, ಆದರೆ ನಾನು ಮತ್ತೆ ಹಾರುತ್ತೇನೆ" ಎಂದು ಶೀರ್ಷಿಕೆ ನೀಡಿದ್ದು ಉಯ್ಯಾಲೆಯಲ್ಲಿ ಕೂತಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಳೆದ ಆವೃತ್ತಿಯಲ್ಲಿ ಭರ್ಜರಿ ಆಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದ ಕನ್ನಡತಿಯನ್ನು ಈ ಬಾರಿ ಆರ್ ಸಿಬಿ ಫ್ಯಾನ್ಸ್ ಮಿಸ್ ಮಾಡಿಕೊಳ್ಳುತ್ತಾರೆ. ಫೆಬ್ರವರಿ 17ರಂದು ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+