ಶ್ರೇಯಾಂಕಾ ಪಾಟೀಲ್ 35 ಲಕ್ಷ ರೂಪಾಯಿ ಕಾರು ಗಿಫ್ಟ್ ಕೊಟ್ಟಿದ್ದು ಯಾರಿಗೆ? Shreyanka Patil
ಶ್ರೇಯಾಂಕಾ ಪಾಟೀಲ್ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಆಗಿದೆ, ಯಾಕಂದ್ರೆ ಶ್ರೇಯಾಂಕಾ ಪಾಟೀಲ್ ಅತೀ ಚಿಕ್ಕ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಕನ್ನಡ ನಾಡಿನ ಮೂಲದ ಕುವರಿ ಶ್ರೇಯಾಂಕಾ ಪಾಟೀಲ್ ಅವರು ಕೋಟಿ ಕೋಟಿ ಅಭಿಮಾನಿ ಬಳಗದ ಹೃದಯ ಗೆದ್ದಿದ್ದಾರೆ. ಹೀಗಿದ್ದಾಗಲೇ, ಶ್ರೇಯಾಂಕಾ ಪಾಟೀಲ್ 35 ಲಕ್ಷ ರೂಪಾಯಿ ಕಾರು ಗಿಫ್ಟ್ ಕೊಟ್ಟಿದ್ದು ಯಾರಿಗೆ?
ಆರ್‌ಸಿಬಿ ತಂಡದ ಬೆಡಗಿ, ಭಾರತ ತಂಡದ ಬೆಸ್ಟ್ ಕ್ರಿಕೆಟರ್ & ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ ಏನೇ ಮಾಡಿದರೂ ದೊಡ್ಡ ಸುದ್ದಿ ಆಗುತ್ತಿದೆ. ಶ್ರೇಯಾಂಕಾಗೆ ಇದೀಗ ಮಂಡ್ಯ ಟು ಇಡೀ ಇಂಡಿಯಾ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈ ಕಾರಣಕ್ಕೇ ಶ್ರೇಯಾಂಕಾ ಪಾಟೀಲ್ ಟ್ರೆಂಡ್ ಹುಟ್ಟುಹಾಕಿದ್ದಾರೆ. ಇಂತಿಪ್ಪ ಶ್ರೇಯಾಂಕಾ ದಿಢೀರ್ 35 ಲಕ್ಷ ರೂಪಾಯಿ ಕಾರು ಗಿಫ್ಟ್ ಕೊಟ್ಟಿದ್ದು ದೊಡ್ಡ ಸುದ್ದಿಯಾಗುತ್ತಿದೆ. ಹಾಗಾದ್ರೆ ಶ್ರೇಯಾಂಕಾ ಪಾಟೀಲ್ 35 ಲಕ್ಷ ರೂಪಾಯಿ ಬೆಲೆ ಬಾಳುವ ಐಷಾರಾಮಿ ಕಾರನ್ನು ಯಾರಿಗೆ ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ?

35 ಲಕ್ಷ ರೂಪಾಯಿ ಕಾರು ಗಿಫ್ಟ್!
'ಟಗರು ಪುಟ್ಟಿ' ಅಂತ ಅಭಿಮಾನಿಗಳಿಂದ ಕರೆಸಿಕೊಳ್ಳುವ ಶ್ರೇಯಾಂಕಾ ಪಾಟೀಲ್ ನ್ಯಾಷನಲ್ ಕ್ರಷ್ ಆಗಿದ್ದಾರೆ. ಆರ್‌ಸಿಬಿ ಬೆಂಗಳೂರು ಮಹಿಳಾ ತಂಡದ ಆಟಕ್ಕೆ ಕೋಟ್ಯಂತರ ಫ್ಯಾನ್ಸ್ ಫಿದಾ ಆಗಿದ್ದು, 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಾಣ ಮಾಡಿದ್ದು ಇದೀಗ ಇತಿಹಾಸ. 2025ರ ಸಾಲಿನ WPL ಕಪ್ ಸೋತಿದ್ದರೂ ಆರ್‌ಸಿಬಿ ಬೆಂಗಳೂರು ಮಹಿಳಾ ತಂಡಕ್ಕೆ ಅಭಿಮಾನಿ ಬಳಗ ಕಡಿಮೆ ಆಗಿಲ್ಲ. ಇಂತಹ ಸಮಯದಲ್ಲಿ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರು ಬರೋಬ್ಬರಿ 35 ಲಕ್ಷ ರೂಪಾಯಿ ಕಾರು ಖರೀದಿ ಮಾಡಿ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ!
ಟೋಯೋಟಾ ಇನೋವಾ ಕ್ರ್ಸೈಸ್ಟಾ ಕಾರು ಗಿಫ್ಟ್!
ಶ್ರೇಯಾಂಕಾ ಪಾಟೀಲ್ ಈಗ ದೊಡ್ಡ ಸ್ಟಾರ್ ಕ್ರಿಕೆಟರ್ ಆಗಿ ಬೆಳೆದು ನಿಂತಿರುವುದಕ್ಕೆ ತಂದೆಗೂ ಹೆಮ್ಮೆ ಇದೆ. ಹಾಗೇ ಶ್ರೇಯಾಂಕಾ ಪಾಟೀಲ್ ಸಾಧನೆ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಾರೆ ಅವರ ತಂದೆ. ಹೀಗೆ ಶ್ರೇಯಾಂಕಾ ಪಾಟೀಲ್ ಅಪ್ಪ, ತಮ್ಮ ಮಗಳನ್ನ ಈ ಹಂತಕ್ಕೆ ತಂದು ನಿಲ್ಲಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆಸಿದ ಶ್ರೇಯಾಂಕಾ ಪಾಟೀಲ್ ತಮ್ಮ ತಂದೆಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಶ್ರೇಯಾಂಕಾ ಪಾಟೀಲ್ ತಮ್ಮ ತಂದೆ ಅವರಿಗೆ 35 ಲಕ್ಷ ರೂಪಾಯಿ ಮೌಲ್ಯದ ಟೋಯೋಟಾ ಇನೋವಾ ಕ್ರ್ಸೈಸ್ಟಾ ಕಾರನ್ನು ಉಡುಗೊರೆಯಾಗಿ ನೀಡಿದ್ದು, ತಂದೆಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಸುದ್ದಿ ಇದೀಗ ಶ್ರೇಯಾಂಕಾ ಪಾಟೀಲ್ ಅವರ ಅಭಿಮಾನಿಗಳಿಗೆ ಕೂಡ ಸಖತ್ ಇಷ್ಟವಾಗಿದೆ. ಹಾಗೇ ಶ್ರೇಯಾಂಕಾ ಪಾಟೀಲ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಂತಾ ಅಭಿಮಾನಿಗಳು ಆಶಿಸುತ್ತಿದ್ದಾರೆ.












Click it and Unblock the Notifications