Breaking News: ಮಹಿಳಾ ಸೈಕಲಿಸ್ಟ್ ಜೊತೆ ಅಸಭ್ಯ ವರ್ತನೆ, ಕೋಚ್ ಅಮಾನತು
ನವದೆಹಲಿ, ಜೂನ್ 8: ಭಾರತೀಯ ರಾಷ್ಟ್ರೀಯ ಸೈಕಲ್ ಪಟುಗಳ ತಂಡದ ಕೋಚ್ ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಸೈಕಲಿಂಗ್ ಫೆಡರೇಷನ್ ಆಫ್ ಇಂಡಿಯಾ(ಸಿಎಫ್ಐ) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಪ್ರತ್ಯೇಕ ಹೇಳಿಕೆ ನೀಡಿವೆ. ಸೈಕಲಿಸ್ಟ್ ಮಯೂರಿ ನೀಡಿದ ದೂರಿನ ಮೇರೆಗೆ ಮುಖ್ಯ ಕೋಚ್ ಮುಖ್ಯ ಕೋಚ್ ಆರ್ ಕೆ ಶರ್ಮ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಸಾಯ್ ಹೇಳಿದೆ.
ಸೈಕ್ಲಿಸ್ಟ್ ಮಯೂರಿ ದೂರಿನ ಬಗ್ಗೆ ಆದ್ಯತೆಯ ಮೇರೆಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿತ್ತು ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್‌ಐ) ಕೂಡ ತನ್ನ ಅಥ್ಲೀಟ್‌ನ ಬೆಂಬಲಕ್ಕೆ ನಿಂತು, ಅಗತ್ಯ ನೆರವು ಒದಗಿಸಿತ್ತು. "ಸ್ಲೊವೇನಿಯಾದಲ್ಲಿ ವಿದೇಶಿ ತರಬೇತಿ ಶಿಬಿರದ ಸಂದರ್ಭದಲ್ಲಿ ತರಬೇತುದಾರರಿಂದ ಅನುಚಿತ ವರ್ತನೆ ಕಂಡು ಬಂದಿದೆ ಎಂದು ದೂರು ನೀಡಲಾಗಿತ್ತು. ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಶಿಫಾರಸಿನ ಮೇರೆಗೆ ತರಬೇತುದಾರನನ್ನು ನೇಮಿಸಲಾಗಿದೆ ಎಂದು SAI ಮಾಹಿತಿ ನೀಡಿದೆ.
ಜೂನ್ 18 ರಿಂದ 22 ರವರೆಗೆ ನಡೆಯಲಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗಾಗಿ ಸ್ಲೊವೇನಿಯಾದಲ್ಲಿ ತರಬೇತಿ-ಕಮ್-ಸ್ಪರ್ಧೆಯ ವಿದೇಶಿ ಎಕ್ಸ್‌ಪೋಸರ್ ಟ್ರಿಪ್ ತಯಾರಿ ನಡೆಸಲಾಗಿದೆ.

"ದೂರುದಾರರಾದ ಮಯೂರಿ ಅವರ ಬೆಂಬಲಕ್ಕೆ CFI ನಿಂತಿದೆ ಮತ್ತು SAI ರಚಿಸಿರುವ ಸಮಿತಿಯ ನಿರ್ಧಾರವು ಫೆಡರೇಶನ್‌ನ ಸಂಪೂರ್ಣ ಬೆಂಬಲವನ್ನು ಹೊಂದಿರುತ್ತದೆ ಎಂದು ಈಗಾಗಲೇ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಮಯೂರಿ ಜೊತೆ ಮಾತುಕತೆ ನಡೆಸಿದೆದೆ" ಎಂದು CFI ಹೇಳಿದೆ.
CFI ಯ ನಾಲ್ಕು ಸದಸ್ಯರ ಸಮಿತಿಯು ಪ್ರಧಾನ ಕಾರ್ಯದರ್ಶಿ ಮಣಿಂದರ್ ಪಾಲ್ ಸಿಂಗ್, ಎಸ್‌ಎಸ್ ಸುದೀಶ್ ಕುಮಾರ್ (ಅಧ್ಯಕ್ಷ, ಕೇರಳ ಸೈಕ್ಲಿಂಗ್), ದಿಪಾಲಿ ನಿಕಮ್ (ಮುಖ್ಯ ತರಬೇತುದಾರ, ಮಹಾರಾಷ್ಟ್ರ ಸೈಕ್ಲಿಂಗ್ ತಂಡ) ಮತ್ತು ಸಹಾಯಕ ಕಾರ್ಯದರ್ಶಿ ವಿಎನ್ ಸಿಂಗ್ ಅವರು ಸೋಮವಾರದಂದು ಮಯೂರಿರನ್ನು ಭೇಟಿಯಾಗಿ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದ್ದರು.
ಪ್ರಾಥಮಿಕ ವರದಿ ಆಧಾರದ ಮೇಲೆ ಕ್ರಮ:
ಈ ಘಟನೆ ಕುರಿತಂತೆ ತನಿಖೆಗಾಗಿ ಸಮಿತಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ರಚಿಸಿತ್ತು. ಈ ಸಮಿತಿ ತನ್ನ ಪ್ರಾಥಮಿಕ ವರದಿಯನ್ನು ಬುಧವಾರ ಸಲ್ಲಿಸಿದ್ದು, ವರದಿ ಆಧಾರಿಸಿ ಕ್ರಮ ಜರುಗಿಸಲಾಗಿದೆ. "ಪ್ರಾಥಮಿಕವಾಗಿ ಈ ಪ್ರಕರಣದಲ್ಲಿ ಕೋಚ್ ವಿರುದ್ಧ ಮಹಿಳಾ ಕ್ರೀಡಾಪಟು ಮಾಡಿರುವ ಆರೋಪಗಳು ನಿಜವೆಂದು ಕಂಡುಬಂದಿದೆ" ಎಂದು SAI ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
''ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಶಿಫಾರಸಿನ ಮೇರೆಗೆ ನೇಮಕಗೊಂಡ ಕೋಚ್ ಭಾರತೀಯ ಕ್ರೀಡಾ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ವರದಿಯ ನಂತರ, SAI ತಕ್ಷಣವೇ ಜಾರಿಗೆ ಬರುವಂತೆ ಕೋಚ್‌ನ ಒಪ್ಪಂದವನ್ನು ಕೊನೆಗೊಳಿಸಿದೆ. ಸಮಿತಿಯು ಪ್ರಕರಣದ ವಿವರವಾದ ತನಿಖೆಯನ್ನು ಮುಂದುವರೆಸುತ್ತದೆ ಮತ್ತು ಅಂತಿಮ ವರದಿಯನ್ನು ಸಲ್ಲಿಸುತ್ತದೆ.
ವಾಯುಪಡೆಯ ನಿವೃತ್ತ HR ಮ್ಯಾನೇಜರ್ ಶರ್ಮ 2014 ರಿಂದ ಸೈಕಲಿಂಗ್ ತಂಡದ ರಾಷ್ಟ್ರೀಯ ತರಬೇತುದಾರರಾಗಿದ್ದಾರೆ ಮತ್ತು ಈ ಅವಧಿಯಲ್ಲಿ ಹಲವಾರು ಜ್ಯೂನಿಯರ್ ಮತ್ತು ಹಿರಿಯ ಸೈಕ್ಲಿಸ್ಟ್‌ಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಶರ್ಮ ನೇತೃತ್ವದಲ್ಲಿ ತಂಡವು ಜೂನ್ 18 ರಿಂದ 22 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸಲು ಸ್ಲೊವೇನಿಯಾಗೆ ಪ್ರಯಾಣ ಬೆಳೆಸಿತ್ತು. ಈ ನಡುವೆ ಈ ದೂರು ಕೇಳಿ ಬಂದಿದ್ದು, ತರಬೇತಿ ಮೊಟಕುಗೊಳಿಸಿ ಭಾರತಕ್ಕೆ ಕರೆಸಿಕೊಳ್ಳಲಾಗುತ್ತಿದೆ.
ಏನೆಂದು ಆರೋಪ:
ಸೈಕ್ಲಿಸ್ಟ್ ತಂಡದೊಂದಿಗೆ ಪ್ರಯಾಣಿಸುತ್ತಿದ್ದ ಏಕೈಕ ಮಹಿಳೆಯಾಗಿದ್ದ ಮಯೂರಿ, ಶರ್ ಅವರ ವಿರುದ್ಧ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ಯತ್ನ ಆರೋಪ ಮಾಡಿದ್ದಾರೆ. ತನ್ನ ಕೊಠಡಿಗೆ ಕರೆಸಿಕೊಂಡು ಅಲ್ಲೇ ಉಳಿಯಲು ಒತ್ತಾಯಿಸಿದರು, "ತರಬೇತಿ ನಂತರದ ಮಸಾಜ್" ಅನ್ನು ನೀಡಿದರು, "ಬಲವಂತವಾಗಿ" ತನ್ನ ಕಡೆಗೆ ಎಳೆಯಲು ಪ್ರಯತ್ನಿಸಿದರು ಮತ್ತು ತನ್ನ ಜೊತೆ ಮಲಗುವಂತೆ ಕೇಳಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಿಬಿರದ ಸಮಯದಲ್ಲಿ ಆಕೆಯನ್ನು ತನ್ನ ಹೆಂಡತಿಯಂತೆ ಭಾವಿಸಿ, ಅದೇ ರೀತಿ ವರ್ತಿಸುತ್ತಿದ್ದರು ಹಾಗೂ ಜೊತೆಗೆ ಮಲಗುವಂತೆ ಪೀಡಿಸಿದ್ದರು ಎಂದು ತಿಳಿದು ಬಂದಿದೆ.
ಕೋಚ್ ಬೇಡಿಕೆಗಳನ್ನು ಆಕೆ ವಿರೋಧಿಸಿದಾಗ, "ಅವಳನ್ನು NCOE ನಿಂದ ತೆಗೆದುಹಾಕುವ" ಮೂಲಕ ತನ್ನ ವೃತ್ತಿಜೀವನವನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಅವಳು ವೃತ್ತಿಯನ್ನು ಬಿಟ್ಟು "ರಸ್ತೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಾಳೆ" ನೋಡುತ್ತಿರಿ ಎಂದು ಎಚ್ಚರಿಸಿದ್ದಾರೆ. ಸೈಕ್ಲಿಸ್ಟ್ ಶಿಬಿರವನ್ನು ಮಧ್ಯದಲ್ಲಿಯೇ ಆಕೆ ಭಾರತಕ್ಕೆ ಹೊರಡಬೇಕಾಯಿತು. ಆದರೆ, ಅದಕ್ಕೂ ಮೊದಲು, ಶರ್ಮಾ ಆಕೆ ಕುಟುಂಬಕ್ಕೆ ಕರೆ ಮಾಡಿ, ಕ್ರೀಡೆಯಲ್ಲಿ ಆಕೆಗೆ ಭವಿಷ್ಯವಿಲ್ಲ, ಮದುವೆ ಮಾಡಿಬಿಡಿ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.












Click it and Unblock the Notifications