Sachin Tendulkar: ವಿಮಾನದಲ್ಲಿ ಸೊಸೆ ಬೌಲಿಂಗ್‌, ಕ್ಯಾಚ್‌ ಹಿಡಿದ ಮಗಳು: ಸಚಿನ್ ತೆಂಡೂಲ್ಕರ್ ವಿಡಿಯೋ, ಬರಹ ಭಾರಿ ವೈರಲ್

Sachin Tendulkar: ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಅಂತಲೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ವಿಮಾನದ ಒಳಗಡೆ ಮಗಳು ಹಾಗೂ ಸೊಸೆ ಜೊತೆ ಕ್ರಿಕೆಟ್ ಆಡಿದ್ದಾರೆ. ವಿದಾಯ ಹೇಳಿ ಹಲವು ವರ್ಷಗಳೇ ಕಳೆದಿದ್ದರೂ, ಅವರಲ್ಲಿನ ಕ್ರಿಕೆಟ್ ಮೇಲಿನ ಪ್ರೀತಿ ಮತ್ತು ಬ್ಯಾಟಿಂಗ್ ಮಾಡುವ ಹಂಬಲ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಘಟನೆಯೇ ಪ್ರಮುಖ ಸಾಕ್ಷಿ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಸಚಿನ್ ತೆಂಡೂಲ್ಕರ್ ಅವರು ತಮ್ಮ ಖಾಸಗಿ ಜೆಟ್ ವಿಮಾನದ ಒಳಗಡೆ ಕುಟುಂಬದೊಂದಿಗೆ ಪ್ರಯಾಣಿಸುವಾಗ ಕ್ರಿಕೆಟ್ ಆಡಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವಿಮಾನದ ಒಳಗೇ ಬ್ಯಾಟ್ ಹಿಡಿದು ನಿಂತ ಸಚಿನ್ ಅವರ ವಿಡಿಯೋವನ್ನು ಕಂಡ ಅಭಿಮಾನಿಗಳು ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Sachin Tendulkar Plays Cricket Inside Private Jet With Family Video Huge Viral on Social Media

ವೈರಲ್ ವಿಡಿಯೋದಲ್ಲಿ ಏನಿದೆ?

ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಅವರು ವಿಮಾನದ ಕಿರಿದಾದ ಜಾಗದಲ್ಲಿ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಲು ಸಜ್ಜಾಗಿ ನಿಂತಿರುತ್ತಾರೆ. ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರ ಪತ್ನಿ (ಸಚಿನ್ ಅವರ ಸೊಸೆ) ಸಾನಿಯಾ ಚಂದೋಕ್ ಅವರು ಬೌಲರ್ ಮಾಡಿದ್ದಾರೆ. ಕೆಂಪು ಬಣ್ಣದ ಚೆಂಡನ್ನು ಸಚಿನ್ ಕಡೆಗೆ ಎಸೆದಿದ್ದು, ಇನ್ನು ಸಚಿನ್ ಅವರ ಮಗಳು ಸಾರಾ ತೆಂಡೂಲ್ಕರ್ ವಿಮಾನದ ಸೋಫಾದ ಮೇಲೆ ಕುಳಿತು ಫೀಲ್ಡರ್ ಆಗಿ ಕ್ಯಾಚ್ ಹಿಡಿಯಲು ಕಾಯುತ್ತಿದ್ದಾರೆ.

ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್ ಅವರು, 'ನೀವು ಯಾರೂ ನನ್ನನ್ನು ಔಟ್ ಮಾಡಲು ಸಾಧ್ಯವೇ ಇಲ್ಲ,' ಎಂದು ಸಾರಾಗೆ ತಮಾಷೆಯಾಗಿ ಸವಾಲು ಹಾಕುತ್ತಾರೆ. ಬಳಿಕ ಸಚಿನ್ ತಮ್ಮ ಬ್ಯಾಟನ್ನು ಉಲ್ಟಾ ಹಿಡಿದು ಬ್ಯಾಟಿಂಗ್ ಮಾಡಲು ಮುಂದಾಗುತ್ತಾರೆ. ಮೊದಲ ಎಸೆತದಲ್ಲಿ ಸಾರಾ ಕ್ಯಾಚ್ ಕೈಬಿಟ್ಟಾಗ ನಗುವಿನ ಅಲೆ ಏಳುತ್ತದೆ. ಆದರೆ ಮುಂದಿನ ಎಸೆತದಲ್ಲೇ ಸಾರಾ ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಸಚಿನ್ ಅವರನ್ನು ಔಟ್ ಮಾಡಿ ಸಡಗರದಿಂದ ಸಂಭ್ರಮಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಬರಹದಲ್ಲಿ ಏನಿದೆ?

ಈ ಆಪ್ತವಾದ ಕೌಟುಂಬಿಕ ಕ್ಷಣದ ವಿಡಿಯೋಗೆ ಸಚಿನ್ ತೆಂಡೂಲ್ಕರ್ ಅವರು ಬರೆದಿರುವ ಬರಹ ಎಲ್ಲರ ಗಮನ ಸೆಳೆದಿದೆ. ಅವರು, 'ನಾವು ಎಷ್ಟೇ ಎತ್ತರದಲ್ಲಿದ್ದರೂ, ನಮ್ಮ ಕ್ರಿಕೆಟ್ ಮೇಲಿನ ಹಂಬಲ ಹಾಗೂ ಸಕಾರಾತ್ಮಕ ಮನೋಭಾವ ಮಾತ್ರ ಬದಲಾಗಬಾರದು,' ಎಂದು ಬರೆದುಕೊಂಡಿದ್ದಾರೆ. ಮುಂಬೈನ ಗಲ್ಲಿ ಕ್ರಿಕೆಟ್‌ನಿಂದ ಹಿಡಿದು ಆಗಸದ ಎತ್ತರದವರೆಗೂ ಕ್ರಿಕೆಟ್ ಮೇಲಿನ ತಮ್ಮ ಒಲವು ಒಂದೇ ಆಗಿರುತ್ತದೆ ಎನ್ನುವುದನ್ನು ಸಾರಿಸಿದ್ದಾರೆ.

ನೆಟ್ಟಿಗರು ಹೇಳೋದೇನು?

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಗ್ಯಕರ ಚರ್ಚೆಗೆ ಕಾರಣವಾಗಿದೆ. ಸಚಿನ್ ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರಿಕೆಟ್ ಶೈಲಿಯಲ್ಲೇ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಎದುರಾಳಿ ತಂಡದ ಸಾರಾ ಉದ್ದೇಶಪೂರ್ವಕವಾಗಿಯೇ ಮೊದಲ ಕ್ಯಾಚ್ ಬಿಟ್ಟಿದ್ದಾರೆ, ಅಪ್ಪನನ್ನು ಔಟ್ ಮಾಡಲು ಅವಳಿಗೆ ಇಷ್ಟವಿರಲಿಲ್ಲ, ಇವರೆಲ್ಲ ಮೊದಲೇ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ,' ಎಂದು ತಮಾಷೆಯಾಗಿ ಟ್ರೋಲ್ ಮಾಡಿದ್ದಾರೆ.

ಮತ್ತೊಬ್ಬ ಅಭಿಮಾನಿ, "ಸರ್, ತಕ್ಷಣ ಡಿಆರ್‌ಎಸ್ ತೆಗೆದುಕೊಳ್ಳಿ, ಇದು ಖಂಡಿತವಾಗಿಯೂ ನಾಟೌಟ್,' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮಾಜಿ ಕೋಚ್ ರವಿಶಾಸ್ತ್ರಿ ಅವರ ಶೈಲಿಯನ್ನು ನೆನೆದು, 'ಪಿಚ್ ಪರಿಸ್ಥಿತಿಯನ್ನು ಲೆಕ್ಕಕ್ಕೇ ತೆಗೆದುಕೊಳ್ಳಬೇಡಿ ಎಂದು ರವಿಶಾಸ್ತ್ರಿ ಹೇಳುತ್ತಿದ್ದರು. ಆದರೆ ಸಚಿನ್ ಇಡೀ ಭೂಮಿಯ ಕ್ರಿಕೆಟ್ ಮೈದಾನವನ್ನೇ ಲೆಕ್ಕಕ್ಕಿಲ್ಲದಂತೆ ಮಾಡಿ ಆಕಾಶದಲ್ಲಿ ಆಡುತ್ತಿದ್ದಾರೆ,' ಎಂದು ತಮಾಷೆಯ ಬರಹ ಬರೆದುಕೊಂಡಿದ್ದಾರೆ.

ಭದ್ರತೆಯ ಕುರಿತು ಸಣ್ಣ ಚರ್ಚೆ

ಇದೇ ವೇಳೆ ಕೆಲವು ಬಳಕೆದಾರರು ವಿಮಾನದ ಒಳಗೆ ಮೊಬೈಲ್ ವೈಬ್ರೇಶನ್ ಕೂಡ ಅನುಮತಿಸುವುದಿಲ್ಲ. ಹಾಗಿರುವಾಗ ಚೆಂಡುಗಳನ್ನು ಎಸೆಯಲು ಹೇಗೆ ಅವಕಾಶ ನೀಡಲಾಯಿತು ಎಂದು ವಿಮಾನದ ಸುರಕ್ಷತೆಯ ದೃಷ್ಟಿಯಿಂದ ಪ್ರಶ್ನಿಸಿದ್ದಾರೆ. ಆದರೆ, ಅದು ಅತ್ಯಂತ ಹಗುರವಾದ ಸಾಫ್ಟ್ ಬಾಲ್ ಆಗಿದ್ದರಿಂದ ಮತ್ತು ಅದು ಕೇವಲ ಒಂದು ಮೋಜಿನ ಕೌಟುಂಬಿಕ ಕ್ಷಣವಾಗಿದ್ದರಿಂದ ಯಾವುದೇ ಅಪಾಯವಿರಲಿಲ್ಲ ಎಂದು ಹೆಚ್ಚಿನ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+