ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಕ್ರೀಡೆ: ಜಗಳೂರು ತಾಲೂಕಿನಲ್ಲಿ ಹಳ್ಳಿ ಪ್ರತಿಭೆಗಳೇ ಮೇಲುಗೈ

|
Google Oneindia Kannada News

ದಾವಣಗೆರೆ, ಆಗಸ್ಟ್‌ 28: ಆಗಸ್ಟ್‌ 27ರಂದು ಜಗಳೂರಿನ ಕ್ರೀಡಾಂಗಣದಲ್ಲಿ ದಸರಾ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪಟ್ಟಣ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕ್ರೀಡೆಯನ್ನು ಆಯೋಜಿಸಲಾಗಿತ್ತು. ವಾಲಿಬಾಲ್‌, ಕೋ ಕೋ, ಕಬ್ಬಡ್ಡಿ, ಪುಟ್‌ಬಾಲ್‌, ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ನಗರ ಪ್ರದೇಶಗಳಿಗಿಂತ ಹಳ್ಳಿಗಾಡಿನ ಕ್ರೀಡಾಪಟುಗಳೇ ಹೆಚ್ಚಿನದಾಗಿ ಭಾಗವಹಿಸಿದ್ದು, ವಿಶೇಷವಾಗಿದೆ. ದಸರಾ ಕ್ರೀಡಾಕಟದಲ್ಲಿ ಒಟ್ಟು 138 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಹಳ್ಳಿಗಳಿಂದ ಬಂದ ಕ್ರೀಡಾಪಟುಗಳೇ ಹೆಚ್ಚಾಗಿದ್ದರು.

ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ ಎಲ್ಲಾರಿಗೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಿದ್ದರು. ಸುಮಾರು ಎರಡು ವರ್ಷಗಳಿಂದ ಮಹಾಮಾರಿ ಕೊರೊನಾದಿಂದ ಈ ಕ್ರೀಡೆಗೆ ಕರಿನೆರಳು ಬಿದ್ದಿತ್ತು. ಯಾವುದೇ ಕಾರ್ಯಕ್ರಮಗಳು ಕಡ ವಿಜೃಂಭಣೆಯಿಂದ ನಡೆದಿರಲಿಲ್ಲ. ಮಹಾಮಾರಿ ಕೊರೊನಾ ತೊಲಗಿದ್ದರಿಂದ ಈ ವರ್ಷ ವರ್ಷದ ಕ್ರೀಡಾಕೂಟಕ್ಕೆ ಕಳೆ ಬಂದಂತಾಗಿತ್ತು. ಈ ಬಾರಿಯ ಕ್ರೀಡೆಗೆ ಪ್ರತ್ಸಾಹಿಸಿ ಹಳ್ಳಿ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸುವಲ್ಲಿ ಶಾಸಕ ಎಸ್‌.ವಿ.ರಾಮಚಂದ್ರಪ್ಪ ಅವರ ಪಾತ್ರ ಪ್ರಮುಖವಾಗಿದೆ. ಅದರಲ್ಲಿಯೂ ಟಿ ಬಡಪ್ಪನವರು ಹಳ್ಳಿಯ ಪ್ರತಿಭೆಗಳಿಗೆ ಮೊದಲಿನಿಂದಲೂ ಪ್ರೋತ್ಸಹಿಸುತ್ತಾ ಬಂದಿದ್ದು, ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟದವರೆಗೂ ಪರಿಚಯಿಸಿದ್ದಾರೆ.

ಮೈಸೂರು ದಸರಾ: ಚಾಮುಂಡಿ ದೇವಿಗೆ ವಿಶೇಷ ಪೂಜೆಮೈಸೂರು ದಸರಾ: ಚಾಮುಂಡಿ ದೇವಿಗೆ ವಿಶೇಷ ಪೂಜೆ

ಹಳ್ಳಿಗಾಡಿನ ಕ್ರೀಡಾಪಟುಗಳೇ ಮೇಲುಗೈ
ರಾಜ್ಯಾದ್ಯಂತ ಈ ಕ್ರೀಡಾಕೂಟ ನಡೆದಿದ್ದು, ಜಗಳೂರು ತಾಲೂಕಿನಲ್ಲಿಯೂ 447 ಕ್ರೋಡಾಪಟುಗಳು ಭಾಗವಹಿಸಿ ಕ್ರೀಡೆಯ ಮೆರಗನ್ನು ಹೆಚ್ಚಿಸಿದರು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರತಿಭೆಗಳೇ ಹೆಚ್ಚಾಗಿ ಪಾಲ್ಗೊಂಡಿದ್ದರು. ಗೆಲುವಿನಲ್ಲಿ ಸಹ ಗ್ರಾಮೀಣ ಭಾಗದವರೇ ಮೇಲುಗೈ ಸಾಧಿಸಿದ್ದಾರೆ. ಕೇವಲ ನಗರದವರಿಗೆ ಸೀಮಿತವಾಗಿದ್ದ ಪುಟ್‌ಬಾಲ್‌ ಕ್ರೀಡೆ ಈಗ ದಸರಾ ಕ್ರೀಡಾ ಕೂಟದ ಮೂಲಕ ಗ್ರಾಮೀಣ ಪ್ರದೇಶದವರೆಗೂ ತಲುಪಿದ್ದು ವಿಶೇಷವಾಗಿದೆ.

Rural Talents Shine in Dasara Sports Held in Jagaluru

ಅಥ್ಲೆಟಿಕ್ ವಿಭಾಗದಲ್ಲಿನ ಕ್ರೀಡಾಪಟುಗಳು
ಅಥ್ಲೆಟಿಕ್ ವಿಭಾಗದಲ್ಲಿ 60 ಜನ ಕ್ರೀಡಾಪಟುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, 30 ಜನ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ಇನ್ನು ಗುಂಪು ಆಟದಲ್ಲಿ 7 ತಂಡಗಳು ಪ್ರಥಮ ಹಾಗೂ 7 ತಂಡಗಳು ದ್ವಿತೀಯ ಸ್ಥಾನಗಳಿಗೆ ಲಗ್ಗೆ ಇಟ್ಟರು. ಇದೆ ಮೊದಲ ಬಾರಿಗೆ ಪುಟ್‌ಬಾಲ್‌ನಲ್ಲಿ ತೋರಣಗಟ್ಟೆ ಎ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದೆ. ಈ ಗ್ರಾಮದ ವಿಶೇಷ ಅಂದರೆ ಕ್ರೀಡೆಯಲ್ಲಿ ಯಾವಾಗಲೂ ಮೇಲುಗೈ ಸಾಧಿಸುವುದೇ ಆಗಿದೆ.

ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ
ಶಾಸಕ ಎಸ್‌.ವಿ. ರಾಮಚಂದ್ರಪ್ಪ ಅವರು ಗೆದ್ದ ತಂಡಗಳಿಗೆ ಶುಭ ಕೋರುವ ಮೂಲಕ ಸೋತವರಿಗೆ ಆತ್ಮ ವಿಶ್ವಾಸ ತುಂಬಿದರು. ಪ್ರಶಸ್ತಿ ವಿತರಿಸಿ ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರ ನಾನು ಕ್ರೀಡೆಯಿಂದಲೇ ರಾಜಕೀಯಕ್ಕೆ ಬಂದಿರುವುದು. ನನಗೂ ಕ್ರೀಡೆಯ ಮೇಲಿನ ಪ್ರೀತಿ ಯಾವಾಗಲೂ ಕಡಿಮೆ ಆಗಿಲ್ಲ. ಇದರಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ವಿಶ್ವಸದ ನುಡಿಗಳನ್ನಾಡಿದರು. ರಾಜ್ಯ, ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದವರೆಗೂ ಹೋಗಿ ಜಗಳೂರಿನ ಕೀರ್ತಿ ತನ್ನಿ ಎಂದು ಆರೈಸಿದರು.

ಸಾಂಪ್ರದಾಯಿಕ ಮೈಸೂರು ದಸರಾಕ್ಕೆ ಲೋಗೋ, ಭಿತ್ತಿಚಿತ್ರ ಸಿದ್ಧ!ಸಾಂಪ್ರದಾಯಿಕ ಮೈಸೂರು ದಸರಾಕ್ಕೆ ಲೋಗೋ, ಭಿತ್ತಿಚಿತ್ರ ಸಿದ್ಧ!

ಸೋತವರಿಗೆ ಬೆನ್ನು ತಟ್ಟಿದ ಸುರೇಶ್‌ ರೆಡ್ಡಿ
ಇನ್ನು ತಾಲೂಕು ಕ್ರೀಡಾ ಪರಿವೀಕ್ಷಕರಾದ ಸುರೇಶ್ ರೆಡ್ಡಿ ಮಾತನಾಡಿ, ಜಗಳೂರು ತಾಲೂಕಿನ ಭಾಗದ ಕ್ರೀಡಾ ಪ್ರತಿಭೆಗಳನ್ನು ಹೊರ ತರಲು ಈ ಕ್ರೀಡಾಕೂಟ ಸಹಾಯಕವಾಗಿದೆ. ಶಾಸಕರು ಕ್ರೀಡಾ ಪ್ರೋತ್ಸಾಹಕರು ಆಗಿರುವುದರಿಂದ ನಮ್ಮ ತಾಲೂಕು ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದವರೆಗೆ ಹೆಸರು ಮಾಡುತ್ತಿದೆ. ಭಾಗವಹಿಸಿದ ಎಲ್ಲರೂ ಯಾವುದೇ ದ್ವೇಷ ಸಾಧಿಸದೆ ಪ್ರೀತಿಯಿಂದ ಕ್ರೀಡೆಯನ್ನು ಆಡಬೇಕು. ದ್ವೇಷಿಸಿ ಆಡುವುದು ಆಟಗಾರನ ಲಕ್ಷಣವಲ್ಲ, ಇನ್ನು ಉತ್ತಮ ಪ್ರದರ್ಶನ ತೋರಿ ತಾಲೂಕಿನ ಹೆಸರನ್ನು ಎತ್ತರಕ್ಕೆ ಬೆಳೆಸಿ. ಸೋತಿದ್ದೇವೆ ಎಂದು ಯಾವತ್ತಿಗೂ ಕುಗ್ಗಬಾರದು. ಮಂಬರುವ ಕ್ರೀಡಾಕೂಟದಲ್ಲಿ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂದು ಸೋಲನುಭವಿಸಿದ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಯುವ ಸಬಲಿಕರಣ ಇಲಾಖೆ ಸಹಾಯಕ ನಿರ್ದೇಶಕ ಸುಚೇತಾ ನವಿಲಿಗಿ. ಪಟ್ಟಣ ಪಂಚಾಯತಿ ಸದಸ್ಯ ಪಾಪಲಿಂಗಪ್ಪ, ಜಿಲ್ಲಾ ಯುವ ಪ್ರಶಸ್ತಿ ವಿಜೇತರಾದ ಬಡಪ್ಪ ಟಿ, ಅಂತರಾಷ್ಟ್ರೀಯ ಕುಸ್ತಿ ತರಬೇತುದಾರ ಶಿವಾನಂದ, ಕ್ರೀಡಾ ತರಬೇತುದಾರ ಪಾಪಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Dasara sports were organized in Jagaluru taluk. Rural players showcased their talents in this event held on August 27th. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X