IPL 2026: ಎಸ್ಆರ್ಎಚ್-ಆರ್ಆರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?
SRH Vs RR IPL 2026: ಹೈದರಾಬಾದ್ನ ಸೋಮವಾರ (ಏಪ್ರಿಲ್ 13) ನಡೆಯುವ ಐಪಿಎಲ್ 2026ರ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಎಸ್ಆರ್ಎಚ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗಾದ್ರೆ, ಇಲ್ಲಿನ ವಾತಾವರಣ ಹೇಗಿರಲಿದೆ? ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಬಾರಿಯ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರದರ್ಶನ ಹೇಳಿಕೊಳ್ಳುವಷ್ಟೇನಿಲ್ಲ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಜಯ ಸಾಧಿಸಿರುವ ಹೈದರಾಬಾದ್, ಅಂಕಪಟ್ಟಿಯಲ್ಲಿ ಸದ್ಯ 7ನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮಾತ್ರ ಜಯ ದಾಖಲಿಸಿರುವ ಎಸ್ಆರ್ಹೆಚ್ ತಂಡ, ಆರ್ಸಿಬಿ, ಎಲ್ಎಸ್ಜಿ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿದೆ. ಹೀಗೆ ಸೋಲಿನ ಸುಳಿಯಿಂದ ಹೊರಬಂದು ಮತ್ತೆ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ.

ಆಡಿರುವ 4 ಪಂದ್ಯಗಳಲ್ಲಿ ಗೆಲುವು
ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಈ ಸೀಸನ್ನ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಈವರೆಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.
ಎಸ್ಆರ್ಎಚ್ ವಿರುದ್ಧ ಗೆಲುವಿನ ಭರವಸೆಯಲ್ಲಿ ಆರ್ಆರ್
ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಮಣಿಸಿದೆ. ರಾಜಸ್ಥಾನ್ ತಂಡದ ಬ್ಯಾಟಿಂಗ್ ವಿಭಾಗವು ಉತ್ತಮ ಫಾರ್ಮ್ನಲ್ಲಿದ್ದು, ಸತತವಾಗಿ ಆಕ್ರಮಣಕಾರಿ ಪ್ರದರ್ಶನ ನೀಡುವ ಮೂಲಕ ಎದುರಾಳಿ ತಂಡದ ಬೌಲರ್ಗಳನ್ನು ಬಗ್ಗುಬಡಿಯುವಲ್ಲಿ ಯಶಸ್ವಿ ಕಾಣುತ್ತಾ ಬಂದಿದೆ. ಹಾಗೆಯೇ ಇಂದಿನ ಎಸ್ಆರ್ಎಚ್ ವಿರುದ್ಧವೂ ಗೆಲುವು ಸಾಧಿಸುವ ಭರವಸೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣವು ಬೌಲರ್ಗಳಿಗೆ ಸವಾಲಿನ ಮೈದಾನವಾಗಿದೆ. ಇಂದಿನ ಪಂದ್ಯಕ್ಕೆ ಪಿಚ್ ಸಂಖ್ಯೆ 3 ಅನ್ನು ಬಳಸಲಾಗುತ್ತಿದ್ದು, ಇದು ಸಮತಟ್ಟಾದ ಮತ್ತು ಮಿಶ್ರ ಮಣ್ಣಿನೊಂದಿಗೆ ಕೂಡಿದೆ. ಈ ಪಿಚ್ನಲ್ಲಿ ಸ್ಪಿನ್ನರ್ಗಳಿಗೆ ತುಸು ಹೊಡೆತ ಬೀಳಬಹುದು. ವೇಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನ ಗಮನಿಸಿದರೆ, ಎರಡೂ ತಂಡಗಳು ತಮ್ಮ ವೇಗದ ಬೌಲಿಂಗ್ ಪಡೆಯ ಮೇಲೆ ಹೆಚ್ಚಿನ ಭರವಸೆಯನ್ನು ಇಟ್ಟಿವೆ.
ಹೈದರಾಬಾದ್ ಹವಾಮಾನ ವರದಿ
ಹೈದರಾಬಾದ್ನಲ್ಲಿ ತಾಪಮಾನ ಪ್ರಮಾಣ ಹೆಚ್ಚಿರಲಿದೆ. ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ ಇದೆ. ಟಾಸ್ ಸಮಯದಲ್ಲಿ ತಾಪಮಾನವು ಸುಮಾರು 37°C ಇರಲಿದ್ದು, ಪಂದ್ಯ ಮುಕ್ತಾಯದ ವೇಳೆಗೆ ಅಂದಾಜು 32°Cಗೆ ತಗ್ಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಟ್ಟಿನಲ್ಲಿ ಈ ಪಂದ್ಯಕ್ಕೆ ಯಾವುದೇ ಮಳೆ ಅಡ್ಡಿ ಇರುವುದಿಲ್ಲ. ಪೂರ್ಣ ಪಂದ್ಯ ನಡೆಯಲಿದೆ ಎನ್ನುವ ವಿಶ್ವಾಸ ಬಂದಂತಾಗಿದ್ದು, ಇದರಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ.
-
ಮೈದಾನದಲ್ಲಿ ಲೆಜೆಂಡ್ ಬೌಲರ್ಗಳ ಮೇಲೆ ಸವಾರಿ, ಬಸ್ನಲ್ಲಿ ಸ್ವಿಚ್, ಲೈಟ್, ಎಸಿ ಜೊತೆ ಕಿಲಾಡಿ ಆಟ; ವೈಭವ್ ವಿಡಿಯೋ ಭಾರಿ ವೈರಲ್ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ಗಳಿಗೆ ಬೆವರಿಳಿಸಿದ ಆರ್ಸಿಬಿ ಫಿಲ್ ಸಾಲ್ಟ್ -
ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಸುಮ್ನೆ ಬಾಲ್ ಕೊಡೋ ಮಾರಾಯ.. ನಾ ಕೊಡಕಿಲ್ಲ ಏನ್ ಮಾಡ್ತೀರಾ? ಟಿಮ್ ಡೇವಿಡ್-ಅಂಪೈರ್ ಫನ್ನಿ ವಿಡಿಯೋ ಭಾರೀ ವೈರಲ್ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್












Click it and Unblock the Notifications