Adani Green Energy: ಇಎಸ್‌ಜಿ ರೇಟಿಂಗ್: ಭಾರತೀಯ ಕಂಪನಿಗಳ ಪಟ್ಟಿಯಲ್ಲಿ ಅದಾನಿ ಗ್ರೀನ್ ಎನರ್ಜಿಗೆ ಅಗ್ರಸ್ಥಾನ
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ಸಂಸ್ಥೆಯು 'ಕೇರ್‌ಎಡ್ಜ್-ಇಎಸ್‌ಜಿ' (CareEdge-ESG) ಮೌಲ್ಯಮಾಪನಕ್ಕ ಒಳಪಟ್ಟ ಭಾರತೀಯ ಕಂಪನಿಗಳಲ್ಲೇ ಅತಿ ಹೆಚ್ಚು ಅಂಕಗಳನ್ನು ಗಳಿಸಿದೆ. ಒಟ್ಟಾರೆ 87.3 ಅಂಕಗಳೊಂದಿಗೆ 'ಕೇರ್‌ಎಡ್ಜ್-ಇಎಸ್‌ಜಿ 1+' ರೇಟಿಂಗ್ ಅನ್ನು ಪಡೆದುಕೊಂಡಿದೆ. ಸೆಬಿ ಅಡಿಯಲ್ಲಿ ನೋಂದಾಯಿತ ಇಎಸ್‌ಜಿ ರೇಟಿಂಗ್ ಸಂಸ್ಥೆಯಾದ 'ಕೇರ್ ಇಎಸ್‌ಜಿ ರೇಟಿಂಗ್ಸ್ ಲಿಮಿಟೆಡ್' ಈ ಶ್ರೇಯಾಂಕವನ್ನು ನೀಡಿದೆ.
ಈ ಅಂಕವು ಸುಸ್ಥಿರತೆಯ ಕಾರ್ಯಕ್ಷಮತೆಯಲ್ಲಿ ತನ್ನ ಸಮಕಾಲೀನ ಉದ್ಯಮ ಸಂಸ್ಥೆಗಳಿಗೆ ಹೋಲಿಸಿದರೆ ಎಜಿಇಎಲ್ ಸಂಸ್ಥೆಯನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ. ಆಡಳಿತಾತ್ಮಕ ಮಾನದಂಡಗಳು, ಹವಾಮಾನ ಕಾರ್ಯತಂತ್ರ, ಸಂಪನ್ಮೂಲ ನಿರ್ವಹಣೆ ಮತ್ತು ಪಾರದರ್ಶಕತೆಯಲ್ಲಿ ಕಂಪನಿಯು ತೋರಿರುವ ಅತ್ಯುತ್ತಮ ಪ್ರದರ್ಶನವನ್ನು ಈ ಮೌಲ್ಯಮಾಪನವು ಎತ್ತಿ ತೋರಿಸಿದೆ. ಅಲ್ಲದೆ, ಕಂಪನಿಯ ಬಲಿಷ್ಠ ಮಾಹಿತಿ ಬಹಿರಂಗಪಡಿಸುವಿಕೆ ಮತ್ತು ಮಂಡಳಿ ಮಟ್ಟದ ಸಮರ್ಥ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸಹ ಇದು ಗುರುತಿಸಿದೆ.

ಕೇರ್‌ಎಡ್ಜ್-ಇಎಸ್‌ಜಿ (CareEdge-ESG) ಮೌಲ್ಯಮಾಪನವು ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಅಪಾಯಗಳು ಹಾಗೂ ಅವಕಾಶಗಳನ್ನು ವಿವಿಧ ಮಾನದಂಡಗಳ ಆಧಾರದ ಮೇಲೆ ವಿವರವಾಗಿ ಪರಿಶೀಲಿಸಿದೆ. ಹವಾಮಾನ ಅಪಾಯ ನಿರ್ವಹಣೆ, ಜಲ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಉತ್ತಮ ಆಡಳಿತ ಪದ್ಧತಿಗಳಲ್ಲಿ ಎಜಿಇಎಲ್ ತೋರಿರುವ ಸಾಧನೆಯನ್ನು ಇಲ್ಲಿ ಗುರುತಿಸಲಾಗಿದೆ. ಅಲ್ಲದೆ ನಿರ್ದಿಷ್ಟ ನೀತಿಗಳು, ನಿರ್ವಹಣಾ ವ್ಯವಸ್ಥೆಗಳು ಮತ್ತು ಸಂಸ್ಥೆಯಾದ್ಯಂತ ಇಎಸ್‌ಜಿ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಮತ್ತು ಸಾಮಾಜಿಕ ಅಪಾಯಗಳನ್ನು ಎದುರಿಸಲು ಕಂಪನಿಯು ಅನುಸರಿಸುತ್ತಿರುವ ವ್ಯವಸ್ಥಿತ ವಿಧಾನವನ್ನು ಈ ವರದಿ ತಿಳಿಸಿದೆ.
ಈ ಮಾನ್ಯತೆಯು ಅದಾನಿ ಗ್ರೂಪ್‌ನಲ್ಲಿ ನಡೆಯುತ್ತಿರುವ ಸುಸ್ಥಿರತೆಯ ಕಡೆಗಿನ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ನವೀಕರಿಸಬಹುದಾದ ಇಂಧನ, ಬಂದರುಗಳು, ಲಾಜಿಸ್ಟಿಕ್ಸ್ ಮತ್ತು ಉಪಯುಕ್ತತೆಗಳಂತಹ ತನ್ನ ಮೂಲಸೌಕರ್ಯ ವ್ಯವಹಾರಗಳಾದ್ಯಂತ ಇಎಸ್‌ಜಿ ತತ್ವಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ವಿಧಾನವು ಸಮೂಹದ ಆಡಳಿತ ಚೌಕಟ್ಟುಗಳು, ಅಪಾಯ ನಿರ್ವಹಣಾ ವ್ಯವಸ್ಥೆಗಳು ಮತ್ತು ದೀರ್ಘಾವಧಿಯ ಬಂಡವಾಳ ಹಂಚಿಕೆಯ ಮೇಲೆ ಪ್ರಭಾವ ಬೀರುತ್ತಿದೆ.
ಹಣಕಾಸಿನ ನೆರವು ಪಡೆಯಲು ಸುಸ್ಥಿರತೆಯ ಕಾರ್ಯಕ್ಷಮತೆಯು ಪ್ರಮುಖ ಅಂಶವಾಗುತ್ತಿರುವ ಈ ಸಮಯದಲ್ಲಿ, ಈ ಹೊಸ ರೇಟಿಂಗ್ ಹೂಡಿಕೆದಾರರು ಮತ್ತು ಸಾಲದಾತರ ಮುಂದೆ ಎಜಿಇಎಲ್‌ನ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಅಲ್ಲದೆ, ಭವಿಷ್ಯದ ಬೃಹತ್ ಪ್ರಮಾಣದ ನವೀಕರಿಸಬಹುದಾದ ಇಂಧನ ಯೋಜನೆಗಳಿಗಾಗಿ 'ಸುಸ್ಥಿರ ಮತ್ತು ಪರಿವರ್ತನೆ-ಸಂಬಂಧಿತ ಬಂಡವಾಳ' ಸಂಗ್ರಹಿಸುವ ಕಂಪನಿಯ ಪ್ರಯತ್ನಗಳಿಗೆ ಇದು ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.












Click it and Unblock the Notifications