Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ
Kalyana Karnataka Train: ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ರೈಲುಗಳ ಸಮಸ್ಯೆ ತೀವ್ರವಾಗಿ ಮುಂದುವರಿದಿದೆ. ಕರ್ನಾಟಕದವರೇ ಆಗಿರುವ ವಿ ಸೋಮಣ್ಣ ಅವರು, ರೈಲ್ವೆ ಮತ್ತು ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿದ್ದರೂ ಈ ಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈ ಭಾಗದ ರೈಲು ಸಮಸ್ಯೆಯ ಬಗ್ಗೆ ಹವ್ಯಾಸಿ ಬರಹಗಾರ ಸಿದ್ದು ಮಠಪತಿ ಎನ್ನುವವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಹಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಬೇಕಾದಷ್ಟು ರೈಲು ಸೇವೆ ಸಿಗದೆ ಜನ ನಿತ್ಯ ಪರದಾಡುವ ಪರಿಸ್ಥಿತಿ ಇದೆ. ಉಸಿರುಗಟ್ಟಿಸುವಂತಹ, ನರಕದಂತಹ ಜನರಲ್ ಕೋಚ್ ನನಗೆ ಸಹಿಸಲು ಆಗಲೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ತಮಗೂ ಅದೇ ಅನುಭವ ಆಗಿದೆ ಎಂದು ಹಂಚಿಕೊಂಡಿದ್ದಾರೆ.

Opinion: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು
ಶಂಕರ ಪಾಟೀಲ ಎನ್ನುವವರು 67 ವರ್ಷಗಳಿಂದ ಇಲ್ಲೇ ಕಲಬುರಗಿ ಯಾದಗಿರಿ ಜಿಲ್ಲಾ ವಾಸಿಯಾಗಿರುವ, ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿರುವ ನನಗೆ ಇದೇನು ಹೊಸದಲ್ಲ. ಬಡತನ, ಹಸಿವು, ನಿರುದ್ಯೋಗ ಇಲ್ಲಿ ಸಾಮಾನ್ಯ ಸಂಗತಿ. ಇವತ್ತು ಅವರಿಗೆ ವಲಸೆ ಹೋಗುವುದು ಅನಿವಾರ್ಯ. ನಾವೆಲ್ಲಾ ಪ್ರಶ್ನೆ ಕೇಳಬೇಕಾಗಿರುವದು ನಮ್ಮನ್ನು ಆಳುವವರನ್ನು ಮತ್ತು ವಿರೋಧ ಪಕ್ಷದವರನ್ನು. ಸ್ವಾತಂತ್ರ ದೊರಕಿ 78 ವರುಷ ಕಳೆದ ಮೇಲೆ ಕೂಡ ಇವರ ಈ ಸ್ಥಿತಿಗೆ ಕಾರಣ ಯಾರು? ಈ ಭಾಗದ ಬುದ್ಧಿಜೀವಿಗಳಾದ ನಾವು ಏನು ಮಾಡುತ್ತಿದ್ದೇವೆ ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಲ್ಲರೂ ಆತ್ಮವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದಿದ್ದಾರೆ.
ಚಂದ್ರ ಮೌಳಿ ಎಂ ಎನ್ನುವವರು ಕಲಬುರಗಿಗೆ ವಿಪರೀತ ಜನ ಪ್ರಯಾಣಿಕರು ಯಾವಾಗಲೂ ಸೀಟ್ ಸಿಗೋದು ತುಂಬ ಕಷ್ಟ ಎಂದಿದ್ದಾರೆ. ಇದಕ್ಕೆ ರೈಲುಗಳ ಸಂಖ್ಯೆ ಕಡಿಮೆ.. ಪ್ರಯಾಣಿಕರ ಜಾಸ್ತಿ ಎಂದು ಸಿದ್ದು ಅವರು ಹೇಳಿದ್ದಾರೆ.
ಲಕ್ಷ್ಮೀಪುತ್ರ ಕಂಬಾರ ಎನ್ನುವವರು, ಕಲಬುರಗಿ ಸಂಸದರು ಎಚ್ಚರವಾಗಿದ್ದೀರಾ ಅಥವಾ ಕಾಣೆಯಾಗಿದ್ದೀರಾ ನೋಡಿ ಕಲಬುರಗಿ ಜನತೆಯ ಗೋಳು ಕೇಳಿಸಿಕೊಳ್ಳಲಿ ಎಂದಿದ್ದಾರೆ.
ಪ್ರಶಾಂತ್ ಎನ್ನುವವರು ಗುರುವೇ ಅಸಹಾಯಕತೆ ಏನಿಲ್ಲ. ನಮಗೆ ಹೋಗೋಕೆ ಬರೋಕೆ ಟ್ರೈನ್ ಇಲ್ಲ. ಇದನ್ನ ಕೇಳೋರು ಯಾರು ಇಲ್ಲ. ಮತದಾರ ಓಟು ಹಾಕಿ ಬರೋಕೆ ಹೋಗೋದು ಇದೆ ರೀತಿ ನೇ. ನಮಗಾಗಿ ಒಂದ್ ಟ್ರೈನ್ ಬಿಡಿ ನಾವ್ ಜಾಸ್ತಿ ಜನ ಇದ್ದೀವಿ ಅಂತ ಕೇಳೋರು ಯಾರೂ ಇಲ್ಲ.. 18ವರ್ಷದಿಂದ ನಾನು ಇದನ್ನೇ ನೋಡ್ತಿದೀನಿ. ರಾಜಕೀಯದಲ್ಲಿ ಇರೋರು ಯಾವೊಬ್ಬ ನಾಯಕನೂ ಇದರ ಬಗ್ಗೆ ಮಾತಾಡೋಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ವಿಜಯ್ ಹೆಮ್ಮಿಗೆ ಎನ್ನುವವರು, ಸರ್ಕಾರಗಳು ಅಭಿವೃದ್ಧಿ ಮಾಡಬೇಕೆಂದರೆ, ಉತ್ತಮರನ್ನು ಆರಿಸಬೇಕು. ಭ್ರಷ್ಟಾಚಾರ ಇರಬಾರದು, ವೇಗದಲ್ಲಿ ಕೆಲಸವಾಗಬೇಕು. ಮುಖ್ಯ ಜನ ಸುಶಿಕ್ಷಿತರಾಗಬೇಕು, ಪ್ರಶ್ನೆ ಮಾಡುವಂತಿರಬೇಕು. ಆದರೆ ಸೂರ್ಯ ಚಂದ್ರ ಇರುವವರೆಗೂ ಎಲ್ಲವೂ ಅಸಾಧ್ಯ ಎಂದು ಹೇಳಿದ್ದಾರೆ.












Click it and Unblock the Notifications