ಆರ್‌ಸಿಬಿ ಕಪ್ ಗೆಲ್ಲುತ್ತಾ? ಮನೆಗೆ ಬರುತ್ತಾ?

ಬೆಂಗಳೂರು ತಂಡ ಆರ್‌ಸಿಬಿ ಇದೀಗ ಐಪಿಎಲ್ ಅಖಾಡದಲ್ಲಿ ಗೆಲುವು & ಸೋಲಿನ ನಡುವೆ ಹೋರಾಟ ನಡೆಸುತ್ತಿದೆ. ಯಾಕಂದ್ರೆ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗಲು ಭಾರಿ ದೊಡ್ಡ ಕಠಿಣ ಸವಾಲು ಎದುರಾಗಿದೆ. ಇದು ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಎದೆ ಬಡಿತ ಡಬಲ್ ಆಗುವಂತೆ ಮಾಡಿದೆ. ಹಾಗಾದ್ರೆ ಆರ್‌ಸಿಬಿ ಕಪ್ ಗೆಲ್ಲುತ್ತಾ? ಆರ್‌ಸಿಬಿ ಫೈನಲ್‌ಗೆ ಹೋಗಲು ಇನ್ನೂ ಎಷ್ಟು ಮ್ಯಾಚ್ ಗೆಲ್ಲಬೇಕಿದೆ? RCB ಮುಂದಿರುವ ಸವಾಲುಗಳು ಯಾವುವು? ಬನ್ನಿ ತಿಳಿಯೋಣ.

ಈಗ ಐಪಿಎಲ್ ಪಾಯಿಂಟ್ಸ್ ಟೇಬಲ್ ನೋಡುವುದಾದರೆ ಇದೀಗ ಕೆಕೆಆರ್ ತಂಡ 11 ಪಂದ್ಯ ಆಡಿದ್ದು ಒಟ್ಟು 8 ಪಂದ್ಯ ಗೆದ್ದು, 3 ಪಂದ್ಯದಲ್ಲಿ ಸೋತಿದೆ. ಈ ಮೂಲಕ, ಕೆಕೆಆರ್ 16 ಅಂಕ ಗಿಟ್ಟಿಸಿಕೊಂಡಿದೆ. ಹಾಗೇ ಇನ್ನೊಂದು ಕಡೆ 2ನೇ ಸ್ಥಾನದಲ್ಲಿ ಇರುವ ರಾಜಸ್ಥಾನ ಟೀಂ ಕೂಡ ಕೊಲ್ಕತ್ತಾ ರೀತಿಯೇ 11 ಪಂದ್ಯ ಆಡಿದ್ದು ಒಟ್ಟು 8 ಪಂದ್ಯ ಗೆದ್ದು, 3 ಪಂದ್ಯಗಳಲ್ಲಿ ಸೋತಿದ್ದು, ಈ ಮೂಲಕ ರಾಜಸ್ಥಾನ ತಂಡ 16 ಅಂಕ ಪಡೆದಿದೆ. ಇನ್ನು 3ನೇ ಸ್ಥಾನದಲ್ಲಿ ಇರುವ ಹೈದರಾಬಾದ್ ತಂಡ 12 ಪಂದ್ಯ ಆಡಿದ್ದು ಒಟ್ಟು 7 ಪಂದ್ಯ ಗೆದ್ದು, 5 ಮ್ಯಾಚ್‌ನ ಸೋತಿದೆ ಹೀಗಾಗಿ ಹೈದರಾಬಾದ್ 14 ಅಂಕ ಗಳಸಿದೆ. ಹಾಗಾದರೆ ಆರ್‌ಸಿಬಿ ಎಷ್ಟು ಪಂದ್ಯ ಗೆದ್ದಿದೆ? ಇನ್ನು ಎಷ್ಟು ಮ್ಯಾಚ್ ಗೆದ್ದರೆ ಮುಂದಿನ ಹಂತಕ್ಕೆ ಹೋಗಲಿದೆ? ಮುಂದೆ ಓದಿ.

Royal Challengers Bengaluru Team Must Win 2 Match To Reach Next Level

ಆರ್‌ಸಿಬಿ ಕಪ್ ಗೆಲ್ಲಲು...

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 12 ಮ್ಯಾಚ್ ಆಡಿದ್ದು, 5 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಹೀಗಾಗಿ 7 ಪಂದ್ಯ ಸೋತಿರುವ ನಮ್ಮ ಬೆಂಗಳೂರು ತಂಡ 10 ಅಂಕವನ್ನ ಪಡೆದಿದೆ. ಹೀಗಾಗಿ ಆರ್‌ಸಿಬಿ ಬೆಂಗಳೂರು ತಂಡ ಮುಂದಿನ ಹಂತಕ್ಕೆ ಹೋಗಲು ಇನ್ನುಳಿದ 2 ಮ್ಯಾಚ್ ಗೆಲ್ಲಲೇಬೇಕಿದೆ. ಅದರಲ್ಲೂ ದೆಹಲಿ ತಂಡದ ಎದುರು ನಾಳೆ ಆರ್‌ಸಿಬಿ ಮ್ಯಾಚ್ ಆಡಲಿದ್ದು, ಆ ನಂತರ ಚೆನ್ನೈ ವಿರುದ್ಧ ಆರ್‌ಸಿಬಿ ತನ್ನ ಅಂತಿಮ ಪಂದ್ಯವನ್ನು ಆಡಲಿದೆ. ಹೀಗಾಗಿ ಬಾಕಿ ಇರುವ ಎರಡೂ ಪಂದ್ಯ ಗೆದ್ದರೆ ಮಾತ್ರ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಿ, 2024ರ ಐಪಿಎಲ್ ಕಪ್ ಗೆಲ್ಲುವುದು ಸಾಧ್ಯ.

ಅಭಿಮಾನಿಗಳ ಪ್ರಾರ್ಥನೆ ಏನು?

ಒಟ್ನಲ್ಲಿ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಲಿ, 2024ರ ಐಪಿಎಲ್ ಟೂರ್ನಿಯಲ್ಲಿ ನಮ್ಮ ಆರ್‌ಸಿಬಿ ಕಪ್ ಗೆಲ್ಲಲಿ ಅಂತಾ ಕನ್ನಡಿಗರು ಕಾಯುತ್ತಿದ್ದಾರೆ. ಮತ್ತೊಂದು ಕಡೆ ನಾಳೆ ನಮ್ಮ ಆರ್‌ಸಿಬಿ ತಂಡಕ್ಕೆ ದೆಹಲಿ ತಂಡ ಎದುರಾಳಿ ಆಗಲಿದ್ದು, ಈ ಪಂದ್ಯಕ್ಕಾಗಿ ಈಗ ವಿರಾಟ್‌ & ಟೀಂ ರೆಡಿಯಾಗುತ್ತಿದೆ. ಸತತವಾಗಿ ಗೆಲುವು ಸಾಧಿಸಿರುವ ಆರ್‌ಸಿಬಿ ತಂಡಕ್ಕೆ ಈಗ ಹುಮ್ಮಸ್ಸು ಇದ್ದು, ಮ್ಯಾಚ್ ಏನಾಗುತ್ತೆ? ಅನ್ನೋದು ನಾಳೆ ಇಷ್ಟೊತ್ತಿಗೆ ಗೊತ್ತಾಗಲಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+