ಅಂಕಲ್‌ ಮಕ್ಳು.. ಅಂಕಲ್‌ ಮಕ್ಳು.. ಚೆನ್ನೈ ತಂಡಕ್ಕೆ ಅಂಕಲ್ ಮಕ್ಳು ಅನ್ನುವುದೇಕೆ ಕನ್ನಡಿಗರು? RCB VS CSK

ಕನ್ನಡಿಗರ ಕಣಕಣದಲ್ಲೂ ಆರ್‌ಸಿಬಿ ತಂಡ ಬೆರೆತು ಹೋಗಿದೆ, ಕಳೆದ 18 ವರ್ಷಗಳಿಂದಲೂ ಆರ್‌ಸಿಬಿ ತಂಡವನ್ನು ಕನ್ನಡಿಗರು ಬೆಂಬಲಿಸುತ್ತಲೇ ಬೆನ್ನೆಲುಬಾಗಿ ನಿಂತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಹೃದಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಾರೆ ನಮ್ಮ ಕನ್ನಡಿಗರು. ಹಾಗಾದರೆ, ಅಂಕಲ್‌ ಮಕ್ಳು.. ಅಂಕಲ್‌ ಮಕ್ಳು.. ಚೆನ್ನೈ ತಂಡಕ್ಕೆ ಅಂಕಲ್ ಮಕ್ಳು ಅನ್ನುವುದೇಕೆ ಕನ್ನಡಿಗರು?

ಆರ್‌ಸಿಬಿ.. ಆರ್‌ಸಿಬಿ.. ಕಣಕಣದಲ್ಲೂ ಆರ್‌ಸಿಬಿ... ನಮ್ಮ ಹೃದಯದ ಬಡಿತ ಆರ್‌ಸಿಬಿ... ಹಿಂಗೆ ಕನ್ನಡಿಗರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಹೃದಯಲ್ಲಿಟ್ಟುಕೊಂಡು ಪ್ರೀತಿ ಮಾಡುತ್ತಾರೆ & ಪೂಜೆ ಮಾಡುತ್ತಾರೆ. ಹೀಗಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಅಷ್ಟೇ ದ್ವೇಷ ಕೂಡ ಮಾಡುತ್ತಾರೆ ಕನ್ನಡಿಗರು. ಹಾಗೇ ಚೆನ್ನೈ ಸೂಪರ್ ಕಿಂಗ್ಸ್ ಎದುರಲ್ಲಿ ಬೆಂಗಳೂರು ತಂಡ ಮ್ಯಾಚ್ ಆಡುತ್ತಿದ್ದರೆ ಅದನ್ನ ಪಾಕಿಸ್ತಾನ ವಿರುದ್ಧ ಭಾರತ ಆಡುವಂತೆ ಹೋಲಿಕೆ ಮಾಡುತ್ತಾರೆ!

Royal Challengers Bengaluru Fans Are Calling Chennai Super Kings By This Name

ಅಂಕಲ್‌ ಮಕ್ಳು.. ಅಂಕಲ್‌ ಮಕ್ಳು..

ಹೌದು, 18ನೇ ಆವೃತ್ತಿ ಐಪಿಎಲ್‌ ಶುರುವಾಗಿದೆ. ಆರ್‌ಸಿಬಿ ತಂಡ 2025ರ ಐಪಿಎಲ್ ಟೂರ್ನಿ ಉದ್ಘಾಟನೆ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಕೆಕೆಆರ್ ತಂಡವನ್ನ ಬಗ್ಗುಬಡಿದು ಮುಂದಕ್ಕೆ ನುಗ್ಗಿದೆ. ಹೀಗಿದ್ದಾಗ ಇಂದು ಚೆನ್ನೈ ಸೂಪರ್ ಕಿಂಗ್ಸ್ ಎದುರಲ್ಲಿ ಭರ್ಜರಿಯಾಗಿ ಆಡೋದಕ್ಕೆ ಆರ್‌ಸಿಬಿ ಆಟಗಾರರು ಸಕಲ ಸಿದ್ಧತೆ ನಡೆಸಿದ್ದಾರೆ. ಹಾಗಿದರೆ, ಅಂಕಲ್‌ ಮಕ್ಳು.. ಅಂಕಲ್‌ ಮಕ್ಳು.. ಚೆನ್ನೈ ತಂಡಕ್ಕೆ ಅಂಕಲ್ ಮಕ್ಳು ಅನ್ನುವುದೇಕೆ ಕನ್ನಡಿಗರು? ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದೆ, ಅದಕ್ಕೆ ಉತ್ತರ...

ಅಂಕಲ್‌ ಮಕ್ಳು.. ಅರ್ಥ ಇಲ್ಲಿದೆ ಓದಿ!

ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕನ್ನಡಿಗರು ಅಂಕಲ್‌ ಮಕ್ಳು ಅಂತಾ ಕರೆಯೋ ಕಾರಣ ಏನು ಅಂದ್ರೆ ಎರಡು ಕಾರಣಗಳು ಇವೆ. ಒಂದು ಕಾರಣ ಮಹೇಂದ್ರ ಸಿಂಗ್ ಧೋನಿ ಈ ತಂಡದ ಪ್ರಮುಖ ಆಟಗಾರ, ಮಹೇಂದ್ರ ಸಿಂಗ್ ಧೋನಿಗೆ ವಯಸ್ಸಾದ ಕಾರಣಕ್ಕೆ ಅಂಕಲ್ ಅಂತ ರೇಗಿಸುತ್ತಾರೆ ಆರ್‌ಸಿಬಿ ಅಭಿಮಾನಿಗಳು. ಹಾಗೇ ಮತ್ತೊಂದು ಕಡೆಯಲ್ಲಿ ಚೆನ್ನೈ ತಂಡದ ಆಟಗಾರರು ಬೇರೆ ರಾಜ್ಯದವರು ಅನ್ನೋ ಕಾರಣಕ್ಕೂ, ಹೀಗೆ ಕರೆಯುತ್ತಾರೆ ಎನ್ನಲಾಗುತ್ತೆ. ಈ ಮೂಲಕ ಅಂಕಲ್‌ ಮಕ್ಳು.. ಅನ್ನೋ ಪದ ಪದೇ ಪದೇ ವೈರಲ್ ಕೂಡ ಆಗುತ್ತಿದೆ.

ಆರ್‌ಸಿಬಿ ತಂಡಕ್ಕೆ ಗೆಲುವು ಗ್ಯಾರಂಟಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಕಪ್ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಐಪಿಎಲ್ 18ನೇ ಸೀಸನ್ ಆರ್‌ಸಿಬಿ ತಂಡಕ್ಕೆ ಲಕ್ ತಂದುಕೊಡುವುದು ಗ್ಯಾರಂಟಿ, ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಪಕ್ಕಾ ಕಪ್ ಗೆಲ್ಲುತ್ತೆ ಅಂತಾ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಆರ್‌ಸಿಬಿ ತಂಡದ ವಿರೋಧಿಗಳು ಮಾತ್ರ ಕಪ್ ಗೆಲ್ಲೋದಿಲ್ಲ ಅಂತಾ ಭವಿಷ್ಯ ನುಡಿಯುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಇಂದು ಆರ್‌ಸಿಬಿ & ಸಿಎಸ್‌ಕೆ ಟೀಂ ಗೆಲುವಿಗಾಗಿ ಸೆಣೆಸಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+