ಐಸಿಸಿ ವಿಶ್ವಕಪ್: ರೋಹಿತ್ ಶರ್ಮಾ ಪತ್ನಿ ಮುಖ ನೋಡುತ್ತಿದ್ದಂತೆ ಸಿಕ್ಸ್ ಬಾರಿಸಿದ್ದು ಹೇಗೆ?

ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 2023ರ ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಆಡುತ್ತಿದೆ. ಈಗಾಗಲೇ ರೋಹಿತ್ ಶರ್ಮಾ ಪಡೆ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಕೂಡ ಆಯ್ಕೆ ಮಾಡಿಕೊಂಡಿದೆ. ಹೀಗೆ ಬ್ಯಾಟಿಂಗ್ ಆರಂಭಿಸಿದ ರೋಹಿತ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ನ್ಯೂಜಿಲೆಂಡ್ ತಂಡದ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಓಡಾಡಿಸುತ್ತಿದೆ. ಆದ್ರೆ ಈ ವೇಳೆ ರೋಹಿತ್ ಶರ್ಮಾ ಅವ್ರು ಬಾರಿಸಿದ ಒಂದು ಸಿಕ್ಸ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.

ಪಂದ್ಯ ಶುರುವಾಗಿ 6 ಓವರ್‌ನ 3 ನೇ ಬಾಲ್ ಆಡುವ ಮುನ್ನ ರೋಹಿತ್ ಶರ್ಮಾ ಒಂದು ಬೌಂಡರಿ ಬಾರಿಸಿದ್ದರು. ಹೀಗೆ ಮುಂದಿನ ಬಾಲ್, ಬೌಲ್ ಮಾಡುವ ಮೊದಲು ರೋಹಿತ್ ಶರ್ಮಾ ಅವರ ಪತ್ನಿ ಮುಖವನ್ನು ಬಿಗ್ ಸ್ಕ್ರೀನ್ ಮೂಲಕ ತೋರಿಸಿದ್ರು ಕ್ಯಾಮೆರಾಮನ್.

Rohit Sharma Wife Attended Semi Final Match Of India Against The New Zealand

ಹೀಗೆ ರಿತಿಕಾ ಸಜ್ದೇ ಅವರ ಮುಖ ಬಿಗ್ ಸ್ಕ್ರೀನ್‌ನಲ್ಲಿ ಬರ್ತಾ ಇದ್ದಂತೆ, ಅಭಿಮಾನಿ ಬಳಗ ಕೂಡ ರೋಹಿತ್ ಶರ್ಮಾ ಅವರನ್ನ ಹುರಿದುಂಬಿಸಲು ಆರಂಭಿಸಿತು. ಆಗ ಕಾಕತಾಳಿಯ ಎನ್ನುವಂತೆ ರೋಹಿತ್ ಶರ್ಮಾ, ಬಾಲ್ ಪುಲ್ ಮಾಡಿ ವಿಕೆಟ್ ಕೀಪರ್ ಪಕ್ಕದಲ್ಲೇ ಮೇಲೆ ಹಾರಿ ಹೋಗುವಂತೆ ಬಾಲ್‌ಗೆ ಬಾರಿಸಿದರು. ಅಸಾಹಯಕ ಸ್ಥಿತಿಯಲ್ಲಿ ನ್ಯೂಜಿಲೆಂಡ್ ಟೀಂ ಆಟಗಾರರು ಚೆಂಡನ್ನ ನೋಡುತ್ತಾ ನಿಂತಿರುವಾಗಲೇ, ಬೌಂಡರಿ ಗೆರೆ ದಾಟಿ 6 ರನ್‌ಗಳನ್ನ ಕೊಡುಗೆಯಾಗಿ ನೀಡಿತು ಈ ಹೊಡೆತ.

ರೋಹಿತ್ ಶರ್ಮಾಗೆ ಪತ್ನಿ ಬಲ!

ಈ ಹಿಂದೆ ಕೂಡ ರೋಹಿತ್ ಶರ್ಮಾ ಹಾಗೂ ಅವರ ಪತ್ನಿ ರಿತಿಕಾ ಸಜ್ದೇ ಸಾಕಷ್ಟು ಬಾರಿ ಸದ್ದು ಮಾಡಿದ್ರು. ಇಬ್ಬರ ನಡುವಿನ ಬಾಂಡಿಂಗ್ ಉತ್ತಮವಾಗಿದ್ದು ತನ್ನ ಗಂಡನ ಹಲವು ಪಂದ್ಯಗಳಲ್ಲಿ ಇದೇ ರೀತಿ ರಿತಿಕಾ ಸಜ್ದೇ ಅವರು ಬಂದು ಕೂತು ಹುರಿದುಂಬಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ ಸೆಮಿಫೈನಲ್ ಸಮರ ಎದುರಿಸುತ್ತಿದ್ದು ಭಾರತ ಕ್ರಿಕೆಟ್ ಟೀಂನ ಬಹುತೇಕ ಆಟಗಾರರ ಕುಟುಂಬ ಸದಸ್ಯರು ಪಂದ್ಯ ವೀಕ್ಷಣೆಗೆ ಬಂದಿದ್ದಾರೆ. ಇನ್ನು ಭಾರತ ತಂಡದ ಶಕ್ತಿ ಮತ್ತು ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರ ಪತ್ನಿ ಕೂಡ ಮ್ಯಾಚ್ ನೋಡಲು ಬಂದಿದ್ದಾರೆ.

Rohit Sharma Wife Attended Semi Final Match Of India Against The New Zealand

ಭಾರತದ ಅಬ್ಬರಕ್ಕೆ ಕಿವೀಸ್ ತತ್ತರ

ಟಾಸ್ ಗೆದ್ದು ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸೆಣೆಸಾಟದಲ್ಲಿ ಭಾರತ ತಂಡ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಈ ಕಾರಣಕ್ಕೆ ನ್ಯೂಜಿಲೆಂಡ್ ತಂಡ, ಆರಂಭದಲ್ಲಿ ರನ್ ಕಂಟ್ರೋಲ್ ಮಾಡಲು ಪರದಾಡುತ್ತಿದೆ. ಆದರೆ ಭಾರತ ಕ್ರಿಕೆಟ್ ತಂಡದ ದಾಂಡಿಗರ ಪಡೆ ನ್ಯೂಜಿಲೆಂಡ್ ಟೀಂನ ಬೌಲರ್‌ಗಳ ಬಾಲ್‌ಗಳನ್ನ ಹಿಗ್ಗಾಮುಗ್ಗಾ ಬಾರಿಸುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ ಭಾರತ ತಂಡ 1 ವಿಕೆಟ್ ನಷ್ಟಕ್ಕೆ ಒಟ್ಟು 128 ರನ್ ಗಳಿಸಿದೆ. ಹಾಗೂ 17 ಓವರ್‌ಗಳ ಆಟ ಮುಗಿಸಿದೆ. ಈ ಮೂಲಕ ಕಿವೀಸ್ ಪಡೆಗೆ, ಬೃಹತ್ ಮೊತ್ತದ ಸವಾಲನ್ನು ನೀಡಲು ಭಾರತದ ಬ್ಯಾಟ್ಸ್‌ಮನ್‌ಗಳು ಸಜ್ಜಾಗಿದ್ದಾರೆ.

ಒಟ್ನಲ್ಲಿ ಭಾರತ & ನ್ಯೂಜಿಲೆಂಡ್ ಫೈಟಿಂಗ್ ಒಂದು ಹಂತಕ್ಕೆ ಬಂದು ನಿಂತಿದೆ ಈ ಪಂದ್ಯ ಭಾರತದ ಫೈನಲ್ಸ್ ಭವಿಷ್ಯ ಡಿಸೈಡ್ ಮಾಡಲಿದೆ. ಹೀಗೆ ಭಾರತದ ಪ್ರತಿಯೊಬ್ಬ ಆಟಗಾರ ಕೂಡ ಫುಲ್ ಅಲರ್ಟ್ ಆಗಿ ಆಟ ಆಡಬೇಕಾಗಿದ್ದು ನ್ಯೂಜಿಲೆಂಡ್ ತಂಡಕ್ಕೆ ಮುಂಬೈನಲ್ಲಿ ಸಂಜೆ ವೇಳೆ ಭಾರತದ ಬೌಲಿಂಗ್ ದಾಳಿ ಎದುರಿಸುವುದು ಕಷ್ಟವಾಗುವ ನಿರೀಕ್ಷೆಯೂ ಇದೆ.

ಹೀಗಾಗಿ ಭಾರತ ತಂಡ 300ಕ್ಕೂ ಹೆಚ್ಚು ರನ್‌ಗಳ ಟಾರ್ಗೆಟ್ ಕೊಟ್ಟರೆ, ಗೆಲುವು ಗ್ಯಾರಂಟಿ ಅಂತಿದ್ದಾರೆ ತಜ್ಞರು. ಈಗಾಗಲೆ 2023ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಬೌಲಿಂಗ್ ಪಡೆ ಶಕ್ತಿ ಇಡೀ ಕ್ರಿಕೆಟ್ ಜಗತ್ತಿಗೆ ಅರ್ಥವಾಗಿದೆ. ಲೀಗ್ ಹಂತದಲ್ಲಿ ಕಿವೀಸ್ ಪಡೆ ಅಂದರೆ ಇದೇ ನ್ಯೂಜಿಲೆಂಡ್ ತಂಡ ಕೂಡ ಭಾರತದ ಬೌಲಿಂಗ್ ಕಂಡು ಬೆಚ್ಚಿಬಿದ್ದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+