Team India: ರೋಹಿತ್, ಕೊಹ್ಲಿ, ಜಡೇಜಾಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಟೀಂ ಇಂಡಿಯಾದ ಆಟಗಾರರ ಒಪ್ಪಂದವನ್ನು ನವೀಕರಣ ಮಾಡಲು ಬಿಸಿಸಿಐ ಮುಂದಾಗಿದೆ. 2023ರ ಏಕದಿನ ವಿಶ್ವಕಪ್ ಬಳಿಕ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್‌ ದೇಶೀಯ ಕ್ರಿಕೆಟ್‌ನಲ್ಲಿ ಆಡದ ಕಾರಣ ಇಬ್ಬರು ವಾರ್ಷಿಕ ಒಪ್ಪಂದವನ್ನು ಪಡೆಯಲು ವಿಫಲವಾಗಿದ್ದರು. ಇಬ್ಬರು ದೇಶೀಯು ಕ್ರಿಕೆಟ್‌ನಲ್ಲಿ ಆಡದ ಕಾರಣ ವಲಯಗಳ ಅಧ್ಯಕ್ಷ ಅಜಿತ್ ಅಗರ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ದರಿಂದ ಇಬ್ಬರ ಕೇಂದ್ರ ಒಪ್ಪಂದವನ್ನು ಬಿಸಿಸಿಐ ಮುಲಾಜಿಲ್ಲದೆ ರದ್ದು ಮಾಡಿತ್ತು.

ಶ್ರೇಯಸ್ ಅಯ್ಯರ್ ಈ ಬಾರಿ ಬಿಸಿಸಿಐ ವಾರ್ಷಿಕ ಒಪ್ಪಂದವನ್ನು ಮತ್ತೆ ಪಡೆಯುವುದು ಖಚಿತವಾಗಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಹಲವು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನಿಡಿದ್ದ ಅವರು, ಭಾರತ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಇಶಾನ್ ಕಿಶನ್ ಮತ್ತೊಮ್ಮೆ ಬಿಸಿಸಿಐ ಒಪ್ಪಂದ ಪಡೆಯುವುದು ಅನುಮಾನವಾಗಿದೆ.

rohit sharma virat kohli jadeja bcci central contracts

ದೈನಿಕ್ ಜಾಗರಣ್ ವರದಿ ಮಾಡಿರುವ ಪ್ರಕಾರ, ಆಯ್ಕೆದಾರರು ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಸಾಕಷ್ಟು ಬದಲಾವಣೆ ಮಾಡಬಹುದು ಎಂದು ಹೇಳಿದೆ. ಐಪಿಎಲ್ ಬಳಿಕ ಜೂನ್‌ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯತ್ಕೆ ಆಯ್ಕೆ ಮಾಡಲು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾರ್ಚ್ 29 ರಂದು ಗುವಾಹಟಿಯಲ್ಲಿ ಸಭೆ ಸೇರಲಿದ್ದಾರೆ. ಸಭೆಯಲ್ಲಿ ಪುರುಷ ತಂಡದ ಕೇಂದ್ರ ಒಪ್ಪಂದಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.

ಕಳೆದ ವಾರ ನಡೆದ ಸಭೆಯ ನಂತರ ಮಹಿಳಾ ತಂಡದ ಒಪ್ಪಂದಗಳನ್ನು ಘೋಷಣೆ ಮಾಡಲಾಗಿದೆ. ಭಾರತದ ಕೆಲವು ಸ್ಟಾರ್ ಆಟಗಾರರ ಭವಿಷ್ಯದ ಬಗ್ಗೆ ಆಯ್ಕೆ ಸಮಿತಿಯು ಭಿನ್ನಾಭಿಪ್ರಾಯ ಹೊಂದಿದೆ ಎಂದು ವರದಿ ತಿಳಿಸಿದೆ. ಯಾವುದೇ ಬ್ಯಾಟರ್ ಹೆಸರು ಉಲ್ಲೇಖಿಸಿದೇ ಇದ್ದರೂ, ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಹೆಸರು ಮುನ್ನಲೆಗೆ ಬಂದಿದೆ.

ಎ+ ಒಪ್ಪಂದಿಂದ ಎ ಗುಂಪಿಗೆ?

ರೋಹಿತ್, ಕೊಹ್ಲಿ ಮತ್ತು ಜಡೇಜಾ ಪ್ರಸ್ತುತ ವಾರ್ಷಿಕ ಒಪ್ಪಂದದಲ್ಲಿ ಎ+ ಗುಂಪಿನಲ್ಲಿದ್ದಾರೆ. ಟೆಸ್ಟ್, ಏಕದಿನ, ಟಿ20 ಮೂರು ಸ್ವರೂಪದಲ್ಲಿ ಭಾರತಕ್ಕಾಗಿ ಆಡುವ ಆಟಗಾರರು ಈ ಗುಂಪಿನಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದು ಅವರನ್ನು ಎ ಗುಂಪಿಗೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ.

ರೋಹಿತ್ ನಾಯಕತ್ವದ ಬಗ್ಗೆ ಚರ್ಚೆ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರೂ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ನಾಯಕರನ್ನಾಗಿ ಮುಂದುವರೆಸುವ ಬಗ್ಗೆ ಆಯ್ಕೆದಾರರಲ್ಲಿ ಒಮ್ಮತ ಮೂಡಿಲ್ಲ ಎಂದು ಸಂಸ್ಥೆ ಪಿಟಿಐ ವರದಿ ಮಾಡಿದೆ. ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಸಮಸ್ಯೆಯಾಗಿದೆ ಮತ್ತು ಮುಂದಿನ ಸಾಲಿನ ಯುವ ಭಾರತೀಯ ಆಟಗಾರರಲ್ಲಿ ನಾಯಕತ್ವದ ನಿರೀಕ್ಷೆಯ ಕೊರತೆಯೂ ಒಂದು ಸಮಸ್ಯೆಯಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಭಾರತ ತಂಡದ ಮೇಲೆ ಹೆಚ್ಚಿನ ಒತ್ತಡವಿತ್ತು, ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್, ಕೊಹ್ಲಿ ಪ್ರದರ್ಶನದ ಬಗ್ಗೆ ಇನ್ನೂ ಆಯ್ಕೆದಾರರು ಅಸಮಾಧಾನ ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಮಾತ್ರ ಎ+ ಕೇಂದ್ರ ಒಪ್ಪಂದ ಪಡೆಯುವುದು ಖಚಿತವಾಗಿದೆ. ಉಪನಾಯಕ ಶುಭಮನ್ ಸದ್ಯ ಎ ಗುಂಪಿನಲ್ಲಿದ್ದು ಎ+ ಹಂತಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್ ಬಿ ಗುಂಪಿನಿಂದ ಎ ಗುಂಪಿಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಅಕ್ಷರ್ ಪಟೇಲ್ ಬಿ ಗುಂಪಿನಿಂದ ಎ ಗುಂಪಿಗೆ ಬಡ್ತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+