Rohit Sharma: ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡುವುದು ಗ್ಯಾರಂಟಿ?
ಭಾರತ ಕ್ರಿಕೆಟ್ ತಂಡ ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತವಾಗಿದ್ದು, ಜೊತೆಗೆ ಅತ್ಯಂತ ಶಕ್ತಿಶಾಲಿ ಆಟಗಾರರನ್ನು ಕೂಡ ಹೊಂದಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಬ್ ಪಂತ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಘಟಾನುಘಟಿ ಆಟಗಾರರ ಪಡೆಯನ್ನೇ ಹೊಂದಿದೆ ಭಾರತ ಕ್ರಿಕೆಟ್ ತಂಡ. ಇಷ್ಟೆಲ್ಲಾ ಇದ್ದರೂ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ!
ಹೌದು, ಭಾರತದ ಬ್ಯಾಟಿಂಗ್ ಲೈನ್ ನೋಡಿದರೆ ಗಲ್ಲಿ ಕ್ರಿಕೆಟ್ ಆಡೋದಕ್ಕೆ ಲಾಯಕ್ ಎಂಬ ಆರೋಪ ಮಾಡುತ್ತಿದ್ದಾರೆ ಅಭಿಮಾನಿಗಳು. ನಿತೀಶ್ ರೆಡ್ಡಿ & ಯಶಸ್ವಿ ಜೈಸ್ವಾಲ್ ಜೊತೆಯಲ್ಲಿ ವಾಷಿಂಗ್ಟನ್ ಸುಂದರ್ ಬಿಟ್ಟು ಬೇರೆ ಯಾವುದೇ ಆಟಗಾರ ಕೂಡ ಅಬ್ಬರಿಸಲಿಲ್ಲ. ಹೀಗಾಗಿ ಭಾರಿ ಆಕ್ರೋಶ ಮೊಳಗಿದ್ದು, ಭಾರತದ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದೆಲ್ಲಾ ಬಿಸಿಸಿಐ ಗಮನಕ್ಕೂ ಬಂದಿರುವ ಸಮಯದಲ್ಲಿ, ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಬಿಟ್ಟು ಹೋಗುತ್ತಾರಾ? ಯಾಕೆ ಈ ಚರ್ಚೆ ಶುರುವಾಗಿದೆ? ಮುಂದೆ ಓದಿ.

ರೋಹಿತ್ ಶರ್ಮಾ ದಿಢೀರ್ ನಿವೃತ್ತಿ?
ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಪದೇ ಪದೇ ತಮ್ಮ ಬ್ಯಾಟಿಂಗ್‌ನಲ್ಲಿ ಸೋತು ಸುಣ್ಣವಾಗುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಸರಿಯಾಗಿ ಬ್ಯಾಟ್ ಬೀಸುತ್ತಿಲ್ಲ ಎಂಬ ಕೊಹ್ಲಿ ವಿರೋಧಿಗಳ ಆರೋಪದ ನಡುವೆ ಈಗ, ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಚರ್ಚೆ ಜೋರಾಗಿದ್ದು, ಭಾರತ ತಂಡವನ್ನು ಈ ರೀತಿಯಾಗಿ ಸೋಲಿಸುವ ಬದಲು ರೋಹಿತ್ ಮೊದಲು ನಿವೃತ್ತಿ ಪಡೆಯಲಿ ಅಂತಾ ಜನ ಆಗ್ರಹಿಸುತ್ತಿದ್ದಾರೆ.
ಭಾರತಕ್ಕೆ ಉಳಿದಿರುವುದು ಒಂದೇ ದಾರಿ!
ಈವರೆಗೂ ಆಸ್ಟ್ರೇಲಿಯಾ ತಂಡ ಒಟ್ಟಾರೆ 333 ರನ್ ಲೀಡ್ ಪಡೆದಿದ್ದು, ಇನ್ನೂ 1 ವಿಕೆಟ್ ಆಸಿಸ್ ಕೈಯಲ್ಲಿ ಇರುವ ಕಾರಣಕ್ಕೆ 350 ರನ್ ಗಡಿ ದಾಟುವ ನಿರೀಕ್ಷೆ ಇದೆ. ಮತ್ತೊಂದ್ಕಡೆ, ಭಾರತ ತಂಡ ಕೂಡ ಆದಷ್ಟು ಬೇಗ ಆಸಿಸ್ ಪಡೆಯನ್ನ ಆಲೌಟ್ ಮಾಡಲು ಪರದಾಡ್ತಿದೆ. ಇಷ್ಟೆಲ್ಲದರ ನಡುವೆ ಜಿದ್ದಾಜಿದ್ದಿನ 4ನೇ ಟೆಸ್ಟ್ ಪಂದ್ಯದ 5ನೇ ದಿನದಾಟ ನಾಳೆ ನಡೆಯಲಿದೆ.
ಕೊನೆಯ ದಿನದ ಆಟದಲ್ಲಿ ಭಾರತ ತಂಡ ಅದ್ಧೂರಿಯಾಗಿ ಬ್ಯಾಟಿಂಗ್ ಮಾಡಬೇಕು. ಹೀಗೆ ಬ್ಯಾಟ್ ಬೀಸಿದರೆ ಮಾತ್ರ ಭಾರತಕ್ಕೆ ಗೆಲ್ಲುವ ಅವಕಾಶ ಇರಲಿದೆ. ಇಲ್ಲವಾದರೆ ಈ ಮ್ಯಾಚ್ ಕೂಡ ಡ್ರಾನಲ್ಲಿ ಅಂತ್ಯವಾಗುವ ಭಯ ಕಾಡುತ್ತಿದೆ. ಈಗಾಗಲೇ ಎಲ್ಲಾ ರೀತಿಯ ಲೆಕ್ಕಾಚಾರ ಹಾಕಲಾಗಿದ್ದು, ನಾಳೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಅಬ್ಬರಿಸಬೇಕಿದೆ. ಇಲ್ಲ ಅಂದ್ರೆ ಮತ್ತೆ ಸಂಕಷ್ಟ ಗ್ಯಾರಂಟಿ!












Click it and Unblock the Notifications