Get Updates
Get notified of breaking news, exclusive insights, and must-see stories!

Rohit Sharma: ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ತಂಡದಿಂದ ಅವಮಾನ?

ರೋಹಿತ್ ಶರ್ಮಾ ಭಾರತ ತಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಕ್ರಿಕೆಟಿಗ. ಟಿ20 ವಿಶ್ವಕಪ್ ಗೆದ್ದ ಬಳಿಕ ಅವರ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಕೂಡ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಐದು ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಆದರೆ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಅಯೋಮಯವಾಗಿತ್ತು.

ನಾಯಕ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ಗುಜರಾತ್ ತಂಡದಿಂದ ಟ್ರೇಡ್ ಆಗಿದ್ದ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಇದು ಸ್ವತಃ ಮುಂಬೈ ಇಂಡಿಯನ್ಸ್ ಅಭಿಮಾನಿಗಳನ್ನು ಕೆರಳಿಸಿತ್ತು, ಹಾರ್ದಿಕ್ ನಾಯಕತ್ವದಲ್ಲಿ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 10ನೇ ಸ್ಥಾನದಲ್ಲಿ ಪಂದ್ಯಾವಳಿಯನ್ನು ಮುಗಿಸಿತ್ತು.

rohit sharma experience not needed suryakumar yadav csk vs mi ipl 2025

2025ರ ಐಪಿಎಲ್‌ಗೆ ಮುನ್ನ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ನಿಧಾನಗತಿಯ ಓವರ್ ರೇಟ್‌ಗಾಗಿ ಹಾರ್ದಿಕ್ ಪಾಂಡ್ಯಗೆ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದ್ದು, ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದಾರೆ. ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಸೊನ್ನೆಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ರೋಹಿತ್ ಶರ್ಮಾಗೆ ಅವಮಾನ?

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಸೊನ್ನೆಗೆ ಔಟಾದ ಬಳಿಕ ಫೀಲ್ಡಿಂಗ್ ವೇಳೆ ನಾಯಕ ಸೂರ್ಯಕುಮಾರ್ ಯಾದವ್‌ ಅವರನ್ನು ಹೊರಗೆ ಕೂರಿಸಿದರು. ಅವರ ಬದಲು ಇಂಪ್ಯಾಕ್ಟ್ ಆಟಗಾರನಾಗಿ ವಿಘ್ನೇಶ್ ಪುತ್ತೂರ್ ಬಂದರು. ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 155 ರನ್ ಕಲೆಹಾಕಿತು. ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡುವಾಗ ಮೈದಾನದಲ್ಲಿ ರೋಹಿತ್ ಶರ್ಮಾ ಅವರಂತಹ ಅನುಭವಿ ಇರುವುದು ಮುಖ್ಯವಾಗುತ್ತದೆ, ಆದರೆ ನಾಯಕ ಸೂರ್ಯ ರೋಹಿತ್‌ರನ್ನೇ ಹೊರಗೆ ಕೂರಿಸಿದ್ದು ಅಚ್ಚರಿಗೆ ಕಾರಣವಾಗಿದೆ.

ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಸೇರಿದಂತೆ ಮುಂಬೈ ತಂಡವನ್ನು 6 ಪ್ರಶಸ್ತಿಗಳನ್ನು ಗೆಲ್ಲಿಸಿದ್ದ ರೋಹಿತ್ ಶರ್ಮಾ, ಹಲವು ಪಂದ್ಯಗಳಲ್ಲಿ 1 ರನ್‌ನಿಂದ ಕೂಡ ಗೆದ್ದಿದ್ದಾರೆ. ಅಂತಹ ಅನುಭವಿಯನ್ನೇ ಹೊರಗೆ ಕೂರಿಸಿದ್ದು ಅಭಿಮಾನಿಗಳಿಗೆ ಸರಿ ಕಾಣುತ್ತಿಲ್ಲ.

ಫಿಟ್ನೆಸ್ ಸಮಸ್ಯೆಯಿಂದ ಹೊರಗುಳಿದ್ರಾ?

ಫಿಟ್ನೆಸ್ ಕಾರಣದಿಂದ ರೋಹಿತ್ ಶರ್ಮಾರನ್ನು ಹೊರಗಡೆ ಇಡಲಾಯಿತಾ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿದ್ದಾರೆ. ನಾಯಕತ್ವ ನಿಭಾಯಿಸಿದ್ದಾರೆ. ಅವರ ಅನುಭವವನ್ನು ಸೂರ್ಯಕುಮಾರ್ ಯಾದವ್ ಬಳಸಿಕೊಳ್ಳಬಹುದಿತ್ತಾದರೂ ಹೊರಗಿಟ್ಟರು.

ರಯಾನ್ ರಿಕಲ್ಟನ್ ಮತ್ತು ರಾಬಿನ್ ಮಿಂಜ್ ಇಬ್ಬರು ವಿಕೆಟ್ ಕೀಪರ್ ಆಡಿದ್ದರು. ಇಬ್ಬರಲ್ಲಿ ಒಬ್ಬರನ್ನು ಹೊರಗಿಡುವ ಅವಕಾಶವಿದ್ದರೂ ರೋಹಿತ್‌ರನ್ನು ಹೊರಗಿಟ್ಟಿದ್ದಾರೆ. ಇದೊಂದು ವಿಚಿತ್ರ ನಿರ್ಧಾರ, ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ವಾಪಸ್ ಬರಲಿದ್ದು ತಂಡದಲ್ಲಿ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾರ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+