T20 World Cup: ರೋಹಿತ್ ಶರ್ಮಾ ಮತ್ತು ಪಾಟ್ ಕಮ್ಮಿನ್ಸ್ ಇಬ್ಬರಿಗೆ ಸಿಕ್ಕ ಸ್ವಾಗತದ ನಡುವೆ ಎಷ್ಟು ವ್ಯತ್ಯಾಸ ನೋಡಿ
17 ವರ್ಷಗಳ ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ ಎರಡು ದಿನ ತಡವಾಗಿ ಭಾರತಕ್ಕೆ ಆಗಮಿಸಿದೆ. 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಸಹಜವಾಗಿಯೇ ಅದ್ಧೂರಿ ಸ್ವಾಗತ ಸಿಕ್ಕಿದೆ.
ಭಾರತೀಯರಿಗೆ ಕ್ರಿಕೆಟ್ ಅಂದರೆ ಹಾಗೆ, ಅದೊಂದು ಬರೀ ಆಟವಲ್ಲ ಅದೊಂದು ಧರ್ಮ ಎನ್ನುವ ಭಾವ. ಕ್ರಿಕೆಟಿಗರನ್ನು ಕೂಡ ದೇವರಂತೆ ಕಾಣುತ್ತಾರೆ, ಸಿನಿಮಾ ತಾರೆಯರಿಗಿಂತ ಭಾರತೀಯ ಕ್ರಿಕೆಟಿಗರಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಆಟಗಾರರು ದೆಹಲಿಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ಸಾವಿರಾರು ಅಭಿಮಾನಿಗಳಿಂದ ಹರ್ಷೋದ್ಘಾರದ ಸ್ವಾಗತ ಸಿಕ್ಕಿದೆ.
ರೋಹಿತ್ ಶರ್ಮಾಗೆ ಅದ್ದೂರಿ ಸ್ವಾಗತ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಹೃತ್ಪೂರ್ವಕ ಸ್ವಾಗತ ದೊರೆಯಿತು.ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಭಾರತ ತಂಡದ ಆಟಗಾರರ ಬಸ್‌ಗೆ ಸಾವಿರಾರು ಜನ ಕೈಬೀಸಿದರು. ಭಾರತ ತಂಡದ ಗೆಲುವು ತಮ್ಮದೇ ಗೆಲುವು ಎನ್ನುವಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಪಾಟ್ ಕಮಿನ್ಸ್‌ಗೆ ಸಿಕ್ಕ ಸ್ವಾಗತ ಹೇಗಿತ್ತು?
2023ರ ನವೆಂಬರ್ ನಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಅಜೇಯ ಭಾರತ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಶತಕೋಟಿ ಭಾರತೀಯರ ಆಸೆಯನ್ನು ನುಚ್ಚುನೂರು ಮಾಡಿತ್ತು. ಪ್ರತಿಷ್ಠಿತ ಏಕದಿನ ವಿಶ್ವಕಪ್ ಗೆದ್ದು ತವರಿಗೆ ಮರಳಿದ್ದ ನಾಯಕ ಪಾಟ್ ಕಮ್ಮಿನ್ಸ್ ಅವರಿಗೆ ವಿಮಾನ ನಿಲ್ದಾಣದಲ್ಲಿ ನೀರಸ ಸ್ವಾಗತ ಸಿಕ್ಕಿತ್ತು.
Hey Pat cummins, You might be mighty Australians but you can't match the aura of Rohit Sharma 🔥
— Ctrl C Ctrl Memes (@Ctrlmemes_) July 4, 2024
Welcome home team India ❤️#IndianCricketTeam pic.twitter.com/jHqbku42Wc
ಸಾಮಾನ್ಯ ಪ್ರಯಾಣಿಕರು ಎನ್ನುವಂತೆ ಅಲ್ಲಿನ ಜನ ನೋಡಿದ್ದರು. ಇದನ್ನು ಕಂಡು ಭಾರತ ತಂಡದ ಅಭಿಮಾನಿಗಳು ವಿಶ್ವಕಪ್ ಗೆದ್ದ ನಾಯಕನಿಗೆ ಬೆಲೆ ಇಲ್ಲವಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಇದೇ ಭಾರತ ಏಕದಿನ ವಿಶ್ವಕಪ್ ಗೆದ್ದಿದ್ದರೆ ಭಾರತದ ಪ್ರತಿ ಊರಿನಲ್ಲೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿರುತ್ತಿದ್ದರು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟದ್ದರು.
ಈಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾ ನಾಯಕ ಪಾಟ್ ಕಮ್ಮಿನ್ಸ್ ಅವರಿಗೆ ಸಿಕ್ಕ ಸ್ವಾಗತವನ್ನು ಹೋಲಿಕೆ ಮಾಡಲಾಗುತ್ತಿದೆ. ಇದೇ ಭಾರತ ಮತ್ತು ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಇರುವ ವ್ಯತ್ಯಾಸ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ಯಾಟ್ ಕಮಿನ್ಸ್ ಟ್ರೋಫಿ ಗೆದ್ದರು, ರೋಹಿತ್ ಶರ್ಮಾ ಭಾರತೀಯ ಹೃದಯಗಳನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಕೂಡ ವಿಮಾನ ನಿಲ್ದಾಣದಲ್ಲಿ ಜನ ಸಮೂಹವನ್ನು ಕಂಡು ಅಚ್ಚರಿಗೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications