ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಅವಿರೋಧ ಆಯ್ಕೆ? ಐಪಿಎಲ್ ಅಧ್ಯಕ್ಷ ಸ್ಥಾನದಿಂದ ಬ್ರಿಜೇಶ್ ಪಟೇಲ್ ಹೊರಕ್ಕೆ?

|
Google Oneindia Kannada News

ಮುಂಬೈ, ಅ. 11: ಕರ್ನಾಟಕದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಬಿಸಿಸಿಐನ ಅಧ್ಯಕ್ಷರಾಗುವುದು ಖಚಿತವಾಗಿದೆ. ಬಿಸಿಸಿಐನ ಐದು ಪದಾಧಿಕಾರಿ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ ಸೋಮವಾರ ಕೊನೆಯ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿದೆ. ಹೀಗಾಗಿ, ಅವರು ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎನ್ನುತ್ತಿವೆ ಮೂಲಗಳು.

ಸೌರವ್ ಗಂಗೂಲಿ ಅವರು ಐಸಿಸಿಗೆ ನೇಮಕವಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನ ಖಾಲಿ ಇದೆ. ಬಿಸಿಸಿಐನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಜಿ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ಮುಂಬೈನಲ್ಲಿ ಅಕ್ಟೋಬರ್ 18ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಆಗಲಿದೆ.

ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ? ರೇಸ್‌ನಲ್ಲಿ ಕನ್ನಡಿಗ ರೋಜರ್ ಬಿನ್ನಿಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ? ರೇಸ್‌ನಲ್ಲಿ ಕನ್ನಡಿಗ ರೋಜರ್ ಬಿನ್ನಿ

ಇನ್ನು, ಐಪಿಎಲ್ ಛೇರ್ಮನ್ ಸ್ಥಾನದಿಂದ ಕರ್ನಾಟಕದ ಬ್ರಿಜೇಶ್ ಪಟೇಲ್ ಕೆಳಗಿಳಿಯಲಿದ್ದಾರೆ. ಅವರ ಸ್ಥಾಕ್ಕೆ ಅರುಣ್ ಧುಮಲ್ ನೇಮಕವಾಗುವ ಸಾಧ್ಯತೆ ಇದೆ. ಬಿಸಿಸಿಐನ ನಿಯಮಾವಳಿಯಲ್ಲಿ ಪದಾಧಿಕಾರಿ ಅಥವಾ ಆಡಳಿತಗಾರರ ವಯೋಮಿತಿ 70ಕ್ಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬ್ರಿಜೇಶ್ ಪಟೇಲ್ ಅವರು ಐಪಿಎಲ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಗಿದೆ. ನವೆಂಬರ್ 24ಕ್ಕೆ ಅವರ ವಯಸ್ಸು 70 ಮುಟ್ಟುತ್ತದೆ.

Roger Binny Set To Elect Unopposed As BCCI President, Arun Dhumal May Replace Brijesh Patel as IPL Chairman

ಬಿಸಿಸಿಐನ ಅತ್ಯಂತ ಪ್ರಭಾವಿ ಸ್ಥಾನ ಎಂದು ಪರಿಗಣಿಸಲಾದ ಕಾರ್ಯದರ್ಶಿ ಸ್ಥಾನದಲ್ಲಿ ಜಯ್ ಶಾ ಅವರೇ ಮುಂದುವರಿಯಲಿದ್ದಾರೆ. ರಾಜೀವ್ ಶುಕ್ಲ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಹೇಳಲಾಗುತ್ತದೆ.

ಬಿಸಿಸಿಐ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ದೇವಜಿತ್ ಸೈಕಿಯಾ ಮತ್ತು ಖಜಾಂಚಿ ಸ್ಥಾನಕ್ಕೆ ಆಶಿಶ್ ಶೇಲರ್ ನೇಮಕವಾಗಬಹುದು. ಆಶಿಶ್ ಶೇಲರ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾದರೆ, ದೇವಜಿತ್ ಸೈಕಿಯಾ ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಹಾಲಿ ಕಾರ್ಯದರ್ಶಿಯಾಗಿದ್ದಾರೆ. ಬಿಸಿಸಿಐನ ಆಡಳಿತ ವ್ಯವಸ್ಥೆಗೆ ರೋಜರ್ ಬಿನ್ನಿ, ಆಶಿಶ್ ಶೇಲರ್ ಮತ್ತು ದೇವಜಿತ್ ಸೈಕಿಯಾ ಹೊಸಮುಖಗಳೆನಿಸಿದ್ದಾರೆ.

ಗಂಗೂಲಿ ಸ್ಥಾನಕ್ಕೆ ಬಿನ್ನಿ, ಬಿಸಿಸಿಐಗೆ ಹೊಸ ಬಾಸ್?ಗಂಗೂಲಿ ಸ್ಥಾನಕ್ಕೆ ಬಿನ್ನಿ, ಬಿಸಿಸಿಐಗೆ ಹೊಸ ಬಾಸ್?

ಠಾಕೂರ್ ಸಹೋದರ ಅರುಣ್ ಧುಮಲ್

ಐಪಿಎಲ್ ಅಧ್ಯಕ್ಷರಾಗಲಿರುವ ಅರುಣ್ ಧುಮಲ್ ಅವರು ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ. ಠಾಕೂರ್ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವರೂ ಹೌದು. ಸೌರವ್ ಗಂಗೂಲಿ ಅವಧಿಯಲ್ಲಿ ಬಿಸಿಸಿಐ ಆಡಳಿತ ಸ್ಥಾನಕ್ಕೆ ಧುಮಲ್ ನಿಯುಕ್ತಿಗೊಂಡಿದ್ದರು.

Roger Binny Set To Elect Unopposed As BCCI President, Arun Dhumal May Replace Brijesh Patel as IPL Chairman

ಅನುಭವಸ್ಥ ರೋಜರ್ ಬಿನ್ನಿ

ರೋಜರ್ ಬಿನ್ನಿ ಬಿಸಿಸಿಐ ಪದಾಧಿಕಾರಿ ಸ್ಥಾನಕ್ಕೆ ಹೊಸಬರಾದರೂ ಕ್ರಿಕೆಟ್ ಆಡಳಿತಕ್ಕೆ ಹಳಬರು. ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ (ಕೆಎಸ್‌ಸಿಎ) ಹಲವು ವರ್ಷಗಳ ಕಾಲ ಅವರು ವಿವಿಧ ಸ್ತರಗಳ ಆಡಳಿತದಲ್ಲಿ ಕಾರ್ಯನಿರ್ವಹಿಸಿದ್ದಾರೆ. 2019ರಿಂದಲೂ ಅವರು ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ಮಾಜಿ ವೇಗದ ಬೌಲರ್ ರೋಜರ್ ಬಿನ್ನಿಗೆ ಈಗ ವಯಸ್ಸು 67 ವರ್ಷ. ಇನ್ನು 3 ವರ್ಷದವರೆಗೆ ಮಾತ್ರ ಅವರು ಬಿಸಿಸಿಐ ಅಧ್ಯಕ್ಷರಾಗಬಹುದು. ಮೂಲಗಳ ಪ್ರಕಾರ, ಅಧ್ಯಕ್ಷ ಸ್ಥಾನದಿಂದ ಹಿಡಿದು ವಿವಿಧ ಪದಾಧಿಕಾರಿಗಳಿಗೆ ಈಗಾಗಲೇ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಅಕ್ಟೋಬರ್ 18ರಂದು ನೇಮಕಾತಿ ಘೋಷಣೆ ಮಾಡುವ ಸಾಧ್ಯತೆ ಇದೆ.

(ಒನ್ಇಂಡಿಯಾ ಸುದ್ದಿ)

English summary
Former India cricketer from Karnataka Roger Binny is set to become new BCCI president as he may get elected unopposed with only his nomination left for president post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X