ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ? ರೇಸ್‌ನಲ್ಲಿ ಕನ್ನಡಿಗ ರೋಜರ್ ಬಿನ್ನಿ

|
Google Oneindia Kannada News

ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬದಲಿಗೆ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ರೋಜರ್ ಬಿನ್ನಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ರೋಜರ್ ಬಿನ್ನಿ 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಬಿನ್ನಿ ಪ್ರಸ್ತುತ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಶೀಘ್ರದಲ್ಲೇ ಈ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಗಂಗೂಲಿ ಅಧ್ಯಕ್ಷರಾಗಿ ತಮ್ಮ ಇನ್ನಿಂಗ್ಸ್‌ನ್ನು ವಿಸ್ತರಿಸಲು ಬಯಸುವುದಿಲ್ಲ ಮತ್ತು ಅಕ್ಟೋಬರ್ 18ರಂದು ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ವರಿದಿಯಾಗಿದೆ. ದಾದಾ ಎಂದೇ ಖ್ಯಾತರಾಗಿರುವ ಗಂಗೂಲಿ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೇರಲಿದ್ದಾರೆ. ಅವರು ಐಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಂಗೂಲಿ ನಂತರ 1983ರ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಭಾಗವಾಗಿದ್ದ ಅನುಭವಿ ವೇಗದ ಬೌಲರ್ ರೋಜರ್ ಬಿನ್ನಿ ಮುಂದಿನ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಬಹುದು.

Roger Binny Likely To Replace Sourav Ganguly As BCCI President: Report

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೇಸ್‌ನಲ್ಲಿ ರೋಜರ್ ಬಿನ್ನಿ
ಪ್ರಸ್ತುತ ಬಿನ್ನಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾರೆ ಮತ್ತು ಅವರ ಮಗ ಸ್ಟುವರ್ಟ್ ಬಿನ್ನಿ ಕೂಡ ಭಾರತ ತಂಡಕ್ಕಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಗಂಗೂಲಿ 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದರು. ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಪಾಲ್ಗೊಳ್ಳುವ 38 ರಾಜ್ಯಗಳ ಪೈಕಿ 35 ಸಂಘಗಳ ಪಟ್ಟಿ ಹೊರಬಿದ್ದಿದೆ. ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪರವಾಗಿ ಬಿನ್ನಿ ಪ್ರತಿನಿಧಿಯಾಗಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಎಜಿಎಂನಲ್ಲಿ ಕಾರ್ಯದರ್ಶಿ ಸಂತೋಷ್ ಮೆನನ್ ಭಾಗವಹಿಸುತ್ತಿದ್ದರು.

Roger Binny Likely To Replace Sourav Ganguly As BCCI President: Report

ಬಿಸಿಸಿಐ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಈ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳು ಅಕ್ಟೋಬರ್ 11 ಅಥವಾ 12 ರಂದು ನಾಮಪತ್ರ ಸಲ್ಲಿಸಬಹುದು. ಇದಾದ ನಂತರ ಅಕ್ಟೋಬರ್ 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 14ರವರೆಗೆ ನಾಮಪತ್ರ ಹಿಂಪಡೆಯಬಹುದು. ಸರಿಯಾದ ನಾಮನಿರ್ದೇಶನ ಮಾಡಿದವರ ಪಟ್ಟಿಯನ್ನು ಅಕ್ಟೋಬರ್ 15ರಂದು ಬಿಡುಗಡೆ ಮಾಡಲಾಗುತ್ತದೆ. ಹೆಚ್ಚು ಸ್ಪರ್ಧಿಗಳಿದ್ದಲ್ಲಿ ಅಕ್ಟೋಬರ್ 18ರಂದು ಮತದಾನ ನಡೆಯಲಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯ್ ಶಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಬಹುದು. ಅದೇ ಸಮಯದಲ್ಲಿ, ಹಿಮಾಚಲ ಪ್ರದೇಶದ ಅರುಣ್ ಧುಮಾಲ್ ಖಜಾಂಚಿಗೆ ಮಾತ್ರ ಹಕ್ಕು ಮಂಡಿಸುತ್ತಾರೆ. ದೆಹಲಿ ಅಸೋಸಿಯೇಷನ್‌ನ ರೋಹನ್ ಜೇಟ್ಲಿ ಮಂಡಳಿ ಅಥವಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ದೊಡ್ಡ ಪಾತ್ರವನ್ನು ಪಡೆಯಬಹುದು.

English summary
Roger Binny Likely To Replace Sourav Ganguly As BCCI President: Report Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X