ಟಿ20 ಕ್ರಿಕೆಟ್‌ಗೆ ಸ್ಟಾರ್ ಪ್ಲೇಯರ್ ಭರ್ಜರಿ ಕಮ್‌ಬ್ಯಾಕ್
ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದೆ. ಸೋಲುವ ಪಂದ್ಯದಿಂದ ಗೆಲುವಿನ ನಗೆ ಬೀರಿದ ಟೀಮ್ ಇಂಡಿಯಾ, ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಹಲವು ಜನ ಹೀರೋಗಳಿದ್ದಾರೆ. ಆದರೆ ಆ ಒಬ್ಬ ಪ್ಲೇಯರ್‌ನ ಆಟ ನಿಜಕ್ಕೂ ಅಭಿಮಾನಿಗಳಿಗೆ ಮುದ ನೀಡಿದೆ.
ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧ ತನ್ನ ಬಲ ಹಿಡಿತವನ್ನು ಬಿಗಿ ಗೊಳಿಸಿದೆ. ರೋಹಿತ್ ಪಡೆಯ ಸಂಘಟಿತ ಆಟಕ್ಕೆ ಪಾಕ್ ಧರಾಶಾಹಿ ಆಗಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲೂ ಅಮೋಘ ಆಟವಾಡಿದ ಟೀಮ್ ಇಂಡಿಯಾ ಅಬ್ಬರಿಸಿದೆ. ಈ ಮೂಲಕ ರೋಹಿತ್ ಪಡೆ ಸೂಪರ್ 8ಗೆ ಹತ್ತಿರವಾಗಿದೆ.

ಪಾಕ್ ವಿರುದ್ಧ ಟೀಮ್ ಇಂಡಿಯಾ ಅಬ್ಬರ
ಭಾನುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಹಲವು ಆಟಗಾರರು ಅಬ್ಬರಿಸಿದ್ದಾರೆ. ಆದರೆ ಎಲ್ಲರ ಚಿತ್ತ ಕದ್ದ ಪ್ಲೇಯರ್ ಒಬ್ಬನೇ, ಆತನೇ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್. ಡ್ರಾಪ್ ಇನ್ ಪಿಚ್‌ಗಳಲ್ಲಿ ರನ್ ಬಾರಿಸಲು ಹರಸಾಹಸ ಪಡುತ್ತಿದ್ದ ಬ್ಯಾಟರ್‌ಗಳ ನಡುವೆ ರಿಷಭ್ ಮಾತ್ರ ಏಕಾಂಗಿಯಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಪಂತ್, ತಮ್ಮ ನೈಜ ಆಟದಿಂದಲೇ ಗಮನ ಸೆಳೆದರು. ಕೇವಲ 31 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ ಪಂತ್ 42 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಬ್ಯಾಟಿಂಗ್, ಫೀಲ್ಡಿಂಗ್‌ನಲ್ಲಿ ಗಮನ ಸೆಳೆದ ಪ್ಲೇಯರ್
ಬರೀ ಬ್ಯಾಟಿಂಗ್ ಅಷ್ಟೇ ಅಲ್ಲ ವಿಕೆಟ್ ಕೀಪಿಂಗ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು. ಕೀಪಿಂಗ್ ಮಾಡುವ ವೇಳೆ ಹಾರ್ದಿಕ್ ಪಾಂಡ್ಯ ಎಸೆದ ಬೌನ್ಸರ್‌ನ್ನು ಉತ್ತರಿಸುವಲ್ಲಿ ಫಖರ್ ಜಮಾನ್ ಪುಲ್ ಮಾಡಲು ಯತ್ನಿಸಿದರು. ಚೆಂಡು ಗ್ಲೌಸ್‌ಗೆ ಬಡೆದು ಆಗಸಕ್ಕೆ ಏರಿತು. ಪಂತ್ ಚೆಂಡಿನ ಮೇಲಿನ ಕಣ್ಣನ್ನು ತೆಗೆಯದೇ ಕ್ಯಾಚ್ ಪಡೆದರು.

ಆಗಸಕ್ಕೆ ಚೆಂಡು ಹೋಗುತ್ತಲ್ಲೆ ತಮ್ಮ ಬಲ ಭಾಗಕ್ಕೆ ಕೊಂಚ ಸರಿದು, ಹಿಂದೆ ಮುಂದೆ ಆಗಿ ಕ್ಯಾಚ್ ಪಡೆದರು. ಕೊಂಚ ಯಾಮಾರಿದ್ರೂ ನೆಲದ ಮೇಲೆ ಇದ್ದ ಹೆಲ್ಟೆಟ್ ಇವರಿಗೆ ತಗುಲಿ ಮತ್ತೆ ಗಾಯಕ್ಕೆ ತುತ್ತಾಗುತ್ತಿದ್ದರು. ಆದರೆ ಇವರ ಸಮಯ ಪ್ರಜ್ಞೆಯ ಪರಿಣಾಮ ಉತ್ತಮ ಕ್ಯಾಚ್ ಪಡೆದರು.
ಗಾಯಕ್ಕೆ ತುತ್ತಾಗಿದ್ದ ಸ್ಟಾರ್
2022ರಲ್ಲಿ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಈ ವೇಳೆ ಅವರು ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಮನೆಗೆ ಮರಳುತ್ತಲೆ ಮೊದಲು ಕಾಲು ಸರಿ ಮಾಡಿಕೊಂಡು, ಅಭ್ಯಾಸ ಆರಂಭಿಸಿದರು. ಪುನರ್ವಸತಿಯಲ್ಲಿ ಸತತ ಬೆವರು ಹರಿಸಿದರ ಅವರು, 14 ತಿಂಗಳ ಬಳಿಕ ಅಂಗಳಕ್ಕೆ ಇಳಿದು ತಮ್ಮ ಹಳೆಯ ಶೈಲಿಯಲ್ಲಿ ಕಮ್‌ಬ್ಯಾಕ್ ಮಾಡಿದರು.
ಐಪಿಎಲ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿದ ಇವರ ಫಿಟ್ನೆಸ್ ಗಮನಸಿದ ಬಿಸಿಸಿಐ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿದೆ. ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಲು ರಿಷಭ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದರ ಟೀಸರ್ ಅಮೆರಿಕದಲ್ಲಿ ರಿಲೀಸ್ ಆಗಿದೆ.












Click it and Unblock the Notifications