IPL 2025 Retention: ತಂಡ ತೊರೆದ ರಿಷಬ್, ಕೆಎಲ್ ರಾಹುಲ್; ಮಂಬೈನಲ್ಲೇ ಉಳಿದ ರೋಹಿತ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಹರಾಜಿಗೆ ಮುನ್ನ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಹಲವು ತಂಡಗಳು ಅಚ್ಚರಿಯ ನಿರ್ಧಾರಗಳನ್ನು ಮಾಡಿದ್ದರೆ, ಇನ್ನೂ ಕೆಲವು ನಿರೀಕ್ಷೆಗಳು ನಿಜವಾಗಿದೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ತಂಡಗಳನ್ನು ಬಿಟ್ಟು ಮೆಗಾ ಹರಾಜಿಗೆ ಬರುತ್ತಾರೆ ಎನ್ನುವ ಊಹೆಗಳು ನಿಜವಾಗಿದೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಬಿಡುತ್ತಾರೆ ಎನ್ನುವ ಸುದ್ದಿ ಸುಳ್ಳಾಗಿದ್ದು ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ.
ನಿರೀಕ್ಷೆಯಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ತಂಡದಿಂದ ಹೊರಬರುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. 2023ರ ಐಪಿಎಲ್ ವೇಳೆ ಫ್ರಾಂಚೈಸಿ ಮಾಲಿಕ ಸಂಜೀವ್ ಗೊಯೆಂಕಾ ಕೆಎಲ್ ರಾಹುಲ್ ಜೊತೆ ನಡೆದುಕೊಂಡಿದ್ದ ರೀತಿಗೆ ಟೀಕೆ ವ್ಯಕ್ತವಾಗಿತ್ತು. ನಿರೀಕ್ಷೆಯಂತೆ ಕೆಎಲ್ ರಾಹುಲ್‌ರನ್ನು ಎಲ್‌ಎಸ್‌ಜಿ ತಂಡದಿಂದ ಬೇರೆಯಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿಗೆ ಬರಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಕೂಡ ತಂಡವನ್ನು ತೊರೆದು ಹೊರಬಂದಿದ್ದಾರೆ. ನಾಯಕತ್ವ ನೀಡುವ ವಿಚಾರದಲ್ಲಿ ಮತ್ತು ಹಣದ ವಿಚಾರದಲ್ಲಿ ಫ್ರಾಂಚೈಸಿ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ತಂಡವನ್ನು ತೊರೆಯಲು ರಿಷಬ್ ಪಂತ್ ನಿರ್ಧರಿಸದ್ದರು ಎನ್ನಲಾಗಿದೆ. ಇದೀಗ ಅವರು ಮೆಗಾ ಹರಾಜಿಗೆ ಬಂದಿದ್ದು ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.
2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮುಂದಾಳತ್ವ ವಹಿಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಲಾಗಿದೆ. ಕೆಕೆಆರ್ ತಂಡದಿಂದ ಹೊರ ಬಂದಿದ್ದು, ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು ಖರೀದಿ ಮಾಡಲು ಹಲವು ತಂಡಗಳು ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಮುಂಬೈನಲ್ಲೇ ಉಳಿದ ಹಿಟ್‌ಮ್ಯಾನ್
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ತಂಡದಿಂದ ಹೊರ ಬರುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಕಳೆದ ಐಪಿಎಲ್‌ನಲ್ಲಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ರೋಹಿತ್ ಶರ್ಮಾ ಬೇಸರಗೊಂಡಿದ್ದು ತಂಡದಿಂದ ಹೊರಬರುವುದು ಖಚಿತ ಎನ್ನಲಾಗಿತ್ತು. ಆದರೆ ಎಲ್ಲಾ ನಿರೀಕ್ಷೆಗಳನ್ನು ಸುಳ್ಳಾಗಿದ್ದು ರೋಹಿತ್ ಶರ್ಮಾರನ್ನು ಉಳಿಸಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ.
ಇಶಾನ್ ಕಿಶನ್‌ರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಜೋಸ್ ಬಟ್ಲರ್, ಮಿಚೆಲ್ ಸ್ಟಾರ್ಕ್, ಫಾಫ್ ಡುಪ್ಲೆಸಿಸ್, ಮೊಹಮ್ಮದ್ ಸಿರಾಜ್ ಅಂತಹ ಆಟಗಾರರನ್ನು ತಂಡಗಳು ಕೈಬಿಟ್ಟಿವೆ. ಆರ್ ಟಿಎಂ ಅವಕಾಶ ಇರುವ ಕಾರಣ ಹಲವು ಆಟಗಾರರನ್ನು ಹರಾಜಿನ ವೇಳೆ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ಇರುವುದರಿಂದ ಪ್ರಮುಖ ಆಟಗಾರರು ಮತ್ತೆ ತಮ್ಮ ತಂಡಕ್ಕೆ ಮರಳುವ ಸಾಧ್ಯತೆ ಇದೆ.












Click it and Unblock the Notifications