• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕ್ರಿಕೆಟರ್ ರಿಕಿ ಪಾಂಟಿಂಗ್ ಅನಾರೋಗ್ಯ, ಆಸ್ಪತ್ರೆಗೆ ರವಾನೆ

|
Google Oneindia Kannada News

ಪರ್ತ್, ಡಿಸೆಂಬರ್ 02: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ದಿಗ್ಗಜ ಮತ್ತು ನಾಯಕ ರಿಕಿ ಪಾಂಟಿಂಗ್ ಆರೋಗ್ಯದ ಭಯದಿಂದ ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವರದಿಯಾಗಿದೆ.

ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ 1ನೇ ಟೆಸ್ಟ್‌ನ 3ನೇ ದಿನದ ಸಮಯದಲ್ಲಿ ಪಾಂಟಿಂಗ್ ಚಾನೆಲ್ 7ಗಾಗಿ ಕಾಮೆಂಟ್ ಮಾಡುತ್ತಿದ್ದರು. ದಿ ಡೈಲಿ ಟೆಲಿಗ್ರಾಫ್ ಅನ್ನು ಉಲ್ಲೇಖಿಸಿ ಫಾಕ್ಸ್‌ಸ್ಪೋರ್ಟ್ಸ್‌ನಲ್ಲಿನ ವರದಿಯ ಪ್ರಕಾರ ಊಟದ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Ind vs SA 2nd T20I : ಸ್ಟ್ರೈಕ್ ತೆಗೆದುಕೊಳ್ಳುವಂತೆ ಕೇಳಿದ ದಿನೇಶ್ ಕಾರ್ತಿಕ್‌ಗೆ ಕೊಹ್ಲಿ ಕೊಟ್ಟ ಉತ್ತರ ಇದುInd vs SA 2nd T20I : ಸ್ಟ್ರೈಕ್ ತೆಗೆದುಕೊಳ್ಳುವಂತೆ ಕೇಳಿದ ದಿನೇಶ್ ಕಾರ್ತಿಕ್‌ಗೆ ಕೊಹ್ಲಿ ಕೊಟ್ಟ ಉತ್ತರ ಇದು

ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿನ ವರದಿಯ ಪ್ರಕಾರ, ಪಾಂಟಿಂಗ್ ಟೆಸ್ಟ್ ಪಂದ್ಯದ ಮೂರನೇ ದಿನದ ಸಮಯದಲ್ಲಿ ಅಸ್ವಸ್ಥರಾಗಿದ್ದರು. ಹೃದಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ತೆರಳಿದರು. "ರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದಾರೆ ಇದರ ಬಗ್ಗೆ ಉಳಿದ ವಿವರಣೆಯನ್ನು ನೀಡಿಲ್ಲ," ಎಂದು ಸೆವೆನ್ ವಕ್ತಾರರು ಹೇಳಿದ್ದಾರೆ.

ಆಸ್ಟ್ರೇಲಿಯಾ ಆಟಗಾರರನ್ನು ಕಾಡುವ ಸಮಸ್ಯೆ:

ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಈ ವರ್ಷ ಅತ್ಯಂತ ಕಷ್ಟಕರವಾಗಿದೆ. ಇದೇ ವರ್ಷದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಎರಡು ದಂತಕಥೆಗಳಾದ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ವಿಧಿವಶರಾಗಿದ್ದರು. ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟರ್ ಡೀನ್ ಜೋನ್ಸ್ ಕೂಡ 2020ರ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅಲ್ಲದೆ, ವೆಸ್ಟರ್ನ್ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಮತ್ತು ಇತ್ತೀಚೆಗೆ ನೆದರ್‌ಲ್ಯಾಂಡ್ಸ್ ಕೋಚ್, ರಯಾನ್ ಕ್ಯಾಂಪ್‌ಬೆಲ್ ಕೂಡ ಈ ವರ್ಷದ ಏಪ್ರಿಲ್‌ನಲ್ಲಿ ಹೃದಯಾಘಾತದಿಂದ ಸಾವಿನ ಮನೆ ಸೇರಿದ್ದರು.

ರಿಕಿ ಪಾಂಟಿಂಗ್ ಆಟದ ವಿವರ:

ಆಸೀಸ್ ತಂಡದ ಪರವಾಗಿ 168 ಟೆಸ್ಟ್‌ಗಳಲ್ಲಿ ಆಡಿದ ರಿಕಿ ಪಾಂಟಿಂಗ್ 51.85 ಸರಾಸರಿಯಲ್ಲಿ 13.378 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 41 ಶತಕ ಮತ್ತು 62 ಅರ್ಧಶತಕಗಳನ್ನು ಗಳಿಸಿದರು. 375 ಏಕದಿನ ಪಂದ್ಯಗಳನ್ನು ಆಡಿದ ಅವರು 30 ಶತಕಗಳು ಮತ್ತು 82 ಅರ್ಧಶತಕಗಳೊಂದಿಗೆ 42.03 ಸರಾಸರಿಯಲ್ಲಿ 13,704 ರನ್ ಗಳಿಸಿದ್ದಾರೆ. ಅದೇ ರೀತಿ 17 T20 ಪಂದ್ಯಗಳಲ್ಲಿ 28.64 ರ ಸರಾಸರಿಯಲ್ಲಿ 401 ರನ್ ಗಳಿಸಿದ್ದು, ಅದರಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದರು.

English summary
Cricketer Ricky Ponting Rushed To Hospital Following Health Scare During Commentary. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X