ಮುಂದಿನ ಐಪಿಎಲ್‌ ಸೀಸನ್‌ಗೆ ಆರ್‌ಸಿಬಿ ಉಳಿಸಿಕೊಂಡ ಆಟಗಾರರ ಪಟ್ಟಿ

RCB Team: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿಯು ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು 17 ವರ್ಷದ ಬಳಿಕ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಸಂಭ್ರಮಾಚರಣೆಯಲ್ಲಿ ಬರೀ ಕರ್ನಾಟಕ ಅಷ್ಟೇ ಅಲ್ಲದೆ, ದೇಶವೇ ಮಿಂದೆದಿತ್ತು. ಆದರೆ, ಮರುದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನಪ್ಪಿದ್ದರು. ಇದು ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿದ್ದು, ಬಳಿಕ ಹಲವು ಬೆಳವಣಿಗೆಗಳು ಸಹ ಆದ್ವು.

ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, ಇದು ಆರ್‌ಸಿಬಿ ಟ್ರೋಫಿ ಗೆಲುವಿನ ಸಂಭ್ರಮವನ್ನೇ ಕಿತ್ತುಕೊಂಡುಬಿಟ್ಟಿತು. ಈ ಸಂಬಂಧ ಹಲವು ಬೆಳವಣಿಗೆಗಳು ಸಹ ನಡೆದವು..ಅದು ಯಾವ ಮಟ್ಟಿಗೆ ಅಂದ್ರೆ ನಗರ ಪೊಲೀಸ್‌ ಆಯುಕ್ತರು ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳನ್ನು ಸಹ ಅಮಾನತು ಮಾಡಲಾಗಿತ್ತು. ಅಲ್ಲದೆ, ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಎಫ್‌ಐಆರ್‌ ಹಾಗೂ ವಿರಾಟ್‌ ಕೊಹ್ಲಿ ಮೇಲೂ ಕೇಸ್‌ ದಾಖಲಾಯಿತು.

RCB s Probable Retained Players for IPL 2026

ಬಳಿಕ ಆರ್‌ಸಿಬಿ ಪ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಬ್ಯಾನ್ ಆಗುತ್ತದೆ ಎಂಬ ವದಂತಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದು, ಇದಕ್ಕೆ ಸ್ಪಷ್ಟನೆಯನ್ನು ಪ್ರಾಂಚೈಸಿ ಕೊಟ್ಟಿತ್ತು. ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಖಡಕ್‌ ಸಂದೇಶ ಕೊಟ್ಟಿತ್ತು. ಈ ಮೂಲಕ ಕಿಡಿಗೇಡಿಗಳು ಹಬ್ಬಿಸುವ ವದಂತಿಗಳಿಗೆ ತಿರುಗುಬಾಣ ನೀಡಿತ್ತು.

ಇದರ ಬೆನ್ನಲ್ಲೇ ಇದೀಗ ಮುಂದಿನ ಸೀಸನ್‌ ಅಂದರೆ 19ನೇ ಆವೃತ್ತಿಗೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾರೆಲ್ಲ ಆಟಗಾರರು ಆಡಲಿದ್ದಾರೆ ಎನ್ನುವ ಸುದ್ದಿಯೊಂದು ಸಖತ್ ಸೌಂಡ್‌ ಮಾಡುತ್ತಿದೆ ಹರಿದಾಡುತ್ತಿದೆ. ಹಾಗಾದ್ರೆ ಯಾರೆಲ್ಲಾ ಔಟ್‌ ಆಗಲಿದ್ದಾರೆ ಹಾಗೂ ಯಾರೆನ್ನೆಲ್ಲ ಉಳಿಸಿಕೊಳ್ಳಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ಸೀಸನ್‌ ಆರಂಭದಿಂದಲೂ ಕೊನೆವರೆಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿತ್ತು. ಈ ಮೂಲಕ ಬಲಿಷ್ಠ ತಂಡಗಳನ್ನೇ ಬಗ್ಗುಬಡಿದು ಫೈನಲ್‌ನಲ್ಲೂ ಪಂಜಾಬ್‌ ಕಿಂಗ್ಸ್‌ ವಿರುದ್ಧ ಭರ್ಜರಿಯಾಗಿ ಗೆದ್ದು ಚಾಂಪಿಯನ್‌ ಪಟ್ಟ ಏರಿ 17 ವರ್ಷಗಳ ಬಳಿಕ ಟ್ರೋಫಿ ಗೆದ್ದುಕೊಂಡಿದೆ.

ರಾಯಲ್‌ ಚಾಲೆಂಜರ್ಸ್ ಬೆಂಗಲೂರು ತಂಡದಲ್ಲಿ ಈ ಬಾರಿ ಬ್ಯಾಟಿಂಗ್‌, ಬೌಲಿಂಗ್‌ ಲೈನ್‌ ಅಪ್‌ ಉತ್ತಮವಾಗಿದೆ. ಯಾರನ್ನು ಯಾವ ಸ್ಥಾನದಲ್ಲಿ ಆಡಿಸಿದರೆ ಉತ್ತಮ ಎಂಬ ಐಡಿಯಾ ಸಹ ಸಿಕ್ಕಿದೆ. ಅಂದುಕೊಂಡಿದ್ದಕ್ಕಿಂತ ಉತ್ತಮ ಆಟಗಾರರನ್ನೇ ಹೊಂದಿದ್ದು, ಅವರನ್ನೇ ಮುಂದಿನ ಆವೃತ್ತಿಗೆ ಮುಂದುವರೆಸಿ ಕೆಲವರನ್ನು ಕೈಬಿಡಲಿದೆ.

ಆರ್‌ಸಿಬಿಯಲ್ಲಿ ಉಳಿದುಕೊಳ್ಳುವ ಆಟಗಾರರು

* ರಜತ್ ಪಾಟಿದಾರ್ (ನಾಯಕ)
* ವಿರಾಟ್‌ ಕೊಹ್ಲಿ
* ಫಿಲ್ ಸಾಲ್ಟ್‌/ ಜಾಕೋಬ್ ಬೆಥೆಲ್‌
* ದೇವದತ್‌ ಪಡಿಕ್ಕಲ್/ ಮಯಾಂಕ್ ಅಗರ್ವಾಲ್
* ಜಿತೇಶ್ ಶರ್ಮಾ
* ಕೃನಾಲ್‌ ಪಾಂಡ್ಯ
* ಟೀಂ ಡೆವಿಡ್‌
* ರೊಮಾರಿಯೋ ಶೇಫರ್ಡ್‌
* ಜೋಶ್ ಹೇಜಲ್‌ವುಡ್‌
* ಸುಯೇಶ್ ಶರ್ಮಾ
* ಭುವನೇಶ್ವರ್ ಕುಮಾರ್
* ಯಶ್ ದಯಾಳ್
* ನುವಾನ್ ತುಷಾರಾ
* ಲುಂಗಿ ಎನ್‌ಗಿಡಿ
* ಮನೋಜ್‌ ಭಂಡಗೆ
* ಸ್ವಪ್ನಿಲ್ ಸಿಂಗ್
* ಸ್ವಸ್ತಿಕ್‌ ಚಿಕಾರ

ಹೊರಬೀಳಿರುವ ಆಟಗಾರರ ಪಟ್ಟಿ

* ಲಿಯಾಮ್ ಲಿವಿಂಗ್​ಸ್ಟೋನ್
* ಅಭಿನಂದನ್ ಸಿಂಗ್
* ರಾಸಿಖ್ ಸಲಾಂ ದಾರ್
* ಮೋಹಿತ್ ರಾಥಿ
* ಬ್ಲೆಸ್ಸಿಂಗ್ ಮುಜರಬಾನಿ
* ಟಿಮ್ ಸೀಫರ್ಟ್

ಈ ಬಾರಿ ಆರ್​ಸಿಬಿ ಪರ ಅಂಗಳಕ್ಕಿಳಿದ ಬಹುತೇಕ ಆಟಗಾರರು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದವರಾಗಿದ್ದಾರೆ. ಆದ್ದರಿಂದ ಮಿನಿ ಹರಾಜಿಗೂ ಮುನ್ನ ಕೆಲವೇ ಕೆಲ ಆಟಗಾರರನ್ನು ಮಾತ್ರ ಹೊರಕಳಿಸಲಿದೆ ಎಂದು ತಿಳಿದುಬಂದಿದೆ. ಪ್ಲೇಯಿಂಗ್‌ 11ನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪ್ಲೇಯಿಂಗ್‌ 11ನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರು

* ರಜತ್ ಪಾಟಿದಾರ್ (ನಾಯಕ)
* ವಿರಾಟ್‌ ಕೊಹ್ಲಿ
* ಫಿಲ್ ಸಾಲ್ಟ್‌
* ದೇವದತ್‌ ಪಡಿಕ್ಕಲ್
* ಜಿತೇಶ್ ಶರ್ಮಾ
* ಕೃನಾಲ್‌ ಪಾಂಡ್ಯ
* ಟೀಂ ಡೆವಿಡ್‌
* ಜೋಶ್ ಹೇಜಲ್‌ವುಡ್‌
* ಸುಯೇಶ್ ಶರ್ಮಾ
* ಭುವನೇಶ್ವರ್ ಕುಮಾರ್
* ಯಶ್ ದಯಾಳ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+