RCB Year Ender 2025: ಈ ವರ್ಷ ಐಪಿಎಲ್ನಲ್ಲಿ ಮರೆಯಲಾಗದ ಆರ್ಸಿಬಿ ಸಾಧನೆಗಳು ಹಾಗೂ ದುಃಖಕರ ಘಟನೆಗಳು
RCB Year Ender 2025: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ಬಗ್ಗುಬಡಿದು ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸವನ್ನೇ ಬರೆಯಿತು. ಇನ್ನೂ ಈ ವರ್ಷ ತಂಡದಲ್ಲಿ ಮರೆಯಲಾಗದಂತಹ ಸಂತೋಷಕರ ಹಾಗೂ ದುಃಖದ ಸಂಗತಿಗಳು ಕೂಡ ನಡೆದುಹೋದವು. ಹಾಗಾದ್ರೆ ಅವುಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೊಸ ವರ್ಷ 2026ರ ಎಂಟ್ರಿಗೆ ಇನ್ನೂ ಕೆಲವೇ ವಾರಗಳು ಮಾತ್ರ ಬಾಕಿ ಇವೆ. ಇದಕ್ಕೂ ಮುನ್ನ 2025ರಲ್ಲಿ ನಡೆದ ಕೆಲ ಪ್ರಮುಖ ಘಟನೆಗಳನ್ನು ಮೆಲುಕುಹಾಕಲೇಬೇಕಾಗುತ್ತದೆ. ಅದರಲ್ಲೂ, ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಚಾರ ತೆಗೆದುಕೊಂಡರೆ, ತುಂಬಾ ಘಟನೆಗಳು ಆದ್ವು. ಅವುಗಳು ಯಾವುವು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ನೋಡಿ.

ಇತಿಹಾಸ ಬರೆದ ಆರ್ಸಿಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 17 ಆವೃತ್ತಿಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೆಯೇನು ಕಡಿಮೆ ಆಗಿರಲಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇತ್ತು. ಇನ್ನೂ ಈ ತಂಡ 2025ರ 18ನೇ ಸೀಸನ್ನಲ್ಲಿ ಎಲ್ಲಾ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಫೈನಲ್ ಪ್ರವೇಶ ಮಾಡಿತು. ಇದರಲ್ಲಿ ಗೆದ್ದು ಬೀಗುವ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆದು ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿತು.
ಐಪಿಎಲ್ 2025 ಫೈನಲ್ ಪಂದ್ಯವು ಅಹಮದಬಾದ್ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 3ರಂದು ನಡೆದಿದ್ದು, ಈ ವೇಳೆ ಪಂಜಾಬ್ ಕಿಂಗ್ಸ್ ಮಣಿಸಿ ಆರ್ಸಿಬಿ ಚೊಚ್ಚಲ ಟ್ರೋಫಿ ಎತ್ತಿಹಿಡಿದು ಅಭಿಮಾನಿಗಳ ಕನಸನ್ನ ನೆರವೇರಿಸಿತು. ಅಂದು ಬರೀ ಕರ್ನಾಟಕ ಮಾತ್ರವಲ್ಲದೆ, ದೇಶದ, ವಿದೇಶಗಳಲ್ಲೂ ಆರ್ಸಿಬಿ ಗೆಲ್ಲುವನ್ನು ಸಂಭ್ರಮಿಸಿದರು.
ಟ್ರೋಫಿ ಗೆಲುವಿಗೆ ಪ್ರಮುಖ ಕಾರಣ ಆರ್ಸಿಬಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು. ಈ ಹಿಂದೆ ಪ್ರತಿ ಬಾರಿಯೂ ಕೊನೆವರೆಗೂ ಬಂದು ಬ್ಯಾಟಿಂಗ್ ಅಥವಾ ಬೌಲಿಂಗ್ನಲ್ಲಿ ಎಡವಿ ಸೋಲು ಕಾಣುತ್ತಿತ್ತು. ಆದರೆ, ಈ ಬಾರಿ ಬಲಿಷ್ಠ ತಂಡ ಕಟ್ಟುವುದಲ್ಲದೆ, ಯಾರನ್ನು ಯಾವ ಸ್ಥಾನದಲ್ಲಿ ಆಡಿಸಬೇಕೆಂದು ಅರಿತುಕೊಂಡು ಈ ನಿಯಮವನ್ನು ಪಾಲಿಸಿ ಟ್ರೋಫಿ ಗೆಲುವಿನ ಕನಸನ್ನು ಕೊನೆಗೂ ನನಸು ಮಾಡಿಕೊಂಡಿತು.
ದುಃಖಕರ ಸಂಗತಿ: ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ಜೂನ್ 4ರಂದು ವಿಜಯೋತ್ಸವವನ್ನು ಇಟ್ಟುಕೊಳ್ಳಲಾಗಿತ್ತು. ಆದರೆ, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಸಿ 11 ಮಂದಿ ಪ್ರಾಣ ಕಳೆದುಕೊಂಡರು. ಈ ದುರಂತ ತಂಡದ ಪಾಲಿಗೆ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿತು. ಬಳಿಕ ಹಲವಾರು ಬೆಳವಣಿಗೆಗಳು ಆದ್ವು.
ಕೊಹ್ಲಿ ಮೇಲೂ ಪ್ರಕರಣ ದಾಖಲು: ದುರಂತ ಸಂಬಂಧ ಕೆಎಸ್ಸಿಎ, ಆರ್ಸಿಬಿ ಮಾರ್ಕೆಟಿಂಗ್ ಹೆಡ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಮತ್ತೊಂಂದೆಡೆ ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಮೇಲೂ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಕೋರ್ಟ್ನಲ್ಲಿದೆ. ಇತ್ತೀಚೆಗಷ್ಟೇ ಫ್ರಾಂಚೈಸಿಯು ವಿಶೇಷ ಸಂದೇಶದ ಜೊತೆಗೆ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ₹25 ಲಕ್ಷಕ್ಕೆ ಆರ್ಥಿಕ ನೆರವು ಘೋಷಣೆ ಮಾಡಿದೆ.
ಕ್ರೀಡಾಂಗಣದಲ್ಲಿ ಪಂದ್ಯ ರದ್ದು: ಈ ಘಟನೆ ಬೆನ್ನಲ್ಲೇ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಹಾಗೂ ಪಂದ್ಯಗಳನ್ನು ನಡೆಸುವಂತಿಲ್ಲ ಎನ್ನುವ ಆದೇಶವನ್ನು ಹೊರಡಿಸಲಾಗಿತ್ತು. ಆಗಿನಿಂದ ಇಲ್ಲಿಯವರೆಗೂ ಇಲ್ಲಿ ಇದುವರೆಗೂ ಇಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ಇದೀಗ ಆರ್ಸಿಬಿಗೆ ತವರು ಮೈದಾನವನ್ನು ಬೇರೆಡೆಗೆ ಮಾಡಲು ಆಕ್ರೋಶಗಳು ವ್ಯಕ್ತವಾಗಿವೆ. ಆದ್ದರಿಂದ ಇತ್ತೀಚೆಗಷ್ಟೇ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಇಲ್ಲಿ ಪಂದ್ಯಗಳನ್ನು ಆಡಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ, ಈ ಬಗ್ಗೆ ಕೆಎಸ್ಸಿಎನಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳನ್ನು ಹೊರಬಿದ್ದಿಲ್ಲ.
ಐಪಿಎಲ್ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ ತಂಡ ಅಂತಾ ಇದ್ರೆ ಅದು ಆರ್ಸಿಬಿ ಮಾತ್ರ. ಮತ್ತೊಂದೆಡೆ, ಆರ್ಸಿಬಿ ಇಲ್ಲದಿದ್ರೆ, ಐಪಿಎಲ್ ನಡೆಯುವುದೇ ಅನುಮಾನ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಕ್ರೇಜ್, ಅಭಿಮಾನಿ ಬಳಗವನ್ನು ಹೊಂದಿದೆ. ಟ್ರೋಫಿ ಗೆದ್ದ ಬಳಿಕವಂತೂ ಬೆಂಗಳೂರು ತಂಡ ಮಾರ್ಕೆಟಿಂಗ್ ವ್ಯಾಲ್ಯೂನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳನ್ನು ಹಿಂದಿಕ್ಕಿತು. ಆದರೆ, ಇದೀಗ ಎರಡನೇ ಸ್ಥಾನಕ್ಕಿಳಿದು ಮುಂಬೈ ಇಂಡಿಯನ್ಸ್ಗೆ ನಂಬರ್ ಒನ್ ಸ್ಥಾನ ಬಿಟ್ಟುಕೊಟ್ಟಿದೆ. ಮತ್ತೆ ಮಿನಿ ಹರಾಜಿನ ವೇಳೆ ಅಥವಾ ಬಳಿಕ ಇದನ್ನು ಕಿತ್ತುಕೊಳ್ಳುವ ಸಾಧ್ಯತೆಯಿದೆ.
ಪ್ರಸ್ತುತ ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿ.ಕೀ.), ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್ವುಡ್, ಸುಯಶ್ ಶರ್ಮಾ, ಜಾಕೋಬ್ ಬೆಥೆಲ್, ಅಭಿನಂದನ್ ಸಿಂಗ್, ಸ್ವಪ್ನಿಲ್ ಸಿಂಗ್, ರಸಿಖ್ ದಾರ್, ನುವಾನ್ ತುಷಾರ.
-
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
ಮೈದಾನಕ್ಕೆ ಬರ್ತಾರಾ ಆರ್ಸಿಬಿ ಅಭಿಮಾನಿಗಳ ಹೊಸ ಕ್ರಶ್ ಬಿರ್ಲಾ ಕುಡಿ ಅನನ್ಯಾ?; ಕಾವ್ಯಾ ಮಾರನ್ ಬಗ್ಗೆ ಹೊಸ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
ಕ್ರಿಕೆಟ್ ಆಟ, ಬೆಟ್ಟಿಂಗ್ ದಂಧೆ, ಜೂಜಿನ ಮಜಾ ಇದೇ ಮಾರ್ಚ್ 28ರಿಂದ ಪ್ರಾರಂಭ: ವಿವೇಕಾನಂದ ಎಚ್.ಕೆ. ಮಹತ್ವದ ಸಂದೇಶ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು?










Click it and Unblock the Notifications