RCB vs LSG: ಯಾವ ತಂಡವೂ ಮಾಡಿರದ ಸಾಧನೆ ಮಾಡಲು ಆರ್‌ಸಿಬಿಗೆ ಅವಕಾಶ
ಐಪಿಎಲ್ 2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಪ್ರದರ್ಶನ ನೀಡುತ್ತಿದೆ. ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ 2 ರನ್‌ಗಳ ರೋಚಕ ಗೆಲುವು ಸಾಧಿಸಿದ ಬಳಿಕ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಆರ್ ಸಿಬಿ ಈ ಆವೃತ್ತಿಯಲ್ಲಿ ಈಗಾಗಲೇ ತವರಿನ ಹೊರಗೆ ಆಡಿರುವ 6 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇದೀಗ ತವರಿನ ಹೊರಗೆ 7ನೇ ಪಂದ್ಯ ಆಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆರ್ ಸಿಬಿ ಇತಿಹಾಸ ಸೃಷ್ಟಿಸಲಿದೆ. ಯಾವ ತಂಡ ಕೂಡ ಈವರೆಗೂ ತವರಿನ ಹೊರಗಿನ ಎಲ್ಲಾ 7 ಪಂದ್ಯಗಳನ್ನೂ ಗೆದ್ದಿಲ್ಲ ಒಂದು ವೇಳೆ ಆರ್ ಸಿಬಿ ಈ ಸಾಧನೆ ಮಾಡಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ಲಕ್ನೋ ವಿರುದ್ಧ ಪಂದ್ಯ ಯಾವಾಗ?
ಆರ್ ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಮೇ 9ರಂದು ಶುಕ್ರವಾರ ನಡೆಯಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಪಂದ್ಯ ಗೆದ್ದರೆ ಆರ್ ಸಿಬಿ ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಆರ್ ಸಿಬಿ ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯ ಆಡಲಿದ್ದು ಕನಿಷ್ಠ ಎರಡು ಪಂದ್ಯ ಗೆದ್ದರೂ ಮೊದಲ ಎರಡು ಸ್ಥಾನಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದು. ಇದು ಫೈನಲ್ ಹಾದಿಯನ್ನು ಮತ್ತಷ್ಟು ಸುಗಮವಾಗಿಸಲಿದೆ.
ಆರ್ ಸಿಬಿ ನಾಯಕ ರಜತ್ ಪಟಿದಾರ್ ಕೂಡ ಹಲವು ಬಾರಿ ಇದನ್ನು ಹೇಳಿದ್ದಾರೆ. ನಾವು ಅಗ್ರಸ್ಥಾನದಲ್ಲಿ ಪ್ಲೇಆಫ್‌ಗೆ ಪ್ರವೇಶಿಸಬೇಕು ಎಂದು ಯೋಜಿಸಿದ್ದೇವೆ, ತಂಡ ಕೂಡ ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳು ಕೂಡ ಆರ್ ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಪ್ಲೇಆಫ್‌ಗೆ ಪ್ರವೇಶಿಸಲು ಎಂದು ಹಾರೈಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿರುವ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ಹಾದಿ ಕಠಿಣವಾಗಿದೆ. ಮುಂದಿನ ಮೂರು ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇಆಫ್‌ಗೆ ಅವಕಾಶ ಇದೆ. ಆದರೆ ಸದ್ಯದ ಎಲ್‌ಎಸ್‌ಜಿ ತಂಡ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ವಿಫಲವಾಗುತ್ತಿದ್ದು ಪ್ಲೇಆಫ್ ಹಾದಿ ಕಷ್ಟವಾಗಿದೆ.












Click it and Unblock the Notifications