RCB Vs RR: ಬೆಂಗಳೂರಿನಲ್ಲಿ ಆರ್‌ಆರ್ ವಿರುದ್ಧ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಗಳು

RCB Vs RR: ಐಪಿಎಲ್ 2025ರ 42 ಪಂದ್ಯದಲ್ಲಿ ಕೊನೆಗೂ ತವರು ಮೈದಾನ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ತಂಡ ಗೆದ್ದು ಬೀಗಿದೆ. ಮತ್ತೊಂದೆಡೆ ಟಾಸ್‌ ಗೆದ್ದು ಗೆಲುವಿನ ಭರವಸೆಯಲಿದ್ದ ರಾಜಸ್ಥಾನ್‌ ರಾಯಲ್ಸ್‌ಗೆ ಹೀನಾಯ ಸೋಲಾಗಿದೆ. ಹಾಗಾದ್ರೆ, ಆರ್‌ಸಿಬಿ ಗೆಲುವಿಗೆ ಪ್ರಮಖ ಕಾರಣಗಳು ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತವರು ಮೈದಾನ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 12 ರನ್‌ಗಳಿಂದ ಗೆದ್ದು ಬೀಗಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ಕಳೆದುಕೊಂಡು ನಿಗದಿತ 20 ಓವರ್‌ಗಳಿಗೆ 205 ರನ್‌ಗಳನ್ನು ಕಲೆಹಾಕಿ 206 ಬೃಹತ್‌ ರನ್‌ಗಳ ಗುರಿ ನೀಡಿತು. ಈ ಟಾರ್ಗೆಟ್‌ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ ಆರಂಭದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಮಾಡಿತು. ಆದರೂ 9 ವಿಕೆಟ್‌ ವಿಕೆಟ್‌ ಕಳೆದುಕೊಂಡು 194 ರನ್ ಗಳಿಸಿ ಸೋಲನುಭವಿಸಿತು.

RCB Vs RR Reasons for RCB Win Against Rajasthan Royals in bengaluru

ಸಾಮಾನ್ಯವಾಗಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೇಸ್‌ ಮಾಡುವ ತಂಡವೇ ಗೆಲುವು ಸಾಧಿಸುತ್ತದೆ ಎಂಬ ಮಾತಿತ್ತು. ಆದರೆ, ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿ ಇದನ್ನು ಕೊನೆಗೂ ಸುಳ್ಳು ಮಾಡಿದೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಮೂಲಕ ಸತತ ಮೂರು ಸೋಲುಗಳನ್ನು ಕಂಡಿತ್ತು. ಗುಜರಾಜ್‌ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಲನುಭವಿಸಿತ್ತು. ಆದರೆ, ಇದೀಗ ಆರ್‌ಆರ್‌ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಮಾಡಿ ಗೆದ್ದು ಬೀಗಿದೆ.

ಆರ್‌ಸಿಬಿ ಪರ ಮೊದಲು ಬ್ಯಾಟಿಂಗ್‌ಗಿಳಿದ ವಿರಾಟ್‌ ಕೊಹ್ಲಿ 70 ರನ್‌ (42) ಸಿಡಿಸಿದರು. ಮತ್ತೊಂದೆಡೆ ದೇವದತ್‌ ಪಡಿಕ್ಕಲ್‌ ಕೂಡ 50 ರನ್‌ (27) ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇನ್ನು ಫಿಲ್‌ ಸಾಲ್ಟ್‌ 26, ಟೀಂ ಡೆವಿಡ್‌ 23, ನಾಕಯ ರಜತ್ ಪಾಟೀದಾರ್ 1, ಜಿತೇಶ್‌ ಶರ್ಮಾ 20 ರನ್‌ಗಳನ್ನು ಸಿಡಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಗಳು

* ಆರ್‌ಸಿಬಿ ನೀಡಿದ ಗುರಿಯನ್ನು ಸುಲಭವಾಗಿ ತಲುಪುವ ಹಂತದಲ್ಲಿ ಆರ್‌ಆರ್ ಇತ್ತು. ಆದರೆ, ರಾಜಸ್ಥಾನ್‌ ಗೆಲುವಿಗೆ ಅಂತಿಮ ಎರಡು ಓವರ್‌ಗಳಲ್ಲಿ 18 ರನ್ ಅಷ್ಟೇ ಅಗತ್ಯ ಇತ್ತು. ಈ ವೇಳೆ ಜೋಶ್ ಹೇಜಲ್‌ವುಟ್‌ ಮಾರಕ ಬೌಲಿಂಗ್‌ ಮಾಡುವ ಮೂಲಕ ಕೇವಲ 1 ರನ್ ನೀಡಿ 2 ವಿಕೆಟ್ ಕಿತ್ತರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

* ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಇಬ್ಬರೂ ಭರ್ಜರಿ ಅರ್ಧಶತಕ ಸಿಡಿಸಿ ಬೃಹತ್‌ ಮೊತ್ತ ಕಲೆಹಾಕಲು ನೆರವಾದರು.

* 18ನೇ ಓವರ್‌ನಲ್ಲಿ ಅನುಭವಿ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ 22 ರನ್‌ ಬಿಟ್ಟುಕೊಟ್ಟರು. ಈ ವೇಳೆ ಆರ್‌ಸಿಬಿ ಸೋಲುವುದು ಖಚಿತ ಎಂಬಂತಾಗಿತ್ತು. ಆದರೆ, 19ನೇ ಓವರ್‌ನಲ್ಲಿ ವೇಗಿ ಆರ್‌ಆರ್‌ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಹೇಜಲ್‌ಡ್ ಪಂದ್ಯದ ದಿಕ್ಕನ್ನೇ ಬದಲಿಸಿದರು.

* ಹೇಜಲ್‌ವುಡ್‌ ಬೌಲಿಂಗ್ ವೇಳೆ ಧೃವ್‌ ಜೂರೆಲ್‌ ವಿಕೆಟ್‌ ಕಬಳಿಸಿದರು. ಆರ್‌ಸಿಬಿ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಅವರು ಡಿಆರ್‌ಎಸ್ ತೆಗೆದುಕೊಂಡಿದ್ದಕ್ಕೆ ಧೃವ್‌ ಜೂರೆಲ್‌ ಔಟ್‌ ಆಗಿದ್ದು, ಇದು ಆರ್‌ಸಿಬಿ ಗೆಲುವಿಗೆ ಪ್ರಮುಖ ತಿರುವು ಆಯಿತು.

* ಕೊನೆಯ ಓವರ್ನಲ್ಲಿ ಯಶಸ್ ದಯಾಳ್ ಕೇವಲ 5 ರನ್ ನೀಡಿ ಆರ್ಸಿಬಿಗೆ 11 ರನ್ಗಳ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ 3ನೇ ಸ್ಥಾನಕ್ಕೇ ಏರಿದೆ.

* ಫಿಲ್‌ ಸಾಲ್ಟ್‌ ವಿಕೆಟ್‌ ಕಳೆದುಕೊಂಡ ಬಳಿಕ ಗಟ್ಟಿಯಾಗಿ ನಿಂತುಕೊಂಡ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಮೂಲಕ 51 ಎಸೆತಗಳಲ್ಲಿ 95 ರನ್ಗಳ ಜೊತೆಯಾಟ ಆಡಿದರು.

* ವಿರಾಟ್‌ ಕೊಹ್ಲಿ 42 ಬಾಲ್‌ಗೆ 8 ಬೌಂಡರಿ, 2 ಸಕ್ಸರ್‌ ಚಚ್ಚುವ ಮೂಲಕ 70 ರನ್‌ ಕಲೆಹಾಕಿದರೆ, ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 50 ರನ್ ಕಲೆಹಾಕಿದರು. ಈ ರನ್‌ಗಳೇ ಆರ್‌ಸಿಬಿ ಗೆಲುವಿಗೆ ಪ್ರಮುಖವಾದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+