RCB vs RR: ಆರ್‌ಸಿಬಿ ವಿರುದ್ಧ ಆರ್‌ಆರ್‌ ಎದುರಾಳಿ; ಈ ಬದಲಾವಣೆ ಮಾಡಿದ್ರೆ ಮಾತ್ರ ಉಳಿಗಾಲ!

ಇದು ಹೊಸ ಅಧ್ಯಾಯ ಎಂದು ಐಪಿಎಲ್ 2024ರ ಆರಂಭಕ್ಕೆ ಮುನ್ನ ವಿರಾಟ್ ಕೊಹ್ಲಿ ಹೇಳಿದ್ದರಿಂದ, ಅಭಿಮಾನಿಗಳು ಈ ಬಗ್ಗೆ ತಂಡದ ಬಗ್ಗೆ ಹೆಚ್ಚಾಗೇ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿರುವ ಆರ್‌ಸಿಬಿ ತಂಡ ಮೂರು ಪಂದ್ಯಗಳನ್ನು ಸೋತಿದೆ.

ಈ ಆವೃತ್ತಿಯಲ್ಲಿ ತವರಿನಲ್ಲಿ ಎರಡು ಪಂದ್ಯಗಳನ್ನು ಸೋತ ಮೊದಲ ತಂಡವಾಗಿದೆ. ಆ ಆವೃತ್ತಿಯಲ್ಲಿ ಆಲೌಟ್ ಆದ ಮೊದಲ ತಂಡ ಎನ್ನುವ ಕೆಟ್ಟ ದಾಖಲೆ ಕೂಡ ಮಾಡಿದೆ. ಸದ್ಯ ಆರ್‌ಸಿಬಿ ಆಟ ನೋಡಿದ ಅಭಿಮಾನಿಗಳು ಹೊಸ ಅಧ್ಯಾಯಕ್ಕಿಂತ ಹಳೆ ಅಧ್ಯಾಯವೇ ಚನ್ನಾಗಿತ್ತು ಎಂದಿದ್ದಾರೆ.

RCB vs RR RCB to Face Rajasthan Royals in Upcoming Match Changes Expected in RCB Playing XI

ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಅವರ ತವರಿನಲ್ಲಿ ಎದುರಿಸಲಿದೆ. ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ರಾಜಸ್ಥಾನ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗಿದೆ. ಶನಿವಾರ ಸಂಜೆ 7.30 ಕ್ಕೆ ಪಂದ್ಯ ನಡೆಯಲಿದ್ದು, ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

ತಂಡದಲ್ಲಿ ಬದಲಾವಣೆ ಮಾಡಲೇಬೇಕು?

ಕೆಕೆಆರ್ ವಿರುದ್ಧದ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಒಂದು ಬದಲಾವಣೆ ಮಾಡಿತ್ತು. ಅಲ್ಜಾರಿ ಜೋಸೆಫ್ ಬದಲಿಗೆ ರೀಸ್ ಟೋಪ್ಲೆ ಆಡಿದ್ದರೂ ಹೆಚ್ಚಿನ ವ್ಯತ್ಯಾಸ ಏನೂ ಆಗಲಿಲ್ಲ, ಕೆಕೆಆರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ವೈಶಾಖ್ ಅವರನ್ನು ಕೈಬಿಟ್ಟ ಆರ್‌ಸಿಬಿ ತಕ್ಕ ಬೆಲೆ ತೆತ್ತಿದೆ. ಅಭಿಮಾನಿಗಳು ಕೂಡ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲ್ಲಬೇಕೆಂದರೆ ಆರ್‌ಸಿಬಿ ತಂಡದಲ್ಲಿ ಬದಲಾವಣೆ ಮಾಡಲೇಬೇಕಿದೆ. ಇಲ್ಲದಿದ್ದರೆ ಮತ್ತೊಂದು ಸೋಲು ಶತಸಿದ್ಧ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ಈ ಬದಲಾವಣೆ ಆಗಲಿ

ವಿಲ್‌ ಜ್ಯಾಕ್ಸ್ ಟಿ20 ಮಾದರಿಯಲ್ಲಿ ವಿಶ್ವದ ಹಲವು ಲೀಗ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವಿಶ್ವದ ವಿವಿಧ ಲೀಗ್‌ಗಳಲ್ಲಿ 157 ಪಂದ್ಯಗಳಲ್ಲಿ 4310 ರನ್‌ ಗಳಿಸಿದ್ದಾರೆ. 158.66 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ. 3 ಶತಕ, 30 ಅರ್ಧಶತಕಗಳನ್ನು ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದು 49 ವಿಕೆಟ್ ಪಡೆದಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಬೇಕೆಂದರೆ ವಿಲ್‌ಜ್ಯಾಕ್ಸ್ ತಂಡದಲ್ಲಿ ಆಡಬೇಕಿದೆ. ಉಳಿದಂತೆ ವೈಶಾಖ್ ಕೂಡ ತಂಡದಲ್ಲಿ ಆಡಬೇಕಿದೆ. ಕ್ಯಾಮೆರಾನ್ ಗ್ರೀನ್ ಬದಲಾಗಿ ಲಾಕಿ ಫರ್ಗ್ಯುಸನ್ ಕೂಡ ಬಂದರ ಬೌಲಿಂಗ್ ವಿಭಾಗದಲ್ಲಿ ಮತ್ತಷ್ಟಿ ಬಲ ಬರಲಿದೆ.

ಆರ್ ಸಿಬಿ ತಂಡ ಹೀಗಿರಬೇಕು

ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್‌ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವಿಜಯ್‌ಕುಮಾರ್ ವೈಶಾಖ್, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಲಾಕಿ ಪರ್ಗ್ಯುಸನ್.

ಸಬ್: ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್, ಹಿಮಾಂಶು ಶರ್ಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+