ಬೌಲರ್‌ಗಳದ್ದೇನು ತಪ್ಪಿಲ್ಲ, ಎಡವುತ್ತಿರುವುದೇ ಬ್ಯಾಟಿಂಗ್ ವಿಭಾಗದಲ್ಲಿ: ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಸೇಹ್ವಾಗ್..
Virender Sehwag: ಐಪಿಎಲ್ 2025ರಲ್ಲಿ ಆರ್‌ಸಿಬಿಯು ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸತತ ಮೂರು ಪಂದ್ಯಗಳನ್ನು ಸೋತಿದೆ. ಶುಕ್ರವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೇಹ್ವಾಗ್ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿತು. ಮಳೆಯಿಂದಾಗಿ 14 ಓವರ್‌ಗಳಿಗೆ ಪಂದ್ಯವನ್ನು ಆಡಿಸಲಾಗಿತ್ತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಅಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ನಿಗದಿತ 14 ಓವರ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಬರೀ 95 ರನ್‌ಗಳನ್ನು ಕಲೆಹಾಕುವ ಮೂಲಕ 96 ರನ್‌ಗಳ ಟಾರ್ಗೆಟ್ ನೀಡಿತು.

ಆರ್‌ಸಿಬಿಯ ಪರ ಟೀಂ ಡೆವಿಡ್ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಏಕಾಂಗಿ ಹೋರಾಟದಿಂದ 50 ರನ್‌ಗಳನ್ನು ಕಲೆಹಾಕಿದರು. ಈ ಮೂಲಕ ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು. ಆದರೆ, ಈ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕೇವಲ 12.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಸುಲಭವಾಗಿ ಗೆದ್ದಿತು.
ಪಂಜಾಬ್ ಪರ ಬ್ಯಾಟ್ ಬೀಸಿದ ನೆಹಾಲ್ ವಾಧೇರಾರ 19 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ಸ್ಟೋಯ್ನಿಸ್ ವಿನ್ನಿಂಗ್ ಶಾಟ್ ಸಿಕ್ಸ್ ಮೂಲಕ ಪಂಜಾಬ್ ತಂಡವನ್ನು ಗೆಲ್ಲಿಸಿದರು. ಹೀಗೆ ಪಂಜಾಬ್ ಆರ್‌ಸಿಬಿ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ಇನ್ನು ಆರ್‌ಸಿಬಿಯ ಬ್ಯಾಟ್ಸ್‌ಮನ್‌ಗಳ ಬೇಜವಾಬ್ದಾರಿ ಆಟದ ವಿರುದ್ಧ ವಿರೇಂದ್ರ ಸೇಹ್ವಾಗ್ ಆಕ್ರೋಶ ವ್ಯಕ್ತಪಡಿಸಿದರು.
ಸೇಹ್ವಾಗ್ ಹೇಳಿದ್ದೇನು?: ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಬೇಜವಾಬ್ದಾರಿಯುತ ಆಟ ಆಡಿದ್ದಕ್ಕೆ ವಿರೇಂದ್ರ ಸೆಹ್ವಾಗ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಆರ್‌ಸಿಬಿ ತಂಡದ ಎಲ್ಲಾ ಬ್ಯಾಟರ್‌ಗಳು ಬೇಗನೇ ವಿಕೆಟ್ ಒಪ್ಪಿಸಿಬಿಟ್ಟರು. ಒಬ್ಬರೂ ಕಾಮನ್ ಸೆನ್ಸ್ ಇಲ್ಲದವರಂತೆ ಆಡಿದರು ಎಂದು ಅಸಮಧಾನ ವ್ಯಕ್ತಪಡಿಸಿದರು.
ಕನಿಷ್ಠ ಒಬ್ಬ ಬ್ಯಾಟ್ಸ್‌ಮನ್‌ನಾದರೂ ಸಾಮಾನ್ಯ ಜ್ಞಾನ ಬಳಸಿದ್ದರೆ, ರನ್‌ಗಳು 110-120 ಆಗುತ್ತಿತ್ತು. ಆಗ ಗೆಲುವಿಗೆ ಹೋರಾಡುವ ಅವಕಾಶ ಇತ್ತು ಎಂದು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಕೆಂಡಕಾರಿದರು. ಆರ್‌ಸಿಬಿಯ ಬೌಲರ್‌ಗಳು ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಝಲ್‌ವುಡ್ ಕೇವಲ ಒಂದೊಂದು ವಿಕೆಟ್ ಪಡೆದರು. ಆರ್‌ಸಿಬಿ ಬೌಲರ್‌ಗಳು ಉತ್ತಮವಾಗಿ ಪ್ರದರ್ಶನ್ ತೋರುತ್ತಿದ್ದಾರೆ. ಆದರೆ, ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತಂಡ ಸೋಲುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ಆರಂಭದಿಂದಲೇ ಅಭಿಮಾನಿಗಳು ಬಹುನಿರೀಕ್ಷೆ ಇಟ್ಟುಕೊಂಡಿದ್ದ ಆಟಗಾರರೇ ಪಂಜಾಬ್ ಬೌಲರ್ಸ್‌ಗಳಿಗೆ ಬೇಗ ವಿಕೆಟ್ ಒಪ್ಪಿಸಿದರು. ಆರಂಭಿಕರಾದ ಫಿಲ್ ಸಾಲ್ಟ್ 4 ಮತ್ತು ವಿರಾಟ್ ಕೊಹ್ಲಿ 1 ರನ್‌ಗೆ ಔಟಾಗಿ ಪೆವಿಲಿಯನ್ ಸೇರಿದರು. ಇಲ್ಲಿದಂಲೇ ತಂಡಕ್ಕೆ ದೊಡ್ಡ ಸಂಕಷ್ಟ ಎದರಾಯಿತು. ಬಳಿಕ ನಾಯಕ ರಜತ್ ಪಾಟಿದಾರ್ 23 ರನ್‌ಗೆ ಔಟಾದರು.
ಲಿಯಾಮ್ ಲಿವಿಂಗ್‌ಸ್ಟೋನ್ 4 ರನ, ಜಿತೇಶ್ ಶರ್ಮಾ2 ರನ್, ಮತ್ತು ಕೃನಾಲ್ ಪಾಂಡ್ಯ 1 ರನ್ ಗಳಿಸಿ ಔಟಾದರು. ಈ ವೇಳೆ ಟಿಮ್ ಡೇವಿಡ್ ಏಕಾಂಗಿಯಾಗಿ ಹೋರಾಟ ನಡೆಸಿ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 50 ರನ್ ಕಲೆಹಾಕಿ ತಂಡದ ಮೊತ್ತವನ್ನು 95 ರನ್‌ಗೆ ಮುಟ್ಟಿಸಿ ಅಜೇಯರಾಗಿ ಉಳಿದರು.












Click it and Unblock the Notifications