RCB vs LSG: ಜೋಶ್ ಹೇಜಲ್‌ವುಡ್ ವಾಪಸ್‌; ಟಿಮ್‌ ಡೇವಿಡ್ ಆಡ್ತಾರಾ? ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಿನ ಬಳಿಕವೂ ಆರ್ ಸಿಬಿಗೆ ಇದೀಗ ಅಂಕಪಟಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವ ಸುವರ್ಣ ಅವಕಾಶ ಸಿಕ್ಕಿದೆ. ಐಪಿಎಲ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ ಆರ್ ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣೆಸಲಿದ್ದು ಈ ಪಂದ್ಯದಲ್ಲಿ ಗೆದ್ದರೆ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಖಚಿತವಾಗಲಿದೆ.

ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಟಿಮ್ ಡೇವಿಡ್ ಅವರು ಫಿಟ್ ಆಗಿದ್ದಾರಾ ಇಲ್ಲವಾ ಎನ್ನುವ ಬಗ್ಗೆ ಇನ್ನೂ ಆರ್ ಸಿಬಿ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಟಿಮ್ ಡೇವಿಡ್ ಫಿಟ್ ಆಗದೇ ಇದ್ದರೆ ಅವರ ಬದಲಾಗಿ ಯಾರನ್ನು ಆಡಿಸಲಿದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.

rcb vs lsg playing xi josh hazlewood joins rcb tim david fitness concerns

ಜೋಶ್ ತಂದ ಹೇಜಲ್‌ವುಡ್!

ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮುನ್ನ ಭುಜದ ನೋವಿನಿಂದ ಆಡುವ ಬಳಗದಿಂದ ಹೊರಗುಳಿದಿದ್ದ ಜೋಶ್ ಹೇಜಲ್‌ವುಡ್, ಐಪಿಎಲ್ ಸ್ಥಗಿತದ ಬೆನ್ನಲ್ಲೇ ಆಸ್ಟ್ರೇಲಿಯಾಗೆ ವಾಪಸ್ ಹೋಗಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇರುವ ಕಾರಣ ಅವರು ವಾಪಸ್ ಬರುವ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು.

ಆದರೆ ಫಿಟ್ ಆಗಿರುವ ಅವರು ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಶನಿವಾರ ತಂಡವನ್ನು ಸೇರಿಕೊಂಡಿದ್ದು ಸೋಮವಾರ ಅಭ್ಯಾಸ ನಡೆಸಲಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಮಾತ್ರ ಎಲ್‌ಎಸ್‌ಜಿ ವಿರುದ್ಧ ಆಡಲಿದ್ದಾರೆ. ಇಲ್ಲವಾದಲ್ಲಿ ಲುಂಗಿ ಎಂಗಿಡಿ ಈಗಾಗಲೇ ತವರಿಗೆ ವಾಪಸ್ ಆಗಿರುವ ಕಾರಣ ಶ್ರೀಲಂಕಾದ ವೇಗಿ ನುವಾನ್ ತುಷಾರ ಆಡಬಹುದು.

ಟಿಮ್ ಡೇವಿಡ್ ಅನುಮಾನ

ಇನ್ನು ತಂಡದ ಪ್ರಮುಖ ಬ್ಯಾಟರ್ ಟಿಮ್ ಡೇವಿಡ್ ಸ್ನಾಯು ಸೆಳೆತದಿಂದ ಬಳಲಿದ್ದರು. ಅವರು ಕೂಡ ಮಂಗಳವಾರದ ವೇಳೆಗೆ ಫಿಟ್ ಆಗುವುದು ಅನುಮಾನವಾಗಿದೆ. ಅವರ ಬದಲಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಆಡುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿ ಎಸ್‌ಆರ್ ಎಚ್ ವಿರುದ್ಧ ಆಡಿದ್ದ ತಂಡವೇ ಕಣಕ್ಕಿಳಿಯಲಿದೆ.

ನಾಯಕ ರಜತ್ ಪಟಿದಾರ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಫಾರ್ಮ್‌ಗೆ ಮರಳಬೇಕಿದೆ. ಇಲ್ಲವಾದಲ್ಲಿ ಆರ್ ಸಿಬಿ ಮಧ್ಯಮ ಕ್ರಮಾಂಕದಲ್ಲಿ ಕಷ್ಟಪಡಬೇಕಾಗುತ್ತದೆ. ರೊಮಾರಿಯೋ ಶೆಫರ್ಡ್ ಫಿನಿಷರ್ ಸ್ಥಾನದಲ್ಲಿ ಅಬ್ಬರಿಸಿದರೆ ಆರ್ ಸಿಬಿ ಗೆಲುವು ಸುಲಭವಾಗಲಿದೆ.

ಆರ್ ಸಿಬಿ ಸಂಭಾವ್ಯ ಆಡುವ ಬಳಗ

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್. (ಸುಯಾಶ್ ಶರ್ಮಾ; ಬದಲೀ ಆಟಗಾರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+