RCB vs LSG: ಆರ್‌ಸಿಬಿ-ಎಲ್‌ಎಸ್‌ಜಿ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ: ಹವಾಮಾನ ಇಲಾಖೆ ಹೇಳೋದೇನು?

RCB Vs LSG IPL 2026: ಲಕ್ನೋದ ಏಕನಾ ಸ್ಟೇಡಿಯಂದಲ್ಲಿ ಗುರುವಾರ (ಮೇ 7) ನಡೆಯುವ ರೋಚಕ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಲಕ್ನೋದಲ್ಲಿಂದು ಹಗಲಿನ ವೇಳೆ ಮಳೆಯಾಗುವ ಸಂಭವ ಶೇಕಡ 55ರಷ್ಟಿದೆ. ಪ್ರಸ್ತುತ ತಾಪಮಾನವು 29°C ಇದ್ದು, ರಾತ್ರಿಯ ವೇಳೆಗೆ ಮಳೆಯ ಸಂಭವ ಶೇಕಡ 10ರಷ್ಟು ಇರಲಿದೆ. ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪರಿಣಾಮ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು ಎನ್ನಲಾಗುತ್ತಿದೆ.

RCB vs LSG IPL 2026 Weather Report Will Rain Interrupt HighVoltage Clash at Ekana Cricket Stadium

ತುಂತುರು ಮಳೆಯಾಗುವ ಸಾಧ್ಯತೆ

ಸಂಜೆ 7 ರಿಂದ 8 ಗಂಟೆಯ ನಡುವೆ ಹಗುರವಾಗಿ ತುಂತುರು ಮಳೆಯಾಗುವ ಸಾಧ್ಯತೆಯಿದ್ದು, ಇದು ಟಾಸ್ ಅಥವಾ ಪಂದ್ಯದ ಆರಂಭಕ್ಕೆ ಸ್ವಲ್ಪ ಅಡ್ಡಿಪಡಿಸಬಹುದು. ಆದರೆ ರಾತ್ರಿ 8 ಗಂಟೆಯ ನಂತರ ಪರಿಸ್ಥಿತಿ ಸುಧಾರಿಸಲಿದ್ದು, 10 ಗಂಟೆ ವೇಳೆಗೆ ಮಳೆಯ ಇರುವುದಿಲ್ಲ. ಪಂದ್ಯದ ಆರಂಭದಲ್ಲಿ ತಾಪಮಾನ 33°C ಇರಲಿದ್ದು, ಅಂತ್ಯದ ವೇಳೆಗೆ 22°Cಗೆ ಇಳಿಯಲಿದೆ ಎಂದು ತಿಳಿಸಿದೆ.

ಏಕಾನಾ ಕ್ರೀಡಾಂಗಣದ ಪಿಚ್ ಈ ಸೀಸನ್‌ನಲ್ಲಿ ಬ್ಯಾಟರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಇದು ಸ್ಲೋ ಪಿಚ್ ಆಗಿರುವುದರಿಂದ ಸ್ಪಿನ್ನರ್‌ಗಳು ಮತ್ತು ಸ್ಲೋ ಬೌಲರ್‌ಗಳಿಗೆ ಹೆಚ್ಚಿನ ನೆರವಾಗಲಿದೆ. ಈ ಮೈದಾನದಲ್ಲಿ ಸರಾಸರಿ ಮೊತ್ತ 155 ರನ್ ಆಗಿದ್ದು, 170ಕ್ಕೂ ಅಧಿಕ ರನ್ ಗಳಿಸಿದರೆ ಅದು ಗೆಲುವಿನ ಮೊತ್ತವಾಗಬಹುದು. ಇಬ್ಬನಿಯ ಕಾರಣದಿಂದ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

ಎಕ್ನೋ ಸೂಪರ್ ಜೈಂಟ್ಸ್‌ ತಂಡವು 9 ಪಂದ್ಯಗಳಲ್ಲಿ ಕೇವಲ 2 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಮತ್ತೊಂದೆಡೆ 9 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ರನ್‌ರೇಟ್ ಆಧಾರದ ಮೇಲೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಒಟ್ಟಾರೆಯಾಗಿ ಹಗುರ ಮಳೆಯ ಅಡ್ಡಿಯ ನಡುವೆಯೂ ಪೂರ್ಣ ಪ್ರಮಾಣದ ಪಂದ್ಯ ನಡೆಯುವ ನಿರೀಕ್ಷೆಯಿದೆ.

ಐಪಿಎಲ್ 2026ರಲ್ಲಿ ಬ್ಯಾಟರ್‌ಗಳಿಗೆ ಅತ್ಯಂತ ಸವಾಲಾಗಿರುವ ಮೈದಾನಗಳಲ್ಲಿ ಏಕಾನಾ ಕ್ರೀಡಾಂಗಣ ಕೂಡ ಒಂದು. ಇಲ್ಲಿನ ಕಪ್ಪು ಮಣ್ಣಿನ ಪಿಚ್ ಸಾಂಪ್ರದಾಯಿಕವಾಗಿ ನಿಧಾನಗತಿಯಿಂದ ಕೂಡಿದ್ದು, ಸ್ಪಿನ್ನರ್‌ಗಳಿಗೆ ಮತ್ತು ಮಧ್ಯಮ ವೇಗಿಗಳಿಗೆ ಹೆಚ್ಚಿನ ನೆರವಾಗಲಿದೆ. ಒಂದು ವೇಳೆ ಮೋಡ ಕವಿದ ವಾತಾವರಣವಿದ್ದರೆ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಮೊಹಮ್ಮದ್ ಶಮಿ ಹಾಗೂ ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಹೊಸ ಚೆಂಡಿನಲ್ಲಿ ಸ್ವಿಂಗ್ ದಾಳಿಗೆ ಹೆಚ್ಚು ನೆರವಾಗುವ ಸಾಧ್ಯತೆಯಿದೆ.

ಇಂದಿನ ಪಂದ್ಯದಲ್ಲಿ ಗೆದ್ದರೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 14 ಅಂಕಗಳನ್ನು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ತಮ್ಮ ಅತ್ಯುತ್ತಮ ನೆಟ್ ರನ್ ರೇಟ್ (+1.420) ಆಧಾರದ ಮೇಲೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಿಂದಿಕ್ಕಿ ಮೊದಲದ ಸ್ಥಾನಕ್ಕೇರುವ ಅವಕಾಶ ಆರ್‌ಸಿಬಿಗಿದೆ. ಮತ್ತೊಂದೆಡೆ ಕೇವಲ ಎರಡು ಜಯದೊಂದಿಗೆ ಅಂಕಪಟ್ಟಿಯ ಕೊನೆಯಲ್ಲಿರುವ ಲಕ್ನೋ ತಂಡಕ್ಕೆ ಇದು ಕೇವಲ ಪಂದ್ಯವಲ್ಲ, ಅವರ ವೃತ್ತಿಪರ ಗೌರವದ ಪಂದ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+