RCB Vs DC: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣಗಳು
RCB Vs DC: ಐಪಿಎಲ್ 2025ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿತು. ಅದೂ.. ತವರು ಅಂಗಳ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸೋಲು ಕಂಡಿದೆ. ಇದಕ್ಕೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ 163 ರನ್‌ಗಳನ್ನು ಕಲೆಹಾಕುವ ಮೂಲಕ 164 ಸಾಧಾರಣ ಗುರಿ ನೀಡಿತು. ಈ ಗುರಿಯನ್ನು ಡೆಲ್ಲಿಯು ಸುಲಭವಾಗಿ ತಲುಪಿ ಗೆದ್ದು ಬೀಗಿತು.

ಆರಂಭದಲ್ಲೇ ರನ್‌ಗಳ ಸುರಿಮಳೆಯನ್ನೇ ಹರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅವರು ಡೆಲ್ಲಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಆದರೆ, ಸಾಲ್ಟ್ ರನ್ ಔಟ್ ಮಾಡಿದ ಡೆಲ್ಲಿ ರನ್‌ಗಳಿಗೆ ಕಡಿವಾಣ ಹಾಕಲು ಮುಂದಾಯಿತು. ಈ ವೇಳೆ ಆರ್‌ಸಿಬಿ 4 ಓವರ್‌ಗಳಿಗೆ ಮುಗಿಯುವ ವೇಳೆಗೆ 1 ವಿಕೆಟ್ ನಷ್ಟಕ್ಕೆ 62ರನ್ ಕಲೆಹಾಕಿತ್ತು.
ಸಾಲ್ಟ್ 3 ಸಿಕ್ಸ್, 4 ಬೌಂಡರಿಗಳ ಸಹಿತ 37 ರನ್‌ಗಳನ್ನು ಕಲೆಹಾಕಿ ರನ್ ಔಟ್ ಆದರು. ಬಳಿಕ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಆಟ ಮುಂದುವರೆಸಿದ ಕಾರಣ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಬಳಿಕ ಬಂದವರೆಲ್ಲ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ತೆರಳಿದರು. ಇನ್ನು ನಿಗಮ್ ವಿರಾಟ್ ಅವರನ್ನು ಔಟ್ ಮಾಡಿದರು. 14 ಎಸೆತಗಳಲ್ಲಿ 22 ರನ್ ಗಳಿಸಿದ ನಂತರ ಔಟಾದರು.
ಕೊನೆಗೆ ಟೀಂ ಡೆವಿಡ್ 20 ಬಾಲ್‌ಗಳಿಗೆ 37 ರನ್‌ಗಳನ್ನು ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಆರ್‌ಸಿಬಿಯು ಆರಂಭದ ಮೂರು ಓವರ್‌ಗಳಲ್ಲಿ ಗಳಿಸಿದ ರನ್‌ಗಳನ್ನು ಗಮನಿಸಿದ್ರೆ, 200ರ ಗಡಿ ದಾಡಿಸುವ ಭರವಸೆ ಇತ್ತು. ಆದರೆ ಇಲ್ಲಿವರೆಗೂ ಹೋಗುವುದಕ್ಕೆ ಬಿಡದ ಡೆಲ್ಲಿ ಬೌಲರ್‌ಗಳು ಆರ್‌ಸಿಬಿಯನ್ನು 163ಕ್ಕೆ ಕಟ್ಟಿಹಾಕಿದರು.
ಈ ಸುಲಭದ ಗುರಿಯನ್ನು ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ಗಳನ್ನು ಕಲೆಹಾಕುವ ಮೂಲಕ ಆರ್‌ಸಿಬಿ ವಿರುದ್ಧ ಗೆದ್ದು ಬೀಗಿತು. ಇದಕ್ಕೆ ಪ್ರಮುಖ ಕಾರಣ ಡೆಲ್ಲಿ ಪರ ಕನ್ನಡಿಗ ಕೆ.ಎಲ್ ರಾಹುಲ್ ಕಲೆಹಾಕಿದ ಬೃಹತ್ ರನ್‌ಗಳು. ಕೊನೆವರೆಗೂ ನಿಂತು ತಮ್ಮ ತಂಡವನ್ನು ಗೆಲ್ಲಿಸಿ ಇದು ನನ್ನ ಅಡ್ಡ, ನನ್ನ ಊರು, ನಮ್ಮದೆ ಹವಾ ಎನ್ನುವ ರೀತಿಯಲ್ಲಿ ಸಹ್ನೆ ಮಾಡುವ ಮೂಲಕ ಗಮನ ಸೆಳೆದರು.
ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳು
* ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಬರೀ 163 ರನ್ ಗಳಿಸಿತು. ಆರ್‌ಸಿಬಿ ಪರ ಬ್ಯಾಟ್ ಬೀಸಿ ಟಿಂ ಡೇವಿಡ್ ಅಜೇಯ 37 ರನ್ ಗಳಿಸಿದರೆ, ಫಿಲ್ ಸಾಲ್ಟ್ 37 ರನ್, ರಜತ್ ಪತಿದಾರ್ 25, ವಿರಾಟ್ ಕೊಹ್ಲಿ 22 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಾಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು.
* ಡೆಲ್ಲಿ ಪರ ಬ್ಯಾಟ್ ಬೀಸಿದ ಕನ್ನಡಿಗ ಕೆಎಲ್ ರಾಹುಲ್ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಾಹುಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಡಿಸಿ ತಂಡ ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಅದರಲ್ಲೂ ಕೆಎಲ್ ರಾಹುಲ್‌ಗೆ ಇದು ಹೋಂ ಗ್ರೌಂಡ್ ಇದೇ ಆಗಿದ್ದು, ಈ ಹಿನ್ನೆಲೆ ಇಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
* ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೈಚೆಲ್ಲಿದ್ದು, ಕೂಡ ಸೋಲಿಗೆ ಕಾರಣವಾಗಿದೆ. ಒಂದು ಚಾನ್ಸ್ ಸಿಕ್ಕಿದ್ದನ್ನ ಸರಿಯಾಗಿ ಉಪಯೋಗಿಸಿಕೊಂಡ ಕೆಎಲ್ ರಾಹುಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಡೆಲ್ಲಿ ತಂಡದ ಗೆಲುವಿಗೆ ನೆರವಾದರು.
* ಸಾಮಾನ್ಯವಾಗಿ ಮೊದಲಿನಿಂದಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಿದ ತಂಡವೇ ಹೆಚ್ಚು ಗೆಲುವು ಸಾಧಿಸಿರುವ ಉದಾಹರಣೆಗಳಿವೆ. ಆದ್ದರಿಂದ ಆರ್‌ಸಿಬಿ ಟಾಸ್ ಸೋತಿದ್ದು ಕೂಡ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಬಹುದು. ಅದರಲ್ಲೂ ಆರ್‌ಸಿಬಿಗೆ ಇದು ಹೋಂ ಪಿಚ್ ಆಗಿದ್ದು, ಇಲ್ಲಿ ಸತತವಾಗಿ ಸೋಲನುಭವಿಸುತ್ತಲೇ ಬಂದಿರುವುದು ಅಸಮಾಧಾನಕರ ವಿಚಾರವಾಗಿದೆ.












Click it and Unblock the Notifications