RCB VS CSK: ಆರ್‌ಸಿಬಿ & ಚೆನ್ನೈ ಮ್ಯಾಚ್ ಕ್ಯಾನ್ಸಲ್ ಆಗುತ್ತಾ?
ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ಈಗ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗುತ್ತೆ ಅಂತಾ ಕಾಯುತ್ತಿದ್ದಾರೆ. ಬೆಂಗಳೂರು ಐಪಿಎಲ್ ತಂಡ ಆರ್‌ಸಿಬಿ ಪಾಲಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು, ಎಲ್ಲರೂ ಶುಭ ಸುದ್ದಿ ಕೇಳಲು ಕಾಯುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಆರ್‌ಸಿಬಿ ಅಭಿಮಾನಿಗಳಿಗೆ ಮಳೆ ಕೆಟ್ಟ ಸುದ್ದಿ ನೀಡುತ್ತಿದೆ!
ಹೌದು, ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯ ಚೆನ್ನೈ ವಿರುದ್ಧ ಆಡಲಿದೆ. ಈ ಪಂದ್ಯವನ್ನ ಗೆದ್ದರೆ ಮಾತ್ರ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್ ಹೋಗುವ ಕನಸು ನನಸಾಗಲಿದೆ. ಅಕಸ್ಮಾತ್ ಆರ್‌ಸಿಬಿ ಬೆಂಗಳೂರು ತಂಡ ಈ ಮ್ಯಾಚ್ ಸೋತರೆ, ಆ ಕ್ಷಣವೇ ಆರ್‌ಸಿಬಿ ಕನಸು ಚೂರು ಚೂರು ಆಗಲಿದೆ. ಅದು ಬಿಡಿ ಅಕಸ್ಮಾತ್ ಮಳೆ ಬಂದು, ಮ್ಯಾಚ್ ನಡೆಯದೇ ಇದ್ದರು ಕೂಡ ಆರ್‌ಸಿಬಿ ತಂಡ ಹೊರ ಬೀಳಲಿದೆ. ಪರಿಸ್ಥಿತಿ ಹೀಗಿದ್ದಾಗ, ಆರ್‌ಸಿಬಿ ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಸಿಗುತ್ತಿದೆ. ಇದು ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಾದ್ರೆ ಬೆಂಗಳೂರಲ್ಲಿ ಭರ್ಜರಿ ಮಳೆ ಬಂದು ಆರ್‌ಸಿಬಿ & ಚೆನ್ನೈ ಮ್ಯಾಚ್ ನಿಲ್ಲುತ್ತಾ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

1 ವಾರದಿಂದ ನಿರಂತರ ಮಳೆ
ಇದೇ ಮೇ 18ಕ್ಕೆ ಆರ್‌ಸಿಬಿ ಮತ್ತು ಚೆನ್ನೈ ನಡುವೆ ನಮ್ಮ ಬೆಂಗಳೂರಿನಲ್ಲಿ ಪಂದ್ಯ ಕೂಡ ನಡೆಯಲಿದೆ. ಆದ್ರೆ ಬೆಂಗಳೂರಿನಲ್ಲಿ ಕಳೆದ 1 ವಾರದಿಂದ ನಿರಂತರವಾಗಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಮಳೆ ಭಯ ಕಾಡುತ್ತಲೇ ಇತ್ತು, ಇದೀಗ ಮತ್ತೆ ಅಂತಹದ್ದೇ ಸುದ್ದಿ ಸಿಗುತ್ತಿದೆ. ಆರ್‌ಸಿಬಿ ಮತ್ತು ಚೆನ್ನೈ ಮ್ಯಾಚ್ ನಡೆಯಲಿರುವ ಮೇ 18ರ ಶನಿವಾರ ಭರ್ಜರಿ ಮಳೆ ಬೀಳುವ ಭಯ ಆವರಿಸಿದೆ. ಹವಾಮಾನ ತಜ್ಞರು ಈ ಬಗ್ಗೆ ಮುನ್ಸೂಚನೆ ನೀಡಿದ್ದು, ಅಭಿಮಾನಿಗಳು ಕೂಡ ಚಿಂತೆಯಲ್ಲಿ ಮುಳುಗಿದ್ದಾರೆ.
#RCBvsCSK #RCBvCSK Early predictions of weather conditions during the game at Chinnaswamy Stadium, Bengaluru #BengaluruRains #BangaloreRains
— Karnataka Weather (@Bnglrweatherman) May 13, 2024
This is only for RCB fans
Favorable conditions for widespread moderate to heavy rains in the city during the match day on 18th May
The… pic.twitter.com/93RJUP8eIE
ಗೆದ್ದೇ ಗೆಲ್ಲುತ್ತೆ ಬೆಂಗಳೂರು ತಂಡ!
ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಎಲ್ಲೆಲ್ಲೂ ಆರ್‌ಸಿಬಿ ತಂಡ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದೆ. ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಪಂದ್ಯ ನೋಡಲು ಕಾಯುತ್ತಿರುವ ಆರ್‌ಸಿಬಿ ಫ್ಯಾನ್ಸ್ ಎಲ್ಲೆಲ್ಲೂ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹಾಗೇ ಟಿಕೆಟ್‌ಗೆ ಕೂಡ ಭಾರಿ ಡಿಮ್ಯಾಂಡ್ ಇದೆ. ಆದರೆ ಮಳೆ ಮಾತ್ರ ಬರಬಾರದು ಅಷ್ಟೇ!












Click it and Unblock the Notifications