RCB Vs CSK: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಪರ ಸ್ಫೋಟಕ ಬ್ಯಾಟರ್ ಎಂಟ್ರಿ
RCB Vs CSK: ಐಪಿಎಲ್ 2025ರ 52ನೇ ಹೈವೋಲ್ಟೇಜ್ ಪಂದ್ಯ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ನಡೆಯಲಿದೆ. ಇನ್ನು ಆರ್‌ಸಿಬಿ ಪರ ಸ್ಫೋಟಕ ಬ್ಯಾಟರ್ ಕಣಕ್ಕಿಳಿಯಲಿದ್ದು, ಈ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದ ಸಮಯ, ಸ್ಥಳ ಹಾಗೂ ಎರಡು ತಂಡಗಳಲ್ಲಿ ಯಾರೆಲ್ಲಾ ಆಟಗಾರರು ಇರಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂದು ಅಂದರೆ ಶನಿವಾರ ಆರ್‌ಸಿಬಿ ಹಾಗೂ ಚೆನ್ನೈ ನಡುವೆ ಹೈವೋಲ್ಟೇಜ್ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಪಂದ್ಯ ವೀಕ್ಷಣೆ ಮಾಡಲು ಅಭಿಮಾನಿಗಳ ದಂಡೇ ಬೆಂಗಳೂರಿನತ್ತ ಹರಿದುಬರುತ್ತಿದೆ. ಯಾಕೆಂದ್ರೆ ಈ ಎರಡು ತಂಡಗಳ ಸೆಣೆಸಾಟವನ್ನು ನೋಡೋದೇ ಒಂಥರಾ ಮಜಾ ಇರುತ್ತದೆ. ಅಲ್ಲದೆ, ರೋಮಂಚನಾಕಾರಿಯೂ ಆಗಿರುತ್ತದೆ.

ಆರ್‌ಸಿಬಿಯು ಈಗಾಗಲೇ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಮೂರರಲ್ಲಿ ಸೋಲನುಭವಿಸಿದೆ. ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ತವರು ಮೈದಾನದಲ್ಲೇ ಸೋಲನುಭವಿಸಿತ್ತು. ಇನ್ನು ಇದೇ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಒಂದು ಪಂದ್ಯ, ತವರಿನಾಂದಾಚೆ ಆಡಿರುವ ಎಲ್ಲಾ 6 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನದಲ್ಲಿದೆ. ಇಂದು ತವರಿನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಮೇಲೆರುವ ಭರವಸೆಯಲ್ಲಿ ಆರ್‌ಸಿಬಿ ಇದೆ.
ಮತ್ತೊಂದೆಡೆ ಇಂದಿನ ಆರ್‌ಸಿಬಿ ವಿರುದ್ಧದ ಪಣದ್ಯದಲ್ಲಿ ಒಂದು ವೇಳೆ ಸಿಎಸ್‌ಕೆ ಗೆದ್ದರೂ ಏನು ಪ್ರಯೋಜನಾ ಇಲ್ಲ. ಯಾಕಂದ್ರೆ ಈಗಾಗಲೇ ಆ ತಂಡ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಾಗಿದೆ. ಆದರೆ ಆರ್‌ಸಿಬಿ ಮಾತ್ರ ಈ ಪಂದ್ಯದಲ್ಲಿ ಗೆಲ್ಲುವುದು ತುಂಬಾ ಮುಖ್ಯವಾಗಿದೆ. ಆರಂಭದಿಂದಲೂ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿರುವ ಆರ್‌ಸಿಬಿ ಸಿಎಸ್‌ಕೆ ಮಣಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದರಲ್ಲೂ ಆರ್‌ಸಿಬಿ ಪರ ಸ್ಫೋಟಕ ಬ್ಯಾಟರ್ ಕಣಕ್ಕಿಳಿಯಲಿದ್ದಾರೆ.
ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಫಿಲಿಪ್ ಸಾಲ್ಟ್ ಕಳೆದ ಪಂದ್ಯದಿಂದ ಅವರು ಗಾಯದಿಂದಾಗಿ ಹೊರಗುಳಿದಿದ್ದು, ಆಗ ಅವರ ಸ್ಥಾನವನ್ನು ಸ್ಪೋಟಕ ಆಲ್‌ರೌಂಡರ್ ಬೆಥೆಲ್ ಅವರು ತುಂಬಿದ್ದರು. ಇಂದು ಸಿಎಸ್‌ಕೆ ವಿರುದ್ಧ ಕೂಡ ಅವರೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆರ್‌ಸಿಬಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಲೈನ್ ಅಫ್ ಉತ್ತಮವಾಗಿದ್ದು, ಚೆನ್ನೈ ಮಣಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ.
ಆರ್‌ಸಿಬಿ ಪರ ಬೆಥೆಲ್ ವಿರಾಟ್ ಕೊಹ್ಲಿ ಅವರ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಇಂದು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡುವ ಕಾತರದಲ್ಲಿದ್ದಾರೆ. ಇನ್ನು ಇಂದಿನ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಿಚ್ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಅದರಲ್ಲೂ ಮಳೆ ಬಂದರೆ ಇನ್ನೂ ಹೆಚ್ಚೂ ಅನುಕೂಲ ಆದಂತಾಗಲಿದೆ. ಅಲ್ಲದೆ, ಚೇಸ್ ಮಾಡಿದ ತಂಡವೇ ಹೆಚ್ಚು ಗೆದ್ದಿರುವ ಉದಾಹರಣೆಗಳಿವೆ. ಆದ್ದರಿಂದ ಟಾಸ್ ಮೇಲೆಯೂ ಇಂದಿನ ಪಂದ್ಯ ನಿಂತಿಗೆ ಎಂದು ಹೇಳಲಾಗುತ್ತದೆ.
* ಆರ್‌ಸಿಬಿ ಸಂಭಾವ್ಯ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್/ಫಿಲ್ ಸಾಲ್ಟ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ದೇವದತ್ ಪಡಿಕ್ಕಲ್ (ಇಂಪ್ಯಾಕ್ಟ್ ಪ್ಲೇಯರ್)
* ಸಿಎಸ್‌ಕೆ ಸಂಭಾವ್ಯ ತಂಡ: ಎಂಎಸ್ ಧೋನಿ (ನಾಯಕ, ವಿ.ಕೀ.), ಶೇಖ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡಾ, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್ (ಇಂಪ್ಯಾಕ್ಟ್ ಪ್ಲೇಯರ್)
ಇಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30 ರಿಂದ ಆರಂಭವಾಗಲಿದೆ. ಇದಕ್ಕೂ ಮೊದಲು ಸಂಜೆ 7 ಗಂಟೆಗೆ ಟಾಸ್ ಆಗಲಿದೆ. ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಸ್ಟಾರ್‌ನಲ್ಲಿ ವೀಕ್ಷಣೆ ಮಾಡಬಹುದು.












Click it and Unblock the Notifications